ಡಿ.ಕೆ.ಶಿ. ಪ್ರಕರಣ. ಕಾಂಗ್ರೆಸ್’ನಿಂದ ಮಂಗಳೂರಿನ ಐಟಿ ಇಲಾಖೆ ಮೇಲೆ ಕಲ್ಲು ತೂರಾಟ, ಧ್ವಂಸ ಖಂಡನೀಯ -ಡಿ.ವೇದವ್ಯಾಸ ಕಾಮತ್

Spread the love

ಡಿ.ಕೆ.ಶಿ. ಪ್ರಕರಣ. ಕಾಂಗ್ರೆಸ್’ನಿಂದ ಮಂಗಳೂರಿನ ಐಟಿ ಇಲಾಖೆ ಮೇಲೆ ಕಲ್ಲು ತೂರಾಟ, ಧ್ವಂಸ ಖಂಡನೀಯ -ಡಿ.ವೇದವ್ಯಾಸ ಕಾಮತ್ 
ಮಂಗಳೂರು: ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲಿನ ಐಟಿ ದಾಳಿಯನ್ನು ವಿರೋಧಿಸಿ ಕಾಂಗ್ರೆಸ್ಸಿಗರು ಮಂಗಳೂರಿನ ಆದಾಯ ತೆರಿಗೆ ಇಲಾಖೆ ಮೇಲೆ ಕಲ್ಲು ತೂರಾಟ ನಡೆಸಿ ಸರಕಾರದ ಆಸ್ತಿಗೆ ಹಾನಿ ಮಾಡಿದ್ದಲ್ಲದೇ, ಸಾರ್ವಜನಿಕ ಸ್ಥಳದಲ್ಲಿ ಟಯರ್’ಗೆ ಬೆಂಕಿ ಹಚ್ಚಿ ಜನರಲ್ಲಿ ಭಯಬೀತ ವಾತಾವರಣ ಸೃಷ್ಟಿಸಿದ್ದು ಅತ್ಯಂತ ಖಂಡನೀಯ.
ಸಚಿವರು ಪ್ರಾಮಾಣಿಕರಾಗಿದ್ದರೆ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಹೇಗೆ ಬಂತು? ಅದಕ್ಕೆ ಸಂಬಂಧಪಟ್ಟ ದಾಖಲೆಗಳೇಕೆ ಇಲ್ಲ? ಬೇನಾಮಿ ಸಂಪತ್ತಿನ ದಾಖಲೆಗಳನ್ನು ಹರಿಯಲು ಮುಂದಾಗಿದ್ದೇಕೆ?
ಇಷ್ಟು ಪಾರದರ್ಶಕವಾಗಿ ಭ್ರಷ್ಟಾಚಾರ ಬಯಲಿಗೆ ಬಂದಿದ್ದರೂ ಐಟಿ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸುವುದು ಭ್ರಷ್ಟಾಚಾರಕ್ಕೆ ಬೆಂಬಲ ಕೊಟ್ಟಂತೆಯೇ ಸರಿ. ಇದು ನಾಚಿಕೆಗೇಡು.
ಆದಾಯ ತೆರಿಗೆ ಇಲಾಖೆಯ ಮೇಲೆ ದಾಳಿ ನಡೆಸಿ ಗಾಜುಗಳನ್ನು ಪುಡಿಗೈದು ಸೊತ್ತುಗಳಿಗೆ ಹಾನಿ ಮಾಡಿದ್ದು ದೇಶದ ಇತಿಹಾಸದಲ್ಲಿ ಇದೇ ಮೊದಲು. ಅದು ನಡೆದದ್ದು ಮಂಗಳೂರಿನಲ್ಲಿ. ಅದು ಮಾಡಿದ್ದು ಕಾಂಗ್ರೆಸ್ ನಾಯಕರು. ಇದೇ ಅವರ ಮಹಾ ಸಾಧನೆ!
ಮಹಾನಗರ ಪಾಲಿಕೆಯ ಸದಸ್ಯರಾದ ಎ.ಸಿ.ವಿನಯ್ ರಾಜ್, ರಮಾನಂದ ಪೂಜಾರಿ, ಯೂತ್ ಕಾಂಗ್ರೆಸ್’ನ ಮೆರಿಲ್ ರಿಗೋ ಸೇರಿದಂತೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಎಲ್ಲರನ್ನೂ ಪೊಲೀಸರು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಭಾರತೀಯ ಜನತಾ ಪಾರ್ಟಿ ಮಂಗಳೂರು ದಕ್ಷಿಣ ಮಂಡಲದ ಅಧ್ಯಕ್ಷ ಡಿ.ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು

Spread the love