Home Mangalorean News Kannada News ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಎಸ್.ಐ.ಓ ಆಗ್ರಹ

ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಎಸ್.ಐ.ಓ ಆಗ್ರಹ

Spread the love

ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡಲು ಸರ್ಕಾರಕ್ಕೆ ಎಸ್.ಐ.ಓ ಆಗ್ರಹ

ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ಏಕಾಏಕಿ ಡಿಪ್ಲೋಮಾ ಪರೀಕ್ಷೆಯನ್ನು ನಡೆಸಲು ಯೋಜಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಮತ್ತು ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ ಆದ್ದರಿಂದ ಡಿಪ್ಲೋಮಾ ಪರೀಕ್ಷೆಯನ್ನು ಮುಂದೂಡುವಂತೆ ಎಸ್.ಐ.ಓ ರಾಜ್ಯ ಸರಕಾರವನ್ನು ಆಗ್ರಹಿಸಿದೆ.

ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ನೀಡದೆ ರಾಜ್ಯದಲ್ಲಿ ಕೋರೊನಾ ಸೋಂಕಿನ ಹೆಚ್ಚಳದ ಸಂದರ್ಭದಲ್ಲಿ ಸರಕಾರ ಕೈಗೊಂಡಿರುವ ನಿರ್ಧಾರ ನಿಜಕ್ಕೂ ಅವೈಜ್ಞಾನಿಕವಾಗಿದೆ.

ಕೂಡಲೇ ತಾಂತ್ರಿಕ ಶಿಕ್ಷಣ ಇಲಾಖೆ ಮತ್ತು ತಾಂತ್ರಿಕ ಶಿಕ್ಷಣ ಪರೀಕ್ಷಾ ಮಂಡಳಿಯ ಜೊತೆ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಮಧ್ಯಸ್ಥಿಕೆ ವಹಿಸಿ ಈ ನಿರ್ಧಾರವನ್ನು ಹಿಂಪಡೆಯಬೇಕು ಮತ್ತು ವಿದ್ಯಾರ್ಥಿಗಳ ಹಿತವನ್ನು ಕಾಯ್ದುಕೊಳ್ಳುವಲ್ಲಿ ಹೆಚ್ಚಿನ ಗಮನ ವಹಿಸಬೇಕು ಎಂದು ಆಗ್ರಹಿಸುತ್ತೇವೆ.

ತಾಂತ್ರಿಕ ಶಿಕ್ಷಣ ಇಲಾಖೆ ನಿರ್ಧರಿಸಿದಂತೆ ತರಾತುರಿಯಲ್ಲಿ ಪರೀಕ್ಷೆ ನಡೆದರೆ ಅನ್ಯ ರಾಜ್ಯದಲ್ಲಿ ಲಾಕ್’ಡೌನ್ ಕಾರಣ ಸಿಲುಕಿ ಹಾಕಿಕೊಂಡಿರುವ ವಿದ್ಯಾರ್ಥಿಗಳಿಗೆ ಅನಾನೂಕುಲವಾಗಲಿದೆ. ಈಗಾಗಲೇ ವಿದ್ಯಾರ್ಥಿಗಳು ತಮಗಾಗುವ ಅನಾನೂಕುಲತೆ ಬಗ್ಗೆ ಮಾಧ್ಯಮಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ದಿನ ಪತ್ರಿಕೆಗಳಲ್ಲಿ ಬಂದ ಮಾಹಿತಿಯ ಪ್ರಕಾರ ಬಹುತೇಕ ವಿದ್ಯಾರ್ಥಿ ನಿಲಯಗಳು ಇದೀಗ ಬಂದ್ ಆಗಿದ್ದು ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಉಳಿದುಕೊಳ್ಳುವ ಸಮಸ್ಯೆ ಕೂಡ ಎದುರಾಗಲಿದೆ. ಅದರೊಂದಿಗೆ ರಾಜ್ಯದಲ್ಲಿ ಕೋರೊನಾ ಸೋಂಕು ಕೂಡ ವಿಪರೀತವಾಗಿ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದಲೂ ಅಪಾಯಕಾರಿಯಾಗಿದೆ. ಆದ್ದರಿಂದ ಪರೀಕ್ಷೆಯನ್ನು ಮುಂದೂಡಿ ಆದೇಶ ಹೊರಡಿಸಬೇಕೆಂದು ಎಸ್.ಐ.ಓ ಕರ್ನಾಟಕ ಆಗ್ರಹಿಸಿದೆ.


Spread the love
9 Comments
Inline Feedbacks
View all comments
Anonymous
4 years ago

No exam covid 19

Anjali
4 years ago

Yes this is right pls postpone exams date

salomi
4 years ago

exam ban madi .please paramedical exam is ban please

Robot seerwani
4 years ago

Don’t do the exams plz it’s humble request from students in this situation

Anonymous
4 years ago

Postpone Madi exam

Imamhusain
4 years ago

Please ban the exam because Corona cases more then more cases increasing in all states we writing exam any time but man will be born in only one time not born in next time

Anonymous
4 years ago

Government take the decision v have to follow up…. Tats it

Pankaj Dharmani
4 years ago

Yes, cancel the exams. Who is going to fill up those empty malls?

Brijesh
4 years ago

It’s better to cancel Diploma exams in this PANDAMIC condition . We are strucked in other states . If we come to Bangalore to write exams no Accomidation is their . All PGs and hostels are closed . Its humble request please give permission to write exams from near by Diploma college to us like Others did or kindly arrange Accommodations for students.

wpDiscuz
Exit mobile version