ಡಿಸೆಂಬರ್ -17 ಎಂಪಿಎಲ್ ಕ್ರಿಕೆಟ್ ಉದ್ಘಾಟನೆಗೆ ಮಹಮ್ಮದ್ ಅಜರುದ್ದೀನ್
ಮಂಗಳೂರು: ಕರ್ನಾಟಕ ರೀಜಿನಲ್ ಕ್ರಿಕೆಟ್ ಅಕಾಡಮಿಯ ಆಸರೆಯಲ್ಲಿ ದಿನಾಂಕ 17.12.2016ರಂದು ಆರಂಭವಾಗಲಿರುವ ಅಲ್ಮುಝೈನ್–ವೈಟ್‍ಸ್ಟೋನ್ ಎಂಪಿಎಲ್ 20-20 ಕ್ರಿಕೆಟ್ ಪಂದ್ಯಾಟವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಅಜರುದ್ದೀನ್‍ರವರು ಉದ್ಘಾಟಿಸಲಿರುವರು.
ನವಮಂಗಳೂರಿನ ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣವು ಹಸಿರು ಹುಲ್ಲು, ಅಸ್ಟ್ರೋಟರ್ಫ್ ಕ್ರಿಕೆಟ್ ಪಿಚ್ಚಿನ ಹೊದಿPಯನ್ನು ಹೊದ್ದುಕೊಂಡು 12 ತಂಡಗಳ ನಡುವಣ ಕ್ರಿಕೆಟ್ ಹಣಾಹಣಿಗಾಗಿ ಕಾಯುತ್ತಲಿದೆ. ಮೈದಾನದ ಸುತ್ತಲೂ ಅರುವತ್ತು ಅಡಿಗಳೆತ್ತರದ 8 ಟವರ್Uಳು ದೀಪಗಳನ್ನು ಅಳವಡಿಸಲಾಗುತ್ತಿದ್ದು, ರಾತ್ರಿ-ಹಗಲು ಪಂದ್ಯಾಟಗಳಿಗೆ ವೇದಿಕೆ ಸಿದ್ದವಾಗುತ್ತಿದೆ. ಡಿಸೆಂಬರ್ ತಿಂಗಳ ದಿನಾಂಕ 17ರಿಂದ 30ರವರೆಗೆ 14 ದಿನಗಳ ಕಾಲ ಜರಗಲಿರುವ ಪಂದ್ಯಾಟಗಳಲ್ಲಿ ಒಟ್ಟು 35 ಪಂದ್ಯಗಳು ಜರಗಲಿವೆ. ಲೀಗ್ ಹಂತದಲ್ಲಿ 30 ಪಂದ್ಯಗಳು ಆ ನಂತರ ಎಲಿಮಿನೇಟರ್, ನಾಕೌಟ್ ಹಂತಗಳಲ್ಲಿ 5 ಪಂದ್ಯಗಳು ಜರಗಲಿವೆ.
ಮನೋರಂಜನಾ ಭರಿತಉದ್ಘಾಟನಾ ಸಮಾರಂಭ
ಉದ್ಘಾಟನಾ ಸಮಾರಂಭವು ದಿನಾಂಕ 17.12.2016ರ ಸಂಜೆ 4.30ಗಂಟೆಗೆ ಆರಂಭವಾಗಲಿದ್ದು ಸಮಾರಂಭದ ನಂತರ ತುಳು ಚಿತ್ರತಾರೆಯರ ತಂಡ ಮತ್ತು ಎಂಪಿಎಲ್ ಆಯೋಜಕರ ತಂಡಗಳ ನಡುವೆ ಪ್ರದರ್ಶನ ಪಂದ್ಯವೊಂದು ಜರಗಲಿದೆ. ಎಂಪಿಎಲ್ ಅಯೋಜಕರ ಪರವಾಗಿ ಕೆಲವೊಂದು ಮಂತ್ರಿವರ್ಯರು ಪ್ಯಾಡ್ ಧರಿಸಿ ಮೈದಾನಕ್ಕಿಳಿಯುವ ನಿರೀಕ್ಷೆಯಿದ್ದು ಅವರ ಮತ್ತು ಅರ್ಜುನ್ ಕಾಪಿಕಾಡ್ ನೇತೃತ್ವದ ಚಿತ್ರತಾರೆಯರ ತಂಡದ ನಡುವಣ ಹಣಾಹಣಿ ಕ್ರಿಕೆಟ್ ಪ್ರೇಮಿಗಳಿಗೆ ಮನೋರಂಜನೆಯನ್ನು ನೀಡಲಿದೆ. ಉದ್ಘಾಟನಾ ಕಾರ್ಯಕ್ರಮದಲ್ಲಿ ಮನೋರಂಜನೆಯ ಅಂಗವಾಗಿ ರಷಿಯನ್ ಬೆಂಕಿ ನೃತ್ಯ, ಅಗಸದಲ್ಲಿ ಬೆಳಕಿನ ಚೆಲ್ಲಾಟ, ಸುಡುಮದ್ದಿನ ಪ್ರದರ್ಶನಗಳು ಜರಗಲಿದ್ದು, ಮಣಿಪಾಲ ವಿಶ್ವವಿದ್ಯಾಲಯದ ಬ್ಲಿಟ್ಝ್ ಡ್ಯಾನ್ಸ್‍ತಂಡವು ಅಮೇರಿಕಾದ ಲಾಸ್ ವೇಗಸ್‍ನ ಹಿಪ್‍ಹೋಪ್ ಡ್ಯಾನ್ಸ್ ಚಾಂಪಿಯನ್‍ಶಿಪ್‍ನಲ್ಲಿ ಪ್ರದರ್ಶಿಸಿ ಮೆಚ್ಚುಗೆ ಪಡೆದ ನೃತ್ಯ ಪ್ರದರ್ಶನವನ್ನು ಇಲ್ಲಿಯೂ ಪ್ರದರ್ಶಿಸಲಿದೆ.
ಪಂದ್ಯಕೂಟದ ಉದ್ಘಾಟನೆಯನ್ನು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮ್ಮದ್ ಅಝರುದ್ದೀನ್‍ರವರು ನೆರವೇರಿಸಲಿದ್ದು, ಈ ಕ್ರಿಕೆಟ್ ಕೂಟದ ಮುಖ್ಯ ಪ್ರವರ್ತಕರಾದ ಅಲುಮುಝೈನ್ ಸಂಸ್ಥೆಯ ವೈಟ್‍ಸ್ಟೋನ್ ಸಂಸ್ಥೆಯ ರಿಯಲ್‍ಟೆಕ್ ಕಂಪನಿಯರವರು ಭಾಗವಹಿಸಲಿರುವರಲ್ಲದೆ ದೇಶ ವಿದೇಶಗಳ ಗಣ್ಯವ್ಯಕ್ತಿಗಳು, ಕ್ರಿಕೆಟ್ ಆಡಳಿತೆಗಾರರು, ಆಟಗಾರರು ಭಾಗವಹಿಸಲಿರುವರು.
ಹನ್ನೆರಡು ತಂಡಗಳು
ಈ ಕ್ರಿಕೆಟ್‍ಕೂಟದಲ್ಲಿ ಭಾಗವಹಿಸಲಿರುವ ಹನ್ನೆರಡು ತಂಡಗಳಾದ ರೆಡ್ ಹಾಕ್ಸ್‍ಕುಡ್ಲ, ಟೀಮ್‍ಎಲಿಗೆಂಟ್ ಮೂಡಬಿದಿರೆ, ಕಂಕನಾಡಿ ನೈಟ್‍ರೈಡರ್ಸ್, ಕರಾವಳಿ ವಾರಿಯರ್ಸ್ ಪಣಂಬೂರು, ಕಾರ್ಕಳ ಗ್ಲೇಡಿಯೇಟರ್ಸ್, ಪ್ರೆಸಿಡೆಂಟ್ ಸಿಕ್ಸರ್ಸ್ ಕುಂದಾಪುರ, ಮೇಸ್ಟ್ರೋಟೈಟಾನ್ಸ್, ಸ್ಪಾರ್ಕ್‍ಎವೆಂಜರ್ಸ್ ಬೋಳಾರ, ಕೋಸ್ಟಲ್‍ಡೈಜೆಸ್ಟ್, ಸುರತ್ಕಲ್ ಸ್ಟ್ರೈಕರ್ಸ್, ಯುನೈಟೆಡ್ ಉಲ್ಲಾಳ, ಉಡುಪಿ ಟೈಗರ್ಸ್ ಈಗಾಗಲೇ ಪಂದ್ಯಾಟದಲ್ಲಿಉತ್ತಮ ಪ್ರದರ್ಶನ ನೀಡಲು ಸಜ್ಜಾಗುತ್ತಿದ್ದು ಮಣಿಪಾಲ ಮತ್ತು ಇತರೆಡೆಗಳಲ್ಲಿ ಪರಸ್ಪರಅಭ್ಯಾಸ ಪಂದ್ಯಗಳಲ್ಲಿ ತೊಡಗಿವೆ. ಎಲ್ಲ ತಂಡಗಳು ರಾಜ್ಯದಅನುಭವೀಐಪಿಎಲ್/ಕೆಪಿಲ್ ಆಟಗಾರರೊಂದಿಗೆ ಸ್ಥಳೀಯ ಕ್ರಿಕೆಟ್‍ಆಟಗಾರರ ಪಡೆಯನ್ನು ಹೊಂದಿದ್ದು, ಉನ್ನತ ಮಟ್ಟದಕ್ರಿಕೆಟ್ ಪ್ರದರ್ಶನವು ಹದಿನಾಲ್ಕು ದಿನಗಳ ಕಾಲ ಇಲ್ಲಿನ ಪ್ರೇಕ್ಷಕರನ್ನುರಂಜಿಸಲಿದೆಎಂದು ನಿರೀಕ್ಷಿಸಲಾಗಿದೆ.
ಡಿಡಿ ಸ್ಪೋಟ್ರ್ಸ್‍ನಲ್ಲಿ ನೇರ ಪ್ರಸಾರ
ಕರ್ನಾಟಕರಾಜ್ಯಕ್ರಿಕೆಟ್ ಸಂಸ್ಥೆಯ ನೀತಿ ನಿಯಮಾವಳಿಯಡಿಯಲ್ಲಿ ಜರಗಲಿರುವ ಈ ಪಂದ್ಯಕೂಟದಲ್ಲಿರಾಜ್ಯಕ್ರಿಕೆಟ್ ಸಂಸ್ಥೆಯಅಧಿಕೃತತೀರ್ಪುಗಾರರು, ಸ್ಕೋರರ್‍ಗಳು ಕಾರ್ಯ ನಿರ್ವಹಿಸಲಿದ್ದಾರೆ.ಉತ್ತಮಗುಣಮಟ್ಟದ ಕೆಮೆರಾಗಳ ಮೂಲಕ ಪಂದ್ಯಗಳನ್ನು ಸೆರೆ ಹಿಡಿಯಲಾಗುತ್ತಿದ್ದು, ಸಂಶಯಕ್ಕೆಎಡೆಮಾಡುವ ಸಂದರ್ಭಗಳಲ್ಲಿ ಮೂರನೆಯತೀರ್ಪುಗಾರರುಕರಾರುವಕ್ಕಾದ ನಿರ್ಣಯಗಳನ್ನು ನೀಡಲು ಅನುಕೂಲವಾಗಲಿದೆ.ಪಂದ್ಯಾಟಗಳು ವಿ4ಯು, ನಮ್ಮಕುಡ್ಲ ಚಾನಲ್‍ಗಳಲ್ಲಿ ಮತ್ತುಯು-ಟ್ಯೂಬ್ ಮೂಲಕ ಅಂತಾರ್ಜಾಲದಲ್ಲಿ ನೇರ ಪ್ರಸಾರವಾಗಲಿದೆ.ಕೊನೆಯ ಮೂರು ದಿನಗಳ ಪಂದ್ಯಗಳು ದೂರದರ್ಶನಕ್ರೀಡಾ ವಾಹಿನಿಯ ಮೂಲಕ ವಿಶ್ವದೆಲ್ಲೆಡೆಯಕ್ರಿಕೆಟ್ ಪ್ರೇಮಿಗಳನ್ನು ತಲಪಲಿದೆ.ಫೇಮ್‍ಕ್ರಿಕ್ ಸಂಸ್ಥೆಯುಅಂತರ್ಜಾಲದ ಮೂಲಕ ನೇರ ಸ್ಕೋರಿಂಗ್ ನಿರ್ವಹಣೆ ಮಾಡಲಿದೆ.