Home Mangalorean News Kannada News ಡಿಕೆಶಿ ಮೇಲೆ ಐಟಿ ದಾಳಿ ಮೋದಿ ಸರಕಾರದ ವ್ಯವಸ್ಥಿತ ಪಿತೂರಿ; ಎಮ್ ಎ ಗಫೂರ್

ಡಿಕೆಶಿ ಮೇಲೆ ಐಟಿ ದಾಳಿ ಮೋದಿ ಸರಕಾರದ ವ್ಯವಸ್ಥಿತ ಪಿತೂರಿ; ಎಮ್ ಎ ಗಫೂರ್

Spread the love

ಡಿಕೆಶಿ ಮೇಲೆ ಐಟಿ ದಾಳಿ ಮೋದಿ ಸರಕಾರದ ವ್ಯವಸ್ಥಿತ ಪಿತೂರಿ; ಎಮ್ ಎ ಗಫೂರ್

ಉಡುಪಿ: ರಾಜ್ಯದ ಇಂಧನ ಸಚಿವ ಡಿಕೆ ಶಿವಕುಮಾರ್ ಅವರ ಮನೆ ಹಾಗೂ ಸಂಸ್ಥೆಗಳ ಮೇಲೆ ನಡೆದಿರುವ ಐಟಿ ಧಾಳಿಯ ಹಿಂದೆ ಸ್ಪಷ್ಟ ಷ್ಯಡ್ಯಂತ್ರ ಹಾಗೂ ಕೇಂದ್ರ ಸರಕಾರದ ಪಿತೂರಿ ಅಡಗಿದ್ದು, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕೇಂದ್ರಿಯ ತನಿಖಾ ಸಂಸ್ಥೆಗಳನ್ನು ತನ್ನ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೋಲೆ ಮತ್ತು ಬಿಜೆಪಿಯ ಹತಾಶ ಮನೋಭಾವವನೆಯನ್ನು ತೋರಿಸುತ್ತದೆ ಎಂದು ಕೆಪಿಸಿಸಿ ನಾಯಕ ರಾಜ್ಯ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಎಮ್ ಎ ಗಫೂರ್ ಹೇಳೀದ್ದಾರೆ.

ಅವರು ಪ್ರೆಸ್ ಕ್ಲಬ್ಬಿನಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ ಕೇಂದ್ರದ ಬಿಜೆಪಿ ಸರಕಾರ ತನ್ನ ರಾಜಕೀಯ ಷ್ಯಡ್ಯಂತ್ರಕ್ಕೆ ಆದಾಯ ತೆರಿಗೆ ಇಲಾಖೆಯನ್ನು ಬಳಿಸಿಕೊಂಡಿದ್ದು, ನಿಯಮ ಉಲ್ಲಂಘಿಸಿ ಧಾಳಿಗೆ ಕೇಂದ್ರದ ಸಿಆರ್ ಪಿಎಫ್ ಪಡೆಯನ್ನು ಬಳಸಿಕೊಂಡಿರುವುದು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಆದಾಯ ತೆರಿಗೆ ಇಲಾಖೆಗೆ ದೇಶದ ಯಾವುದೇ ಭಾಗದಲ್ಲಿ ದಾಳಿ ನಡೆಸಲು ಮುಕ್ತ ಅವಕಾಶವಿದ್ದು, ವ್ಯವಸ್ಥಿತ ರೀತಿಯಲ್ಲಿ ತನ್ನ ಆದಾಯದ ತೆರಿಗೆಯನ್ನು ಕಟ್ಟಿಕೊಂಡು ಬಂದಿರುವ ಡಿ ಕೆ ಶಿವಕುಮಾರ್ ಗುಜರಾತಿನ 45 ಜನ ಶಾಸಕರು ಕರ್ನಾಟಕದಲ್ಲಿ ಪ್ರವಾಸದಲ್ಲಿದ್ದ ವೇಳೆ ಅವರಿಗೆ ಆತಿಥ್ಯ ನೀಡಿದ ಕಾರಣ ನೀಡಿ ಅವರ ಮನೆ ಹಾಗೂ ಸಂಸ್ಥೆಗಳನ್ನು ಗುರಿಯಾಗಿಸಿ ನಡೆಸಿರುವ ದಾಳಿ ಸಂಪೂರ್ಣ ದ್ವೇಷದ ರಾಜಕೀಯವನ್ನು ತೋರಿಸುತ್ತದೆ ಎಂದರು.

ದೇಶದಲ್ಲಿ ಆಪರೇಶನ್ ಕಮಲಕ್ಕೆ ಈ ಹಿಂದೆ ಕರ್ನಾಟಕದ ಬಿಜೆಪಿ ಮೊದಲ ನಾಂದಿಯನ್ನ ಹಾಕಿದ್ದು ಅದನ್ನೆ ಗುಜರಾತಿನಲ್ಲಿ ರಾಜ್ಯ ಸಭಾ ಸ್ಥಾನವನ್ನು ಗೆಲ್ಲುವ ಉದ್ದೇಶದಿಂದ ಕುದುರೆ ವ್ಯಾಪಾರ ನಡೆಸಲು ಮೋದಿ ಹೊರಟಿದ್ದಾರೆ. ಭೃಷ್ಟಾಚಾರ ನಿಯಂತ್ರಿಸುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ ಇಂದು ಭೃಷ್ಟಾಚಾರಕ್ಕೆ ನೇರ ಬೆಂಬಲ ನೀಡುತ್ತಿರುವುದು ಇದರಿಂದ ತಿಳಿಯುತ್ತದೆ.

ಈ ಹಿಂದೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಕೋಮು ದಳ್ಳುರಿಗೆ ಜನರನ್ನು ಬಲಿತೆಗೆದುಕೊಂಡಾಗ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಗುಜರಾತಿಗೆ ಕೇಂದ್ರದ ಪಡೆಗಳನ್ನು ಕಳುಹಿಸಿದಾಗ ಇದೇ ಮೋದಿ ಅವರಿಗೆ ರಾಜ್ಯದ ಪ್ರವೇಶಕ್ಕೆ ಅವಕಾಶ ನೀಡಿರಲಿಲ್ಲ ಆದರೆ ಇಂದು ಅದೇ ಮೋದಿ ವ್ಯತಿರಿಕ್ತವಾಗಿ ವರ್ತಿಸಿರುವುದರ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆಯನ್ನು ಮಾಡುತ್ತಿದ್ದಾರೆ ಎಂದರು. ಇಂತಹ ದಾಳಿಯ ಬಗ್ಗೆ ಜನ ಮೋದಿಯವರಿಂದ ಉತ್ತರ ಬಯಸುತ್ತಿದ್ದಾರೆ.  ಕಾಂಗ್ರೆಸ್ ನಾಯಕರನ್ನು ಬೆದರಿಸುವ ತಂತ್ರಕ್ಕೆ ನಾವು ಎಂದೂ ಕೂಡ ಬೆದರುವುದಿಲ್ಲ ಬದಲಾಗಿ ಮೋದಿಯ ದ್ವೇಷದ ರಾಜಕೀಯವನ್ನು ಜನರ ಮುಂದೆ ಕಾಂಗ್ರೆಸ್ ಕೊಂಡೊಯ್ಯಲಿದೆ ಎಂದರು.

ಜಿಲ್ಲಾ ಐಟಿ ಸೆಲ್ ಅಧ್ಯಕ್ಷ ವಿಶ್ವಾಸ್ ಶೆಟ್ಟಿ ಮಾತನಾಡಿ ವ್ಯವಸ್ಥಿತ ರೀತಿಯಲ್ಲಿ ಆದಾಯ ತೆರಿಗೆ ಕಟ್ಟಿಕೊಂಡು ಬಂದಿರುವ ಡಿಕೆಶಿ ಮನೆಗೆ ದಾಳಿ ನಡೆಸುವ ಇಲಾಖೆ ಕಳೆದ ಮೂರು ವರ್ಷಗಳಲ್ಲಿ ಮೂರು ಪಟ್ಟು ಆದಾಯವನ್ನು ಹೆಚ್ಚಿಸಿಕೊಂಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ತನ್ನ ಮಗಳ ಮದುವೆಯನ್ನ ಸುಮಾರು 300 ಕೋಟಿ ವೆಚ್ಚದಲ್ಲಿ ಮಾಡಿ ಜನಾರ್ಧನ ರೆಡ್ಡಿಯವರ ಮನೆಗಳ ಮೇಲೆ ಯಾಕೆ ಧಾಳಿ ಮಾಡುತ್ತಿಲ್ಲ. ರಾಜಕೀಯ ದ್ವೇಷದಿಂದ ಕೇಂದ್ರಿಯ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಇಂತಹ ದಾಳಿಗಳನ್ನು ಮಾಡಿದರೆ ಮುಂದೆ ಜನರು ಇದಕ್ಕೆ ತಕ್ಕ ಪಾಠವನ್ನು ಕಲಿಸುತ್ತಾರೆ ಎಂದರು.

ಯುವ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ವಿಘ್ನೇಶ್ ಕಿಣಿ ಮಾತನಾಡಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಉತ್ತಮ ಆಡಳಿತದೊಂದಿಗೆ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಸಹಿಸಲಾಗದ ಬಿಜೆಪಿ ಇಂತಹ ಕೆಟ್ಟ ರೀತಿಯ ಐಟಿ ದಾಳಿಯ ಮೂಲಕ ಜನರ ಮನಸ್ಸನ್ನು ಬೇರೆಡೆಗೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತಿದೆ. ಗುಜರಾತಿನ ಒಂದು ರಾಜ್ಯಸಭಾ ಸ್ಥಾನವನ್ನು ಗೆಲ್ಲುವ ಉದ್ದೇಶಕ್ಕಾಗಿ ಮೋದಿ ಮತ್ತು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದ್ದು, ಇಂತಹ ದ್ವೇಷದ ರಾಜಕಾರಣಕ್ಕೆ ಜನರು ಮುಂದೆ ಉತ್ತರಿಸುತ್ತಾರೆ ಎಂದರು.

ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ರಾಘವೇಂದ್ರ ಶೆಟ್ಟಿ ಕರ್ಜೆ, ಉಡುಪಿ ಬ್ಲಾಕ್ ಐಟಿ ಸೆಲ್ ಅಧ್ಯಕ್ಷ ನೀರಜ್ ಪಾಟೀಲ್ ಉಪಸ್ಥಿತರಿದ್ದರು.

 


Spread the love

Exit mobile version