ಡೆಂಗ್ಯೂ ಜ್ವರದ ಬಾಲಕಿಯನ್ನು ದಾಖಲಿಸಿಕೊಳ್ಳದ ವೆನ್ಲಾಕ್ ಆಸ್ಪತ್ರೆ; ನಾಲ್ಕು ಗಂಟೆ ಅಂಬುಲೆನ್ಸಿನಲ್ಲಿ ಕಳೆದ ರೋಗಿ
ಉಡುಪಿ: ಉಡುಪಿಯ ಡೆಂಗ್ಯೂ ಜ್ವರ ಉಲ್ಬಣಗೊಂಡ ಬಾಲಕಿಯೋರ್ವಳನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ವೈದ್ಯರು ದಾಖಲಿಸಲು ನಿರಾಕರಿಸಿ ವಾಪಾಸು ಕಳುಹಿಸಿದ ಪರಿಣಾಮ ಸತತ ನಾಲ್ಕು ಗಂಟೆ ಅಂಬುಲೆನ್ಸಿನಲ್ಲಿ ಕಳೆಯಬೇಕಾದ ಕಳವಳಕಾರಿ ಘಟನೆ ವರದಿಯಾಗಿದೆ.
ಅಕ್ಟೋಬರ್ 30 ರಂದು ಕೂಲಿ ಕಾರ್ಮಿಕರಾದ ಪರಶು ಹಾಗೂ ನೀಲಮ್ಮ ದಂಪತಿಯ 10 ವರ್ಷದ ಮಗಳು ಬಾದಮ್ಮ ಅಸೌಖ್ಯದಿಂದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸುತ್ತಾರೆ. ಪರಿಕ್ಷೀಸಿದ ವೈಧ್ಯರು ಬಾಲಕಿಗೆ ಡೆಂಗ್ಯೂ ಉಲ್ಬಣಗೊಂಡಿದೆ ಬದುಕಿ ಉಳಿಯುವ ಸಾದ್ಯತೆ ಇಲ್ಲ. ಹೆಚ್ಚಿನ ಚಿಕಿತ್ಸೆಗೆ ವೆನ್ ಲಾಕ್ ಮಂಗಳೂರು ಆಸ್ಪತ್ರೆಗೆ ದಾಖಲಿಸಲು ಸೂಚಿಸಿದರು. ಹಾಗೂ ವೆನ್ ಲಾಕ್ ಆಸ್ಪತ್ರೆಗೆ ಮಾಹಿತಿ ತಿಳಿಸಿರುವುದಾಗಿ ಹೇಳಿದ್ದಾರೆ. ಪೋಷಕರು ಆ ಕೂಡಲೇ 108 ಅಂಬ್ಯುಲೆನ್ಸ್ ನಲ್ಲಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ವೆನ್ ಲಾಕ್ ಆಸ್ಪತ್ರೆಯಲ್ಲಿ ವೈದ್ಯರು ಬಾಲಕಿಯನ್ನು ದಾಖಲಿಸಲು ಮೂಲ ಸೌಕರ್ಯದ ಕೊರತೆಯ ಕಾರಣದಲ್ಲಿ ನಿರಾಕರಿಸಿದರು. ಇದರಿಂದ ಕಂಗಲಾದ ಹೆತ್ತವರು ಆಸ್ಪತ್ರೆಯವರಲ್ಲಿ ಪರಿ ಪರಿಯಾಗಿ ಬೇಡಿದರು ಬಾಲಕಿಯನ್ನು ದಾಖಲಿಸಿಕೊಳ್ಳಲು ವೆನ್ಲಾಕ್ ಆಸ್ಪತ್ರೆಯ ವೈದ್ಯರು ನಿರಾಕರಿಸಿದ್ದಾರೆ. ಕಂಗಲಾದ ಹೆತ್ತವರು ಉಡುಪಿಯ ಸರಕಾರಿ ಮಕ್ಕಳ ಆಸ್ಪತ್ರೆಯನ್ನು ಸಂಪರ್ಕಕ್ಕೆ ಪ್ರಯತ್ನಿಸಿದರೂ ಸಂಪರ್ಕ ಆಗಲಿಲ್ಲ . ಒಂದು ಗಂಟೆಯ ನಂತರ ಉಡುಪಿಯ ಆಸ್ಪತ್ರೆಯ ಅಧಿಕಾರಿ ಸಂಪರ್ಕಕ್ಕೆ ಸಿಕ್ಕಿ ನಾವು ವೆನ್ ಲಾಕ್ ನಲ್ಲಿ ದಾಖಲಿಸಲು ಪ್ರಯತ್ನಿಸುತ್ತೆವೆ ಎಂದು ಹೇಳಿದರೂ ಕೂಡ ಪ್ರಯೋಜನವಾಗಲಿಲ್ಲ. ನೊಂದ ಹೆತ್ತವರು ಸಮಾಜ ಸೇವಕ ವಿಶುಶೆಟ್ಟಿ ಅಂಬಲಪಾಡಿಯವರನ್ನು ಸಂಪರ್ಕಿಸಿದರು.
ವಿಷಯ ತಿಳಿದ ವಿಶುಶೆಟ್ಟಿಯವರು ಉಡುಪಿಯ ವೈಧ್ಯರಲ್ಲಿ ವಿಚಾರಿಸಿದಾಗ ಬಾಲಕಿಯು ಬದುಕಿ ಉಳಿಯುವ ಸಾದ್ಯತೆಯು ಇಲ್ಲ ಹಾಗಾಗಿ ನಾವು ವೆನ್ ಲಾಕ್ ಆಸ್ಪತ್ರೆಗೆ ಕಳುಹಿಸಿದ್ದೆವು ಎಂದರು. ಕೂಡಲೆ ಕಾರ್ಯ ಪ್ರವೃತರಾದ ವಿಶುಶೆಟ್ಟಿಯವರು ಮಂಗಳೂರಿನ ರಸ್ತೆಯಲ್ಲಿ ಅಂಬ್ಯುಲೆನ್ಸನಲ್ಲಿ ಚಿಂತಾಜನಕವಾಗಿದ್ದ ಬಾಲಕಿಯನ್ನು ಮತ್ತೆ 108 ಆಂಬ್ಯುಲೆನ್ಸಿನಲ್ಲಿ ಕರೆತಂದು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.