ಡಿ. 2 ಉಡುಪಿ ರಾಮ ಜನ್ಮಭೂಮಿ ಜನಾಗ್ರಹ ಸಭೆ – ವಾಹನ ಪಾರ್ಕಿಂಗ್ ವಿವರ
ಉಡುಪಿ: ಡಿಸೆಂಬರ್ 2 ರಂದು ವಿಶ್ವಹಿಂದೂ ಪರಿಷತ್ ಉಡುಪಿ ಜಿಲ್ಲೆ ರವರ ವತಿಯಿಂದ ನಡೆಯುವ ಅಯೋಧ್ಯೆಯ ಶ್ರೀ ರಾಮ ಜನ್ಮ ಭೂಮಿಯಲ್ಲಿ ಭವ್ಯ ಮಂದಿರ ನಿರ್ಮಾಣಕ್ಕಾಗಿ ನಡೆಯುವ ಜನಾಗ್ರಹ ಕಾರ್ಯಕ್ರಮ ಸಮಯ ವಿವಿಧ ಕಡೆಗಳಿಂದ ಬರುವ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಈ ಕೆಳಗಿನಂತೆ ಮಾಡಲು ಜಿಲ್ಲಾ ಪೊಲೀಸ್ ಇಲಾಖೆ ಸೂಚಿಸಿದೆ.
ಬೈಂದೂರು, ಕೊಲ್ಲೂರು, ಕುಂದಾಪುರ, ಬ್ರಹ್ಮಾವರ, ಕಡೆಗಳಿಂದ ಬರುವ ಬಸ್ಸುಗಳನ್ನು ಬ್ರಹ್ಮಗಿರಿ ಸಮೀಪದ ಸೈಂಟ್ ಸಿಸಿಲಿಯಾ ಶಾಲಾ ಮೈದಾನದಲ್ಲಿ ನಿಲ್ಲಿಸುವುದು. ಪಡುಬಿದ್ರೆ, ಕಾಪು, ಕಡೆಗಳಿಂದ ಬರುವ ಕಾರು ಮತ್ತು ಬೈಕ್ ಗಳನ್ನು ಕ್ರಿಶ್ಚಿಯನ್ ಶಾಲಾ ಮೈದಾನದಲ್ಲಿ, ಕಾರ್ಕಳ, ಹೆಬ್ರಿ, ಹಿರಿಯಡ್ಕ ಕಡೆಗಳಿಂದ ಬರುವ ಬಸ್ಸುಗಳನ್ನು ಅಮ್ಮಣ್ಣಿ ರಾಮಣ್ಣ ಶೆಟ್ಟಿ ಹಾಲ್ನ ಪಾರ್ಕಿಂಗ್ ಬಳಿ, ಮಲ್ಪೆ ಕಡೆಗಳಿಂದ ಬರುವ ಕಾರು ಮತ್ತು ಬೈಕ್ ಗಳನ್ನು ಅಜ್ಜರಕಾಡು ಜಿಲ್ಲಾ ಆಸ್ಪತ್ರೆ ಬಳಿಯ ರೆಡ್ಕ್ರಾಸ್ ಕಛೇರಿಯ ಮೈದಾನದಲ್ಲಿ ನಿಲ್ಲಿಸುವುದು.
ಮೇಲಿನ ಪಾರ್ಕಿಂಗ್ ಸ್ಥಳದಲ್ಲಿ ಹೆಚ್ಚುವರಿಯಾಗುವ ಕಾರು/ಬೈಕ್/ ಇತರ ಲಘುವಾಹನಗಳನ್ನು ಕೃಷ್ಣ ಮಠದ ಬಳಿಯ ಹೊಸ ವಿದ್ಯೋದಯ ಶಾಲೆ ಬಳಿಯ ಗದ್ದೆಯಲ್ಲಿ, ರಾಜಾಂಗಣದ ಹಿಂಬದಿ ಮೈದಾನದಲ್ಲಿ, ಹೆಚ್ಚುವರಿಯಾಗುವ ಬಸ್ಗಳನ್ನು ರಾಯಲ್ ಗಾರ್ಡನ್ನಲ್ಲಿ ಮತ್ತು ಬೀಡಿನಗುಡ್ಡೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ಸೂಚಿಸಲಾಗಿದೆ ಅಲ್ಲದೆ ಗಣ್ಯ ವ್ಯಕ್ತಿಗಳ ವಾಹನಗಳನ್ನು ರಾಜಾಂಗಣ ಮತ್ತು ಗೀತಾ ಮಂದಿರದ ಬಳಿ ನಿಲ್ಲಿಸಲು ಸೂಚಿಸಲಾಗಿದೆ. ಭಾನುವಾರ ಕೃಷ್ಣ ಮಠಕ್ಕೆ ಬರುವ ಪ್ರವಾಸಿಗರ ವಾಹನಗಳನ್ನು ರಾಜಾಂಗಣದ ಹಿಂಬದಿಯ ಖಾಲಿಗದ್ದಯಲ್ಲಿ ಪಾರ್ಕಿಂಗ್ ಮಾಡುವುದು.