ಡಿ. 17 : ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಜನ ಸಂಪರ್ಕ ಸಭೆ ಹಾಗೂ ಸರ್ವ ಸದಸ್ಯರ ಮಹಾಸಭೆ
ಮಂಗಳೂರು: ಮೂಲಗೇಣಿ ಒಕ್ಕಲು ರಕ್ಷಣಾ ವೇದಿಕೆಯ ಡಿಸೆಂಬರ್ ತಿಂಗಳ ದಿನಾಂಕ 17ರಂದು ಭಾನುವಾರ ಬೆಳಿಗ್ಗೆ 10-00 ಗಂಟೆಗೆ ಮಂಗಳೂರಿನ “ಡಾನ್ಬಾಸ್ಕೋ ಸಭಾಂಗಣ”ದಲ್ಲಿ ವೇದಿಕೆಯ ಜನ ಸಂಪರ್ಕ ಸಭೆ ಹಾಗೂ ಸರ್ವ ಸದಸ್ಯರ ಮಹಾಸಭೆಯನ್ನು ಆಯೋಜಿಸಿರುತ್ತದೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ವರ್ಷಗಳಿಂದ ತಾವು ಅನುಭವಿಸಿಕೊಂಡು ಬರುತ್ತಿದ್ದ ಚಿಕ್ಕಪುಟ್ಟ ಆಸ್ತಿಯ ಮೂಲಗೇಣಿ ಹಕ್ಕನ್ನು ಸಂಪೂರ್ಣವಾಗಿ ಅನುಭವಿಸುವರೇ ಆಗಬೇಕಾಗಿದ್ದ ಕಾರ್ಯಕ್ರಮದ ಬಗ್ಗೆ ಜನಸಾಮಾನ್ಯರಿಗೆ ತಿಳುವಳಿಕೆ ನೀಡಬೇಕಾಗಿ ವೇದಿಕೆಯ ಪ್ರಕಟಣೆ ತಿಳಿಸಿದೆ,