ಡಿಸೆಂಬರ್ 24ರಿಂದ ದತ್ತಮಾಲಾ ಅಭಿಯಾನ ಪ್ರಯುಕ್ತ ದತ್ತಪೀಠದಲ್ಲಿ ಕಾರ್ಯಕ್ರಮಗಳು ಪ್ರಾರಂಭ : ಬಜರಂಗದಳ

Spread the love

ಡಿಸೆಂಬರ್ 24ರಿಂದ ದತ್ತಮಾಲಾ ಅಭಿಯಾನ ಪ್ರಯುಕ್ತ ದತ್ತಪೀಠದಲ್ಲಿ ಕಾರ್ಯಕ್ರಮಗಳು ಪ್ರಾರಂಭ : ಬಜರಂಗದಳ

ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿ ಪ್ರತೀ ವರ್ಷವೂ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದ ವತಿಯಿಂದ ದತ್ತಜಯಂತಿ ಉತ್ಸವವನ್ನು ನಾಡ ಉತ್ಸವವನ್ನಾಗಿ ಆಚರಿಸುತ್ತಾ ಬಂದಿದ್ದು, ಈ ಬಾರಿಯ ದತ್ತಜಯಂತಿಯು “ದಿನಾಂಕ 2023ರ ಡಿಸೆಂಬರ್ 24 ರಿಂದ ಡಿಸೆಂಬರ್ 26ರ” ವರೆಗೆ ನಡೆಯಲಿದೆ. ಈ ಬಾರಿಯ ದತ್ತಜಯಂತಿ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲು ಸಂಘಟನೆಯು ತೀರ್ಮಾನಿಸಿದ್ದು, ಪೂಜ್ಯರ ಉಪಸ್ಥಿತಿಯಲ್ಲಿ ನಡೆಸಲು ಉದ್ದೇಶಿಸಿದ್ದೇವೆ. ದತ್ತಜಯಂತಿ ಉತ್ಸವದ ಪ್ರಯುಕ್ತ ದತ್ತಪೀತದಲ್ಲಿ ಮತ್ತು ಚಿಕ್ಕಮಗಳೂರು ನಗರದಲ್ಲಿ ಈ ಕೆಳಗಿನಂತೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕರಾದ ಸುನೀಲ್ ಕೆ ಆರ್ ಹೇಳಿದ್ದಾರೆ

ದಿನಾಂಕ 24.12.2023 ರಂದು ಅನಸೂಯದೇವಿ ಪೂಜೆಯ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೆಳಗ್ಗೆ 9.30 ಕ್ಕೆಮಹಿಳೆಯರಿಂದ ಸಂಕೀರ್ತನಾ ಯಾತ್ರೆ ನಡೆಯಲಿದೆ. ದತ್ತಪೀಠದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಹವಾಚನ, ಪಂಚಗವ್ಯ ಶುದ್ದಿ, ಋತ್ವಿಗ್ನರ್ಣ, ಗಣಪತಿ ಹೋಮ, ದುರ್ಗಾಹೋಮ, ಕಲಶಾಭೀಷೇಕ ಹಾಗೂ ಮಹಾಪೂಜೆ, ದತ್ತಪೀಠದಲ್ಲಿ ಸಂಜೆ ಪಾದುಕಾಶುದ್ಧಿ, ಪ್ರಕಾರ ಶುದ್ಧಿ, ವಾಸ್ತುರಾಕ್ಷೆಘ್ನ ಹೋಮ, ಸುದರ್ಶನ ಹೋಮ, ಕಲಶಾಭೀಷೇಕ ಮಹಾಪೂಜೆ ನಡೆಯಲಿದೆ,

ದಿನಾಂಕ 25.12.2023 ರಂದು ದತ್ತಪೀಠದಲ್ಲಿ ನವಕಲಶ ಕಲಾವಾಹನಂ, ಕಲಾತತ್ವಾದಿ ವಾಸ ಪೂಜೆ, ಕಲಾ ಹೋಮ, ರುದ್ರಹೋಮ, ಕಲಶಾಭೀಷೇಕ ಮಹಾಪೂಜೆ ನಡೆಯಲಿದ್ದು ಇದೇ ದಿನ ಮಧ್ಯಾಹ್ನ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಶೋಭಾಯಾತ್ರೆ, ಹಾಗೂ ಧಾರ್ಮಿಕ ಸಭೆ ನಡೆಯಲಿದೆ.

ದಿನಾಂಕ 26.11.2023 ರಂದು ದತ್ತಪೀಠದಲ್ಲಿ ದತ್ತಜಯಂತಿಯ ಪ್ರಯುಕ್ತ ದಶಸಹಸ್ರ ಸಂಖ್ಯೆಯಲ್ಲಿ ಶ್ರೀ ದತ್ತಾತ್ರೇಯ ಮಹಾಮಂತ್ರ, ಮಹಾಯಾಗ, ಕಲಶಾಭೀಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನಾ, ಬ್ರಹ್ಮಭೋಜನ, ಪ್ರಸಾದವಿನಿಯೋಗ ಹಾಗೂ ದತ್ತಜಯಂತಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಲಾಗಿದೆ.

ರಾಜ್ಯದಿಂದ ಸಾವಿರಾರು ದತ್ತಮಾಲಾಧಾರಿಗಳು ದತ್ತಪೀಠಕ್ಕೆ
ದತ್ತಜಯಂತಿ ಪ್ರಯುಕ್ತ ಡಿಸೆಂಬರ್ 17 ರಿಂದ ದತ್ತಮಾಲಾ ಅಭಿಯಾನ ಪ್ರಾರಂಭವಾಗಿದ್ದು ರಾಜ್ಯದ ಎಲ್ಲಾ ಜಿಲ್ಲೆಗಳಿಂದ ದತ್ತಮಾಲೆಯನ್ನು ಧರಿಸಿ ದತ್ತಮಾಲಾಧಾರಿಗಳು ಅತೀ ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ
ಅತ್ರಿ ಮಹರ್ಷಿ ಮತ್ತು ಸತಿ ಅನುಸೂಯ ದೇವಿಯವರಿಗೆ ಜನಿಸಿದ ಬ್ರಹ್ಮ, ವಿಷ್ಣು, ಮಹೇಶ್ವರರ ಏಕೀಭಾವದ ಅವತಾರವೇ ಶ್ರೀ ಗುರು ದತ್ತಾತ್ರೇಯ. ಹಿಂದೂಗಳ ಶೃದ್ಧಾಕೇಂದ್ರವಾಗಿರುವ ದತ್ತಪೀಠವನ್ನು ಇಸ್ಲಾಮೀಕರಣದಿಂದ ಮುಕ್ತಗೊಳಿಸಿ ಹಿಂದೂ ವೈದಿಕ ವಿಧಿವಿಧಾನದ ಮೂಲಕ ನಿತ್ಯ ತ್ರಿಕಾಲಪೂಜೆಗೆ ಅವಕಾಶ ಕೊಡಬೇಕೆಂದು ಆಗ್ರಹಿಸಿ ಈ ವರ್ಷವೂ ಈ ಅಭಿಯಾನದಲ್ಲಿ ಮಂಗಳೂರು ವಿಭಾಗದಿಂದ 5,000 ಕ್ಕೂ ಹೆಚ್ಚು ದತ್ತಮಾಲಾಧಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love