ಡಿಸೆಂಬರ್ 8 ರಂದು ಬಳ್ಳಾರಿಯಲ್ಲಿ ಬೃಹತ್ ಸರ್ವಧರ್ಮ ಸಮ್ಮೇಳನ 

Spread the love

ಡಿಸೆಂಬರ್ 8 ರಂದು ಬಳ್ಳಾರಿಯಲ್ಲಿ ಬೃಹತ್ ಸರ್ವಧರ್ಮ ಸಮ್ಮೇಳನ 

ಬಳ್ಳಾರಿ: ಇಲ್ಲಿನ ಮರಿಯ ನಗರದಲ್ಲಿರುವ ಆರೋಗ್ಯ ಮಾತೆ ಪುಣ್ಯ ಕ್ಷೇತ್ರದ ಆಧ್ಯಾತ್ಮ ಸಭಾಂಗಣದಲ್ಲಿ ಡಿಸೆಂಬರ್ 8 ರಂದು ಬೆಳಿಗ್ಗೆ 10 ಗಂಟೆಯಿಂದ  ಬೃಹತ್ ಸರ್ವ ಧರ್ಮ ಸಮ್ಮೇಳನ  ನಡಯಲಿದೆ.

ಈ ಕುರಿತು ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸಮ್ಮೇಳನದ ಸಂಚಾಲಕರು ಮತ್ತು ಐಆರ್‍ಡಿ ಕಾರ್ಯದರ್ಶಿ *ಫಾದರ್ ಐವನ್ ಪಿಂಟೋ* ಅವರು, ಆಸಿಸ್ಪಿಯ ಸಂತ ಫ್ರಾನ್ಸಿಸ್ ಮತ್ತು ಸುಲ್ತಾನ್ ಆಲ್ ಮಾಲಿಕ್ ಆಲ್ ಕಮಿಲ್ ಅವರ ಚಾರಿತ್ರಿಕ ಭೇಟಿಯ 800ನೇ ವಾರ್ಷಿಕೋತ್ಸವ ಸ್ಮರಣಾರ್ಥ ಈ ಸಮ್ಮೇಳನ ನಡೆಯಲಿದೆ. ಫ್ರಾನ್ಸಿಸ್ಕನ್ ಸಮೂಹ, ಕ್ಯಾಥೋಲಿಕ್ ಸಂಘ ಮತ್ತು ಐಆರ್‍ಡಿ ನಿಯೋಗದಿಂದ ಜಗತ್ತಿನಲ್ಲಿ ಶಾಂತಿ ಮತ್ತು ಸಾಮರಸ್ಯದ ಅಂಗವಾಗಿ ನಡೆಯುವ ಸಮ್ಮೇಳನಕ್ಕೆ ಬಳ್ಳಾರಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ *ಡಾ.ಹೆನ್ರಿ ಡಿ”ಸೋಜ* ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅಥಿಥಿಗಳಾಗಿ ಮೂಡಬಿದಿರೆ ಜೈನ್ ಮಠದ *ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ,* ಓಎಫ್‍ಎಂನ ಪ್ರಾಂತ್ಯಾಧಿಕಾರಿ ಫಾದರ್ ಪ್ರವೀಣ್ ಎಚ್.ಡಿ”ಸೋಜಾ, ಬಳ್ಳಾರಿಯ ಖಾಝಿ ಗುಲಾಮ್ ಮೆಹಮೂದ್ ಮಹಮ್ಮದ್ ಸಿದ್ದಿಕಿ, ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ,  ಕಮ್ಮರಚೇಡು ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ,  ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿದ್ಯಾಲಯದ  ಸೋದರಿ ನಿರ್ಮಲಾ,  ಜೈನ್ ಸಮಾಜದ ಅಧ್ಯಕ್ಷ ಎಸ್.ಸಿ.ಬಗ್ರೀಚಾ, ಸಿಎಸ್‍ಐ ವಲಯ ಅಧ್ಯಕ್ಷ ಪಾಸ್ಟರ್ ಗೋವನ ಇಮ್ಯಾನುಯೆಲ್, ಸಿಖ್ ಧರ್ಮಗುರು ಗ್ಯಾನಿ ಹರಚರಣ್ ಸಿಂಗ್, ಕಂದಲಗ್ ಇಲ್ಲಲ್ ನ ಜನಾಬ್ ಲಾಲ್ ಹುಸೇನ್ ಸಾಬ್ ಆಗಮಿಸಲಿದ್ದಾರೆ.

ಸಚಿವ ಬಿ.ಶ್ರೀರಾಮುಲು, ಸಂಸದ ಎನ್ ವೈ ದೇವೇಂದ್ರಪ್ಪ, ಶಾಸಕರಾದ ಜಿ.ಸೋಮಶೇಖರರೆಡ್ಡಿ, ಬಿ.ನಾಗೇಂದ್ರ, ಅಲ್ಲಂ ವೀರಭದ್ರಪ್ಪ, ಕೆಸಿ ಕೊಂಡಯ್ಯ, ಕೆಪಿಸಿಸಿ ಉಪಾಧ್ಯಕ್ಷ ನಾರಾ ಸೂರ್ಯ ನಾರಾಯಣರೆಡ್ಡಿ, ಜಿಪಂ ಸದಸ್ಯರ ನಾರಾ ಭರತ್ ರೆಡ್ಡಿ ಇನ್ನಿತರರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.

ಈ ಸಂದರ್ಭಧಲ್ಲಿ ಫಾದರ್ ಅಂಟೋನಿ ರಾಜ್, ಸಿಸ್ಟರ್ ತೆರೆಸಾ ಪೀಟರ್, ಫಾದರ್ ದಯಾನಂದಸ್ವಾಮಿ, ಕ್ಯಾಥೋಲಿಕ್ ಸಂಘದ ಅಧ್ಯಕ್ಷ ರಾಜು ಬಾಲರಾಜು ಇನ್ನಿತರರು ಇದ್ದರು.


Spread the love