ಡಿಕೆ ಶಿವಕುಮಾರ್ ಹುಟ್ಟು ಹಬ್ಬದ ಪ್ರಯುಕ ದಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ
ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ 55 ನೇ ಹುಟ್ಟು ಹಬ್ಬದ ಪ್ರಯುಕ್ತ ಇಂದು ದ.ಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬೃಹತ್ ರಕ್ತದಾನ ಶಿಬಿರ ಸಮಾರಂಭ ಸರ್ಕಾರದ ಕೋವಿಡ್ 19 ನಿಯಮಗಳ ಪಾಲನೆಯೊಂದಿಗೆ ಶುಕ್ರವಾರ ಹೈಲಾಂಡ್ ಹಾಸ್ಪಿಟಲ್ ಸಮೀಪದ ಜನತಾ ಲಂಚ್ ಹೊಂ ನಲ್ಲಿ ನಡೆಯಿತು.
ಕೋವಿಡ್ 19 ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯ ರಕ್ತನಿಧಿ ಕೇಂದ್ರ (Blood Bank)ಗಳಲ್ಲಿ ರಕ್ತದ ಸಂಗ್ರಹ ದಿನದಿಂದ ದಿನಕ್ಕೆ ತುಂಬಾ ಕಡಿಮೆಯಾಗುತ್ತಿದ್ದು, ನಗರದ ಆಸ್ಪತ್ರೆಯ ಬ್ಲಡ್ ಬ್ಯಾಂಕುಗಳು ಸೇರಿದಂತೆ ಜಿಲ್ಲೆಯ ಬಹುತೇಕ ಬ್ಲಡ್ ಬ್ಯಾಂಕ್‍ಗಳಲ್ಲಿದ್ದ ರಕ್ತದ ಸಂಗ್ರಹ ಖಾಲಿಯಾಗುತ್ತಿರುವುದು ಗಮನಿಸಿ ಮತ್ತು ಡಿ ಕೆ ಶಿವಕುಮಾರ್ ರವರ ಹುಟ್ಟುಹಬ್ಬವನ್ನು ಯಾವುದೇ ದುಂದವೆಚ್ಚ ಮಾಡದೇ ಜನರಿಗೆ ಉಪಯೋಗವಾಗುವ ರೀತಿಯಲ್ಲಿ ಮಾಡಿ ಎಂಬ ಅದೇಶದ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾದ ಮಿಥುನ್ ರೈಯರ ಅಧ್ಯಕ್ಷತೆಯಲ್ಲಿ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಶಿಬಿರದಲ್ಲಿ 100 ರಷ್ಟು ಕಾರ್ಯಕರ್ತರು ರಕ್ತದಾನ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಯುಟಿ ಖಾದರ್, ಐವನ್ ಡಿಸೋಜ, ಮಾಜಿ ಸಚಿವರಾದ ರಮನಾಥ ರೈ, ಮಾಜಿ ಶಾಸಕರಾದ ಜೆ ಆರ್ ಲೋಬೊ, ಮನಪಾ ಸದಸ್ಯರಾದ ಪ್ರವೀನ್ ಚಂದ್ರ ಆಳ್ವ, ಎಸಿ ವಿನಯರಾಜ್ , ನವೀನ್ ಡಿಸೊಜ, ರವೂಫ್ ಬಜಾಲ್, ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಸುಹೈಲ್ ಕಂದಕ್, ರೆಡ್ ಕ್ರೊಸ್ ಸಂಸ್ಥೆಯ ಪ್ರವೀನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಶಾಂತಲಾ ಗಟ್ಟಿ, ಯುವ ಕಾಂಗ್ರೆಸ್ ವಿಧಾನಸಭಾ ಅಧ್ಯಕ್ಷರಾದ ಮೆರಿಲ್ ರೆಗೊ, ಗಿರೀಶ್ ಆಳ್ವ, ಯು.ಟಿ ತೌಸಿಫ್, ಅಭಿನಂದನ್, ಜಿಲಾ ಪದಾಧಿಕಾರಿಗಳಾದ ಶಬೀರ್ ಕೆಂಪಿ, ಬಶೀರ್ ಪರ್ಲಡ್ಕ, NSUI ರಾಜ್ಯ ಕಾರ್ಯದರ್ಶಿ ರೂಪೇಶ್ ಉಪಸ್ಥಿತರಿದ್ದರು.