Home Mangalorean News Kannada News ಡಿಸೆಂಬರ್ 26: ಕಂಕಣ ಸೂರ್ಯಗ್ರಹಣ ವೀಕ್ಷಣೆ

ಡಿಸೆಂಬರ್ 26: ಕಂಕಣ ಸೂರ್ಯಗ್ರಹಣ ವೀಕ್ಷಣೆ

Spread the love

ಡಿಸೆಂಬರ್ 26: ಕಂಕಣ ಸೂರ್ಯಗ್ರಹಣ ವೀಕ್ಷಣೆ

ಮಂಗಳೂರು : ಡಿಸೆಂಬರ್ 26ರಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣ ಕರಾವಳಿ ಪ್ರದೇಶದಲ್ಲಿ ಗೋಚರಿಸಲಿರುವುದರಿಂದ ಈ ಶತಮಾನದ ವಿಶೇಷ ವಿದ್ಯಮಾನವನ್ನು ಹಲವು ಕೇಂದ್ರಗಳಲ್ಲಿ, ಕಾಲೇಜುಗಳಲ್ಲಿ ಹಾಗೂ ಶಾಲೆಗಳಲ್ಲಿ ವೀಕ್ಷಿಸಲು ಸಿದ್ಧತೆಗಳನ್ನು ಮಾಡಲಾಗುತ್ತಿದೆ. ಇದಕ್ಕೆ ಪೂರ್ವಭಾವಿಯಾಗಿ ದ.ಕ ಜಿಲ್ಲೆ, ಉಡುಪಿ ಹಾಗೂ ಕೊಡಗು ಜಿಲ್ಲೆಗಳ ಆರು ಕಾಲೇಜುಗಳಲ್ಲಿ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಭೌತಶಾಸ್ತ್ರ ಅಧ್ಯಾಪಕರ ಸಂಘ ಇವರ ಸಹಯೋಗದಲ್ಲಿ ಅಧ್ಯಾಪಕರಿಗೆ ಮತ್ತು ಆಸಕ್ತರಿಗೆ ಗ್ರಹಣದ ಬಗ್ಗೆ ಮಾಹಿತಿ ನೀಡಿ, ವೀಕ್ಷಿಸಲು ಬೇಕಾದ ಅನುಕೂಲತೆಗಳನ್ನು ಮಾಡಿಕೊಳ್ಳಲು ತರಬೇತಿ ನೀಡಲಾಗಿದೆ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ಈ ಕೆಳಗಿನ ಸಂಸ್ಥೆಗಳು ಹಾಗೂ ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಹಕಾರದಿಂದ ಬೇರೆ ಬೇರೆ ಸ್ಥಳಗಳಲ್ಲಿ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಮಂಗಳೂರು – ಸೌರ ಕನ್ನಡಕದಿಂದ ವೀಕ್ಷಣೆ, ಗ್ರಹಣದ ಸಮಯದ ಉಷ್ಣತೆ, ಬೆಳಕಿನ ಬದಲಾವಣೆ, ಗ್ರಹಣದ ನೆರಳಿನ ಅಂಶ ಇತ್ಯಾದಿಗಳ ದಾಖಲೀಕರಣ. ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘ ಹಾಗೂ ಸಂತ ಆಗ್ನೇಸ್ ಕಾಲೇಜು, ಮಂಗಳೂರು ಇವರು ಜಂಟಿಯಾಗಿ ಪಾದುವ ಹೈಸ್ಕೂಲ್ ವಠಾರ, ಕದ್ರಿ ಹಿಲ್ಸ್. ಸಂತ ಅಲೋಶಿಯಸ್ ಕಾಲೇಜು, ಮಂಗಳೂರು. ವಿಜಯ ಕಾಲೇಜು, ಮುಲ್ಕಿ. ಹವ್ಯಾಸಿ ಖಗೋಳಶಾಸ್ತ್ರಜ್ಞರ ಸಂಘ ಇವರು ಪೂರ್ಣಪ್ರಜ್ಞ ಕಾಲೇಜು, ಉಡುಪಿ. ಮಹಾವೀರ ಕಾಲೇಜು, ಮೂಡಬಿದ್ರೆ. ಸಂತ ಫಿಲೋಮಿನಾ ಕಾಲೇಜು, ಪುತ್ತೂರು. ಎಸ್‍ಡಿಎಮ್ ಕಾಲೇಜು, ಉಜಿರೆ. ಎಫ್‍ಎಮ್ ಕಾರಿಯಪ್ಪ ಕಾಲೇಜು, ಮಡಿಕೇರಿ. ಅಈಂಐ ಇವರು ಹರಿಪದವು ಪ್ರೌಢಶಾಲಾ ವಠಾರದಲ್ಲಿ. ಸರ್ಕಾರಿ ಪ್ರೌಢಶಾಲೆ, ಹೆಜಮಾಡಿ.

ಈ ಸಂಸ್ಥೆಗಳಲ್ಲದೇ ರಾಜ್ಯದ ಹೊರಗಿನಿಂದ ಬರುತ್ತಿರುವ ಸಂಸ್ಥೆಗಳು ಗ್ರಹಣ ವೀಕ್ಷಣೆಗೆ ಸ್ಥಳಗಳನ್ನು ಆಯ್ಕೆಮಾಡಿಕೊಂಡಿವೆ.

ಸಂಡೇ ಸೈನ್ಸ್ ಸ್ಕೂಲ್, ಪುಣೆ – ಶಾರದಾ ಪ್ರೌಢಶಾಲೆ, ತಲಪಾಡಿ ವಠಾರ. ಎಂ.ಜಿ.ಎಂ. ತಾರಾಲಯ, ಔರಂಗಬಾದ – ಬೇಕಲ್ ಕೋಟೆ. ಡಾ. ಭಾರತಿ ಬಾಕ್ಷಿ ತಂಡ – ಬೇಕಲ್ ಕೋಟೆ.

ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಗ್ರಹಣದ ದಿನ ನಡೆಯಲಿರುವ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಕಾರ್ಯಕ್ರಮವು ಬೆಳಿಗ್ಗೆ 8 ಗಂಟೆಗೆ ಆರಂಭವಾಗುವುದು. ವೀಕ್ಷಕರಿಗೆ ಎಲ್ಲಾ ಬಗೆಯ ಉಪಕರಣಗಳಿಂದ ವೀಕ್ಷಣೆ ಮಾಡುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಇಲ್ಲಿ ನಡೆದ ಪೂರ್ವಭಾವಿ ತರಬೇತಿಯಲ್ಲಿ ಭಾಗವಹಿಸಿದ ಅಧ್ಯಾಪಕರು ತಮ್ಮ ಶಾಲೆಗಳಲ್ಲಿ ಗ್ರಹಣ ವೀಕ್ಷಣೆ ಕಾರ್ಯಕ್ರಮ ನಡೆಸಲು ಸಮ್ಮತಿಸಿದ್ದಾರೆ.

ಆಸಕ್ತರು ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಮಂಗಳೂರಿನಲ್ಲಿ ಗ್ರಹಣ ವಿವರ: ಗ್ರಹಣ ಪ್ರಾರಂಭ: ಬೆಳಿಗ್ಗೆ 8ಗ. 4ನಿ. 25ಸೆ, ಕಂಕಣ ಗ್ರಹಣ ಆರಂಭ: 9ಗ. 24ನಿ.8ಸೆ, ಕಂಕಣ ಗ್ರಹಣದ ಅಂತ್ಯ: 9ಗ. 26ನಿ. 19ಸೆ, ಗ್ರಹಣದ ಅಂತ್ಯ: 11ಗ. 03ನಿ. 41ಸೆ.

ವೀಕ್ಷಣೆಗೆ ಉಪಕರಣಗಳು: ಪಿನ್‍ಹೋಲ್ ಉಪಕರಣ (ಬಿಳಿ ಗೋಡೆ ಅಥವಾ ಪರದೆಯ ಮೇಲೆ ಸೂರ್ಯ ಬಿಂಬದ ವೀಕ್ಷಣೆ), ದೂರದರ್ಶಕ (ಸೌರ ಫಿಲ್ಟರ್ ಅಳವಡಿಸಿರಬೇಕು) ಅಥವಾ ಬೈನಾಕ್ಯುಲರ್ (ಸೌರ ಫಿಲ್ಟರ್ ಅಳವಡಿಸಿರಬೇಕು) ಅಥವಾ ಸೌರ ಫಿಲ್ಟರ್ ಇಲ್ಲದಿದ್ದಲ್ಲಿ ಪರದೆಯ ಮೇಲೆ ಸೂರ್ಯ ಬಿಂಬದ ವೀಕ್ಷಣೆ, ಸೋಲಾರ್ ಪೆÇ್ರಜೆಕ್ಷನ್ ಸಿಸ್ಟಮ್, ಸೌರ ಕನ್ನಡಕ (ಸೋಲಾರ್ ಫಿಲ್ಟರ್) (ರಂಧ್ರವಿಲ್ಲದ ಮತ್ತು ವೈಜ್ಞಾನಿಕವಾಗಿ ಸುರಕ್ಷಿತವೆಂದು ಪರೀಕ್ಷಿಸಲ್ಪಟ್ಟ)

ಮುಂಜಾಗ್ರತೆಗಳು: ಸೋಲಾರ್ ಫಿಲ್ಟರ್ (ಸೌರ ಕನ್ನಡಕ) ಗಳನ್ನು ಬಳಸಿಯೇ ಸೂರ್ಯನನ್ನು ವೀಕ್ಷಿಸಿ. ಸೂರ್ಯನನ್ನು ನೇರವಾಗಿ (ಗ್ರಹಣಕಾಲದಲ್ಲೂ ಸಹ) ಬರಿಗಣ್ಣಿನಿಂದ ವೀಕ್ಷಿಸಬೇಡಿ. ಫಿಲ್ಟರ್‍ಗಳನ್ನು ಬಳಸುವಾಗ ಕೂಡ ಮಾರ್ಗದರ್ಶಕರ ಸೂಚನೆಗಳನ್ನು ಪಾಲಿಸಿ.ಹಳೆಯ ಅಥವಾ ಹಾಳಾಗಿರುವ ಸೋಲಾರ್ ಫಿಲ್ಟರ್‍ಗಳನ್ನು ಬಳಸಬ್ಭೆಡಿ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರ, ಸದಸ್ಯ ಕಾರ್ಯದರ್ಶಿ ಇವರ ಪ್ರಕಟಣೆ ತಿಳಿಸಿದೆ.


Spread the love

Exit mobile version