ಡಿವೈಎಸ್ಪಿ ಗಣಪತಿ ಅವರದ್ದು ಡೆತ್ ಡಿಕ್ಲರೇಶನ್ ಅಲ್ಲ : ಶಾಸಕ ಜೆ ಆರ್ ಲೋಬೊ
ಮಂಗಳೂರು: ಡಿವೈಎಸ್ಪಿ ಗಣಪತಿ ಅವರು ಟಿವಿ ಮಾಧ್ಯಮಗಳಿಗೆ ನೀಡಲಾಗಿರುವ ಹೇಳಿಕೆಯ ಆಧಾರವಾಗಿಟ್ಟುಕೊಂಡು ಸಚಿವ ಜಾರ್ಜ್ ಮತ್ತು ಇತರ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲ್ಲು ಸಾಧ್ಯವಾಗುವುದಿಲ್ಲ ಎಂದು ಶಾಸಕ ಜೆ ಆರ್ ಲೋಬೊ ಹೇಳಿದರು.
ಅವರು ನಗರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಗಣಪತಿ ಅವರದ್ದು ಡೆತ್ ಡಿಕ್ಲರೇಶನ್ ಅಲ್ಲ, ಬದಲಾಗಿ ಟಿವಿ ಸಂದರ್ಶನದಲ್ಲಿ ಟಿವಿ ನಿರೂಪಕರು ಕೇಳಿದ ಪ್ರಶ್ನೆಗೆ ನೀಡಿದ ಉತ್ತರವಷ್ಟೇ. ಟಿವಿಯಲ್ಲಿ ಸಂದರ್ಶನ ನೀಡಿದ ನಂತರ ಯಾವುದಾದರೂ ಘಟನೆ ನಡೆದಿರಲೂ ಬಹುದು ಇದೆಲ್ಲ ತನಿಖೆಯಿಂದ ತಿಳಿದುಬರಬೇಕಾಗಿದೆ ಎಂದರು.
ಪ್ರತಿಯೊಬ್ಬರು ರಾಜಕೀಯ ವ್ಯಕ್ತಿಗಳ ವಿರುದ್ದ ವಿನಾಕಾರಣ ಬೆರಳು ತೋರಿಸುವ ಕೆಲಸ ಮಾಡಿದರೆ ಆಡಳಿತ ನಡೆಸುವುದು ಅಸಾಧ್ಯವಾಗಲಿದೆ. ಒಂದು ವೇಳೆ ಒರ್ವ ವ್ಯಕ್ತಿ ಹಲವಾರು ವ್ಯಕ್ತಿಗಳ ಮೇಲೆ ದ್ವೇಷ ಹೊಂದಿದ್ದಾನೆ ಎಂದರೆ ಅವರೆಲ್ಲರ ಮೇಳೆ ಎಫ್ ಐ ಆರ್ ದಾಖಲಿಸುವುದು ಕಷ್ಟ ಎಂದರು.
ಕಾರ್ಯಾಂಗದ ಮೇಲೆ ಶಾಸಕಾಂಗದ ಒತ್ತಡ, ಶಾಸಕಾಂಗದ ಮೇಲೆ ಜನರ ಒತ್ತಡ ಇರುವುದು ಸಾಮಾನ್ಯ. ಅಂತಹ ಒತ್ತಡಗಳಿಂದಲೆ ಕೆಲಸ ಕಾರ್ಯಗಳು ನಡೆಯುತ್ತಿರುತ್ತದೆ. ವಿರೋಧ ಪಕ್ಷಗಳು ಡಿವೈಎಸ್ಪಿ ಗಣಪತಿ ಪ್ರಕರಣ ಗುರಿಯಾಗಿಟ್ಟುಕೊಂಡು ಸದನ ನಡೆಸಲು ಪ್ರಯತ್ನಿಸುತ್ತವೆ.
ಹಲವಾರು ಉಹಾಪೋಹದ ಸುದ್ದಿಗಳು ಪ್ರಕರಣದ ಕುರಿತು ಹರಡಿದ್ದು, ಗಣಪತಿ ಅವರು ತಮ್ಮ ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದವರು. ಆದ್ದರಿಂದ ಪೋಲಸ್ ಅಧಿಕಾರಿಗಳಿಗೆ ಅವರ ಒತ್ತಡಗಳಿಗೆ ಸರಿಯಾದ ತಜ್ಞರಿಂದ ಸಮಾಲೋಚನೆ ನಡೆಸಿ ಅವರ ಒತ್ತಡಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು.
ಮೇಯರ್ ಹರಿನಾಥ್, ಮೂಡ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ನವೀನ್ ಡಿ’ಸೋಜಾ, ವಿಶ್ವಾಸ್ ಕುಮಾರ್ ದಾಸ್ ಸುದ್ದಿಗೋಷ್ಠಿಯಲ್ಲ ಉಪಸ್ಥಿತರಿದ್ದರು.