Home Mangalorean News Kannada News ಡಿ. 21ರಿಂದ 30 ಕರಾವಳಿ ಉತ್ಸವ

ಡಿ. 21ರಿಂದ 30 ಕರಾವಳಿ ಉತ್ಸವ

Spread the love
RedditLinkedinYoutubeEmailFacebook MessengerTelegramWhatsapp

ಡಿ. 21ರಿಂದ 30 ಕರಾವಳಿ ಉತ್ಸವ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವ ಕರಾವಳಿ ಉತ್ಸವವನ್ನು ಡಿಸೆಂಬರ್ 21ರಿಂದ 30ರವರೆಗೆ ಅರ್ಥಪೂರ್ಣ ಹಾಗೂ ಸಂಭ್ರಮದಿಂದ ಆಚರಿಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಪ್ರಸಕ್ತ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾರಂಪರಿಕ ಮತ್ತು ಹಿನ್ನೀರಿನ ಸಂಪನ್ಮೂಲವನ್ನು ಬಳಸಿಕೊಂಡು ಉತ್ಸವಕ್ಕೊಂದು ಥೀಮ್ ನೀಡುವ ಬಗ್ಗೆ ಹಾಗೂ ಹಿನ್ನೀರಿನಲ್ಲಿ ದೋಣಿಗಳನ್ನು ಬಳಸಿ ಕಾರ್ಯಕ್ರಮ ಆಯೋಜಿಸುವ ಬಗ್ಗೆ ಚರ್ಚೆ ನಡೆಯಿತು.

ಛಾಯಾಚಿತ್ರ ಪ್ರದರ್ಶನಗಳು, ಆಹಾರೋತ್ಸವಗಳು, ಯುವ ಉತ್ಸವಗಳನ್ನು ಆಕರ್ಷಣೀಯವಾಗಿಸುವ ಬಗ್ಗೆ ಸಲಹೆಗಳನ್ನು ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕುಮಾರ್, ಮಹಾನಗರಪಾಲಿಕೆ ಆಯುಕ್ತ ಮೊಹಮ್ಮದ್ ನಝೀರ್ ಅವರನ್ನೊಳಗೊಂಡಂತೆ ವಿವಿಧ ಸಮಿತಿಗಳ ಪ್ರತಿನಿಧಿಗಳು ಪಾಲ್ಗೊಂಡರು.


Spread the love
RedditLinkedinYoutubeEmailFacebook MessengerTelegramWhatsapp

Exit mobile version