ಡಿಜಿಟಲ್ ಬೋರ್ಡ್ ಬದಲಿಗೆ ಟ್ರಾಫಿಕ್ ಸಿಗ್ನಲಿಗೆ ಆಧ್ಯತೆ ನೀಡಲು ಮನವಿ – ಸುಶೀಲ್ ನೊರೊನ್ಹ

Spread the love

ಡಿಜಿಟಲ್ ಬೋರ್ಡ್ ಬದಲಿಗೆ ಟ್ರಾಫಿಕ್ ಸಿಗ್ನಲಿಗೆ ಆಧ್ಯತೆ ನೀಡಲು ಮನವಿ – ಸುಶೀಲ್ ನೊರೊನ್ಹ

ಮಂಗಳೂರು: ನಂತೂರ್ ವ್ರತ್ತದಲ್ಲಿ ಡಿಜಿಟಲ್ ಬೋರ್ಡ್ ಅಳವಡಿಸಲು ಸಂಚಾರಿ ಪೊಲೀಸ್ ಇಲಾಖೆ ಮುಂದಾಗಿದ್ದು ಈ ವ್ರತ್ತದಲ್ಲಿ ಟ್ರಾಫಿಕ್ ಅವ್ಯವಸ್ಥೆಯಿಂದ ತನ್ನ ಜೀವವನ್ನು ಉಳಿಸಲು ಪರದಾಡುವ ವಾಹನ ಸವಾರರ ಗೋಳು ಹೇಳತೀರದು. ಇನ್ನು ಈ ವ್ರತ್ತದಲ್ಲಿ ನಿರಂತರ ಹಲವು ಜೀವಗಳು ಬಲಿಯಾಗಿದ್ದು ಈ ಸಂದರ್ಭದಲ್ಲಿ ಹಲವು ಸಂಘಟನೆಗಳು ತೀವ್ರ ಪ್ರತಿಭಟನೆ ನಡೆಸಿ ತಣ್ಣಗಾಗುವುದು ಸಾಮನ್ಯ.

ಈ ವ್ರತ್ತದಲ್ಲಿ ಅವೈಜ್ಞಾನಿಕ ವ್ಯವಸ್ಥೆ ಇದ್ದು ಎರಡು ಮೂರು ಸಲ ಅಳವಡಿಸಿದ ಟ್ರ್ಯಾಫಿಕ್ ಕಂಬಗಳನ್ನು ಬದಲಿಸಿ ಲಕ್ಷಾಂತರ ಹಣ ಖರ್ಚು ಮಾಡಿ ಇನ್ನೂ ಕೂಡ ವ್ಯವಸ್ಥೆ ಸರಿಪಡಿಸಲು ಆಗದಿರುವುದು ವಿಪರ್ಯಾಸ ಇನ್ನು ಡಿಜಿಟಲ್ ಬೋರ್ಡ್ ನೋಡಿ ಇನ್ನೂ ಹೆಚ್ಚಿನ ಅಪಘಾತ ಆಗುವ ಸಂಬವ ಹೆಚ್ಚು. ಆದರಿಂದ ಮೊದಲು ಟ್ರ್ಯಾಫಿಕ್ ಸಿಗ್ನಲ್ ವ್ಯವಸ್ಥೆಗೆ ಆಧ್ಯತೆ ನೀಡಿ ಜನಸಾಮಾನ್ಯರ ಜೀವ ಉಳಿಸಲು ಹಾಗೂ ವಾಹನ ಸಂಚಾರ ಸುಗಮ ಕಲ್ಪಿಸಿ ಆನಂತರ ಡಿಜಿಟಲ್ ಬೋರ್ಡ್ ಅಳವಡಿಸಲು ಪೋಲಿಸ್ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಜೆಡಿಎಸ್ ಪರವಾಗಿ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹ ವಿನಂತಿಸಿದ್ದಾರೆ.


Spread the love