ಡಿ. 15: ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆ ಮಹಾಸಭೆ
ಮಂಗಳೂರು: ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಜನಸಂಪರ್ಕ ಸಭೆ ಹಾಗೂ 14 ನೇ ಸರ್ವ ಸದಸ್ಯರ ಮಹಾಸಭೆ ಡಿ. 15 ರ ಬೆಳಗ್ಗೆ 10ಕ್ಕೆ ಡಾನ್ ಬಾಸ್ಕೊ ಸಭಾಂಗಣದಲ್ಲಿ ಜರುಗಲಿದೆ ಎಂದು ಸಂಘಟನೆ ಅಧ್ಯಕ್ಷ ಎಂ ಕೆ ಯಶೋಧರ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು, ದಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಸಂಘದ ಸದಸ್ಯರಿದ್ದಾರೆ. ಮೂಲಗೇಣಿ ಬಗ್ಗೆ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕಲಾಪಗಳ ಕುರಿತು ಸಭೆಯಲ್ಲಿ ಮಾಹಿತಿ ನೀಡಲಾಗುವುದು ಎಂದರು.
ಕಾರ್ಯದರ್ಶಿ ಸಂದೇಶ್ ಪ್ರಭು ಮತ್ತಿತರಿದ್ದರು