ಡಿ.ವೈ.ಎಫ್.ಐ ಪಂಜಿಮೊಗರು ವತಿಯಿಂದ “ಡೆಂಗೆ ಡ್ರೈವ್ ಡೇ”
ಮಂಗಳೂರು: ಜಿಲ್ಲಾಡಳಿತ, ನಗರ ಪಾಲಿಕೆ, ಆರೋಗ್ಯ ಇಲಾಖೆಯ ಡೆಂಗ್ಯೂ ವಿರುದ್ದ ಅಭಿಯಾನದ “ಡೆಂಗೆ ಡ್ರೈವ್ ಡೇ” ದಿನವಾದ ಭಾನುವಾರ ಡಿ.ವೈ.ಎಫ್.ಐ ಪಂಜಿಮೊಗರು ಘಟಕದ ವತಿಯಿಂದ ಪಂಜಿಮೊಗರು ವಾರ್ಡ್ನಾದ್ಯಂತ ವಾಹನ ಮೈಕ್ ಪ್ರಚಾರ, ಮನೆ ಮನೆ ಭೇಟಿ ಮಾಡಿ ಜನಜಾಗ್ರತಿ ನಡೆಸಲಾಯಿತು.
ಪ್ರಚಾರ ಅಭಿಯಾನವನ್ನು ವಿದ್ಯಾನಗರದಲ್ಲಿ ಸ್ಥಳೀಯ ಕಾರ್ಪೊರೇಟರ್ ದಯಾನಂದ ಶೆಟ್ಟಿ ಉದ್ಘಾಟಿಸಿದರು. ಡೆಂಗ್ಯೂ ಜಿಲ್ಲೆಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಡೆಂಗ್ಯೂ ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದೇ ಸದ್ಯ ನಮ್ಮ ಜವಾಬ್ದಾರಿ ಮನೆ ಸುತ್ತಮುತ್ತ ಹಿತ್ತಲಿನಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳವುದು, ಟೈರ್ , ಬಾಟಲ್ ಮುಂತಾದವುಗಳನ್ನು ತೆರವುಗೊಳಿಸಿ ಸೊಳ್ಳೆಗಳು ಸಂತಾನೋತ್ಪತ್ತಿ ನಡೆಸದಂತೆ ಜಾಗ್ರತೆ ವಹಿಸಿಬೇಕು… ಉಪಯೋಗಕ್ಕಿಲ್ಲದ ಪಾತ್ರೆಗಳನ್ನು ಮಗುಚಿ ಹಾಕಬೇಕು… ಬಳಕೆಯ ನೀರು ಸಂಗ್ರಹಿಸುವ ಪಾತ್ರೆಗಳನ್ನು ಮುಚ್ಚಿಡಬೇಕೆಂದು ತಿಳಿಸಿದರು.. ಸೊಳ್ಳೆಗಳು ಕಚ್ಚದಂತೆ ಎಚ್ಚರ ವಹಿಸುವುದು ಸೊಳ್ಳೆ ನಿರೋಧಕ, ಸೊಳ್ಳೆ ಪರದೆ ಇತ್ಯಾದಿಗಳನ್ನು ಬಳಸಿ ನಮ್ಮನ್ನು ನಾವು ಕಾಪಾಡಿಕೊಳ್ಳುವ ಅಗತ್ಯತೆ ಇದೆ ಎಂದರು ಅಭಿಯಾನದ ಭಾಗವಾಗಿ ಮನೆ ಮನೆ ಭೇಟಿ, ಸೊಳ್ಳೆ ಉತ್ಪತ್ತಿಯಾಗುವ ಕುರಿತು ಮಾಹಿತಿ, ಸೊಳ್ಳೆ ಬೆಳೆಯುತ್ತಿದ್ದ ಪ್ರದೇಶಗಳ ಸ್ವಚ್ಛತೆ ನಿಂತ ನೀರನ್ನು ತೆರವುಗೊಳಿಸಲಾಯಿತು… ವಾರ್ಡ್ನಾದ್ಯಂತ ವಾಹನ ಮೂಲಕ ದ್ವನಿವರ್ದಕದಲ್ಲಿ ಪ್ರಚಾರ ನಡೆಸಲಾಯಿತು.
ಪ್ರಚಾರ ಅಭಿಯಾನದ ಮುಂದಾಳತ್ವವನ್ನು ಡಿವೈಎಫ್ಐ ಪಂಜಿಮೊಗರು ಘಟಕದ ಅನಿಲ್ ಡಿಸೋಜ, ಖಲೀಲ್, ಮುಸ್ತಾಫ, ಹನುಮಂತ, ಆಕಾಶ್, ಶರಣ್ದೀಪ್ ಇನ್ನಿತರರು ಇದ್ದರು..