ಡಿಕೆಶಿ ಪದಗ್ರಹಣ ; ಬ್ರಹ್ಮಾವರ ಬ್ಲಾಕ್ ಡಿಜಿಟಲ್ ಯೂತ್ ಪೂರ್ವಭಾವಿ ಸಭೆ
ಉಡುಪಿ: ಡಿಕೆ ಶಿವಕುಮಾರ್ ಅವರ ಜುಲೈ 2 ರಂದು ನಡೆಯುವ ಪದಗ್ರಹಣ ಕಾರ್ಯಕ್ರಮದ ಪೂರ್ವಭಾವಿಯಾಗಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಘಟಕದ ಡಿಜಿಟಲ್ ಯೂತ್ ಸಾಮಾಜಿಕ ಜಾಲತಾಣದ ಸಭೆಯು ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಅವರ ನೇತೃತ್ವದಲ್ಲಿಇತ್ತೀಚೆಗೆ ಜರುಗಿತು.
ಇದೇ ವೇಳೆ ಮಾತನಾಡಿದ ಮಾಜಿ ಶಾಸಕ ಯು ಆರ್ ಸಭಾಪತಿ ಜುಲೈ 2 ರಂದು ಕೆಪಿಸಿಸಿ ಕಚೇರಿಯಲ್ಲಿ ನೂತನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಪದಗ್ರಹಣ ಸಮಾರಂಭ ನಡೆಯಲಿದ್ದು ಎಲ್ಲಾ ಗ್ರಾಮ ಪಂಚಾಯತಿ ಮತ್ತು ಬ್ಲಾಕ್ ಮತ್ತು ವಾರ್ಡ್ ಗಳಲ್ಲಿ 10 ಲಕ್ಷಕ್ಕೂ ಅಧಿಕ ಜನರು ವರ್ಚುವಲ್ ಕಾನ್ಫೆರನ್ಸ್ ಮೂಲಕ ನೇರಪ್ರಸಾರದಲ್ಲಿ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಈ ಮೂಲಕ ಕಾಂಗ್ರೆಸ್ ಪಕ್ಷ ರಾಜ್ಯದಲ್ಲ ಮತ್ತೆ ಕಟ್ಟಿಬೆಳೆಸಲು ಹೊಸ ಹುರುಪು ನೀಡಿದಂತೆ ಆಗಿದೆ ಎಂದರು.
ಈ ವೇಳೆ ಮಾತನಾಡಿದ ಉಡುಪಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಉಸ್ತುವಾರಿ ಪ್ರಖ್ಯಾತ್ ಶೆಟ್ಟಿ ಡಿ ಕೆ ಶಿವಕುಮಾರ್ ಅಧ್ಯಕ್ಷರಾಗಿ ಆಯ್ಕೆಯಾದ ದಿನದಿಂದ ಕಾರ್ಯಕರ್ತರಲ್ಲಿ ಹೊಸ ಹುರುಪು ಬಂದಿದ್ದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿನ ಮುನ್ಸೂಚನೆಯಾಗಿದೆ. ಡಿಕೆ ಶಿವಕುಮಾರ್ ಅವರು ಪದಗ್ರಹಣ ಸಮಾರಂಭ ಪ್ರತಿಯೊಬ್ಬ ಕಾಂಗ್ರೆಸಿಗರ ಪದಗ್ರಹಣ ಕಾರ್ಯಕ್ರಮವಾಗಬೇಕು ಈ ನಿಟ್ಟಿನಲ್ಲಿ ಯುವಕರು ಹೆಚ್ಚಿನ ರೀತಿಯಲ್ಲಿ ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಶಾಂತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮಾಜಿ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಕಾಂಗ್ರೆಸ್ ನಾಯಕರಾದ ವೆರೋನಿಕಾ ಕರ್ನೆಲಿಯೊ, ನಿತ್ಯಾನಂದ ಕೆಮ್ಮಣ್ಣು, ಸೂರ್ಯ ಸಾಲಿಯಾನ್, ಪ್ರಶಾಂತ್ ಸುವರ್ಣ, ರಮೇಶ್ ಕರ್ಕೇರಾ, ಸತೀಶ್ ಉಪ್ಪೂರು, ತಾಜೂದ್ದೀನ್, ಯುವ ಕಾಂಗ್ರೆಸಿನ ರಾಘವೆಂದ್ರ ಶೆಟ್ಟಿ, ಡಿಜಿಟಲ್ ಯೂತ್ ಇದರ ವಿಘ್ನೇಶ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.