ಡಿ. 22: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

Spread the love

ಡಿ. 22:ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪ್ರವಾಸ

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಅವರು ಡಿಸೆಂಬರ್ 22ರಂದು ಜಿಲ್ಲೆಯ ಪ್ರವಾಸ ಕೈಗೊಂಡಿದ್ದಾರೆ.

ಪ್ರವಾಸ ವಿವರ: ಡಿಸೆಂಬರ್ 22ರ ಶುಕ್ರವಾರ ಬೆಳಿಗ್ಗೆ 9.40ಕ್ಕೆ – ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, 10.15 – ಹಳೆಯಂಗಡಿಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಭೇಟಿ, 10.45 – ನಿರ್ಮಾಣ ಹಂತದಲ್ಲಿರುವ ಮುಲ್ಕಿ ಪ್ರವಾಸಿ ಮಂದಿರದ ಸ್ಥಳ ಪರಿಶೀಲನೆ, 11 ಗಂಟೆಗೆ – ಮುಲ್ಕಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ, 11.15 – ನಿರ್ಮಾಣ ಹಂತದಲ್ಲಿರುವ ಮುಲ್ಕಿ ತಾಲೂಕು ಕಚೇರಿಯ ಮಿನಿ ವಿಧಾನಸೌಧ ಕಾಮಗಾರಿ ವೀಕ್ಷಣೆ, 11.30 – ಮುಲ್ಕಿ ನಗರ ಪಂಚಾಯತ್ ನೂತನ ಕಚೇರಿ ಕಟ್ಟಡದ ಗುದ್ದಲಿ ಪೂಜೆ, 12.15 – ಮೂಡಬಿದ್ರೆ ಸರಕಾರಿ ಆಸ್ಪತ್ರೆಗೆ ಭೇಟಿ, 12.30 – ಮೂಡಬಿದ್ರೆ ತಾಲೂಕಿಗೆ ಸಂಬಂಧಪಟ್ಟ 94 ಸಿಸಿ ಹಕ್ಕು ಪತ್ರ ವಿತರಣೆ, 1 ಗಂಟೆಗೆ ಮೂಡಬಿದ್ರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ, 1.30 ಮೂಡಬಿದ್ರೆಯಿಂದ ನಿರ್ಗಮನ, 2.15 ಮಂಗಳೂರು ಸಕ್ರ್ಯೂಟ್ ಹೌಸ್ಗೆ ಆಗಮನ, ಸಂಜೆ 3 ಗಂಟೆಯಿಂದ ನಗರದ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ. ಸಂಜೆ 6.40ಕ್ಕೆ – ಮಂಗಳೂರಿನಿಂದ ಬೆಂಗಳೂರಿಗೆ ತೆರಳುವರು ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love