Home Mangalorean News Kannada News ಡಿ.16ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು?

ಡಿ.16ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು?

Spread the love

ಡಿ.16ರಂದು ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು?

ಹೊಸದಿಲ್ಲಿ: ದಿಲ್ಲಿ ನಿರ್ಭಯಾ ಅತ್ಯಾಚಾರಿಗಳಿಗೆ ಇದೇ ಡಿಸೆಂಬರ್‌ 16ರಂದು ನೇಣಿನ ಕುಣಿಕೆ ಬೀಳುವ ಸಾಧ್ಯತೆ ಇದೆ. 2012ರ ಡಿಸೆಂಬರ್‌ 16ರಂದೇ ಆರು ಮಂದಿ ಪಾತಕಿಗಳು ಚಲಿಸುವ ಬಸ್ಸಿನಲ್ಲಿ ನಿರ್ಭಯಾರನ್ನು ಅತ್ಯಾಚಾರಗೈದು ಹತ್ಯೆ ಮಾಡಿದ್ದರು. ಅವರ ಪೈಕಿ ಒಬ್ಬ ತಿಹಾರ್‌ ಜೈಲಿನಲ್ಲಿಯೇ ಮೃತಪಟ್ಟಿದ್ದು, ಅಪ್ತಾಪ್ತನಾಗಿದ್ದ ಇನ್ನೊಬ್ಬ ಶಿಕ್ಷೆ ಪೂರೈಸಿ ಬಿಡುಗಡೆ ಹೊಂದಿದ್ದಾನೆ.

ಉಳಿದ ನಾಲ್ವರನ್ನು ಗಲ್ಲಿಗೆ ಏರಿಸಲು ಅಂತಿಮ ದಿನಗಳ ಎಣಿಕೆ ಶುರುವಾಗಿದೆ. ಅಪರಾಧಿಗಳ ಪೈಕಿ ವಿನೋದ್‌ ಶರ್ಮಾ ಕ್ಷಮಾದಾನ ಅರ್ಜಿ ವಿಲೇವಾರಿ ವಿಳಂಬಗೊಂಡಿದ್ದರಿಂದ ಗಲ್ಲು ಜಾರಿ ಮುಂದೂಡಿಕೆಯಾಗುತ್ತಲೇ ಬಂದಿದೆ. ಈಗ ಶರ್ಮಾ ಅರ್ಜಿ ಹಿಂಪಡೆದಿರುವುದರಿಂದ ಯಾವುದೇ ಕ್ಷಣದಲ್ಲಿ ಗಲ್ಲುಜಾರಿ ನಿಗದಿಯಾಗಬಹುದು ಎಂದು ಮೂಲಗಳು ತಿಳಿಸಿವೆ. ವಿನಯ್‌, ಮುಕೇಶ್‌, ಪವನ್‌ ಮತ್ತು ಅಕ್ಷಯ್‌ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಪರಾಧಿಗಳು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಕಳೆ ಶುಕ್ರವಾರ ರಾಷ್ಟ್ರಪತಿ ರಾಮಾನಾಥ ಕೋವಿಂದ ರೇಪಿಸ್ಟ್‌ಗಳು ಕ್ಷಮದಾನಕ್ಕೆ ಅರ್ಹರೇ ಅಲ್ಲ ಎಂದಿದ್ದರು. ನಿರ್ಭಯಾ ಅತ್ಯಾಚಾರಿಗಳಿಗೆ ಯಾವ ಕಾರಣಕ್ಕೂ ಕ್ಷಮಾದಾನ ನೀಡಬಾರದು. ಅಪರಾಧಿಗಳು ಸಲ್ಲಿಸಿರುವ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೇಂದ್ರ ಸರಕಾರವು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಗೆ ಶಿಫಾರಸು ಮಾಡಿತ್ತು.

2012ರ ಡಿಸೆಂಬರ್‌ ಲ್ಲಿ 23 ವರ್ಷದ ಮಹಿಳೆ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಡಿ ಒಟ್ಟು 5 ಜನರನ್ನು ಅಪರಾಧಿಗಳೆಂದು ತೀರ್ಪು ನೀಡಲಾಗಿತ್ತು. ಒಬ್ಬ ಬಾಲಾಪರಾಧಿಯನ್ನು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಐವರು ಅಪರಾಧಿಗಳ ಪೈಕಿ ರಾಮ್‌ ಸಿಂಗ್‌ ಎಂಬುವವನು ಜೈಲಿನಲ್ಲಿ ತನ್ನನ್ನು ತಾನೇ ಕೊಂದುಕೊಂಡಿದ್ದ. ಉಳಿದ ನಾಲ್ವರಲ್ಲಿ ವಿನಯ್‌ ಶರ್ಮಾ ಹೆಸರಿನ ಒಬ್ಬ ಮಾತ್ರ ರಾಷ್ಟ್ರಪತಿ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದಾನೆ. 2012ರ ಡಿಸೆಂಬರ್‌ 16ರ ರಾತ್ರಿ 23 ವರ್ಷದ ಮಹಿಳೆ ಮೇಲೆ 6 ಜನ ಗ್ಯಾಂಗ್‌ ರೇಪ್‌ ನಡೆಸಿದ್ದರು. ಸಂತ್ರಸ್ತಯು 13 ದಿನಗಳ ನಂತರ ಡಿಸೆಂಬರ್ 29ರಂದು ನಿಧನ ಹೊಂದಿದ್ದರು.


Spread the love

Exit mobile version