ಡ್ರಗ್ಸ್ ಕಾರ್ಕೋಟಕ ವೇಷದಿಂದ ಸಂಗ್ರಹಿತ ಹಣವನ್ನು ಅರ್ಹರಿಗೆ ಸಮರ್ಪಿಸಿದ ರಾಮಾಂಜಿ

Spread the love

ಡ್ರಗ್ಸ್ ಕಾರ್ಕೋಟಕ ವೇಷದಿಂದ ಸಂಗ್ರಹಿತ ಹಣವನ್ನು ಅರ್ಹರಿಗೆ ಸಮರ್ಪಿಸಿದ ರಾಮಾಂಜಿ

ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ಮಾದಕ ವ್ಯಸನದ ವಿರುದ್ದ ಜಿಲ್ಲಾ ಪೊಲೀಸ್ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮಕ್ಕೆ ಬೆಂಬಲವಾಗಿ ಸಾಮಾಜಿಕ ಕಾರ್ಯಕಾರ್ತ ರಾಮಾಂಜಿಯವರು ಡ್ರಗ್ಸ್ ಕಾರ್ಕೋಟಕ ಎಂಬ ವೇಷ ಧರಿಸಿ ಸಂಗ್ರಹವಾದ ಹಣವನ್ನು ಅರ್ಹ ಮೂರು ಫಲಾನುಭವಿಗಳಿಗೆ ವಿತರಿಸುವ ಸಮರ್ಪಣೆ ಕಾರ್ಯಕ್ರಮ ಬುಧವಾರ ನಗರದ ಭುಜಂಗ ಪಾರ್ಕಿನಲ್ಲಿ ನಡೆಯಿತು.

ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅರ್ಹರಿಗ ಸಹಾಯಧನ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆ ಬಳಿಕ ಮಾತನಾಡಿದ ಅವರು, ಒಂದು ಕಾರ್ಯಕ್ರಮ ಸಮಾಜಕ್ಕೆ ಒಳಿತಾಗುತ್ತದೆ ಎಂದರೆ ಅದಕ್ಕೆ ಪ್ರತಿಯೊಬ್ಬರು ಪ್ರೋತ್ಸಾಹ ನೀಡಲೇಬೇಕು. ರಾಮಾಂಜಿಯವರು ವೇಷ ಧರಿಸಿ ಅದರಿಂದ ಸಂಗ್ರಹವಾದ ಹಣವನ್ನು ಅರ್ಹರಿಗೆ ನೀಡುವ ಕೆಲಸ ಮಾಡಿರುವುದು ಶ್ಲಾಘನೀಯ. ನೀಡುವ ಮನಸ್ಸು ಎಲ್ಲರಿಗೂ ಬರುವುದಿಲ್ಲ ಅಂತಹ ಕೆಲಸವನ್ನು ಅವರು ಮಾಡಿದ್ದಾರೆ. ಸ್ವಾರ್ಥ ಬಿಟ್ಟು ಕೆಲಸ ಮಾಡುವ ರಾಮಾಂಜಿಯವರಿಗೆ ಖಂಡಿತವಾಗಿಯೂ ಪ್ರೋತ್ಸಾಹದ ಅಗತ್ಯವಿದೆ ಎಂದರು.

ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿನಿ ಚೈತನ್ಯ, ಶಿರ್ವದ ವಿದ್ಯಾವರ್ಧಕ ಸಂಘದ ಕನ್ನಡ ಶಾಲೆಗೆ ಮತ್ತು ನಮ್ಮ ಭೂಮಿ ಸಂಸ್ಥೆಗೆ ಸಂಗ್ರಹವಾದ ಹಣವನ್ನು ವಿತರಿಸಲಾಯಿತು.

ರಾಷ್ಟ್ರಪ್ರಶಸ್ತಿ ವಿಜೇತ ನಿವೃತ್ತ ಶಿಕ್ಷಕ ಕುದಿ ವಸಂತ ಶೆಟ್ಟಿ ಆಶಯ ಭಾಷಣ ಮಾಡಿದರು. ನಿವೃತ್ತ ಕನ್ನಡ ಉಪನ್ಯಾಸಕ ಜಿ.ಎಸ್.ಶ್ರೀಧರಮೂರ್ತಿ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ನಮ್ಮ ಭೂಮಿ ಸಂಸ್ಥೆಯ ದಾಮೋದರ ಆಚಾರ್ಯ, ಶಿರ್ವದ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ವೈ ಭಾಸ್ಕರ್ ಶೆಟ್ಟಿ, ಶಿರ್ವದ ವಿದ್ಯಾವರ್ಧಕ ಸಂಘದ ಸಂಚಾಲಕ ವಿ.ಸುಬ್ಬಯ್ಯ, ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸಂತೋಷ್ ಸರಳೇಬೆಟ್ಟು ಹಾಗೂ ಇತರರು ಉಪಸ್ಥಿತರಿದ್ದರು.

ಹರಿಪ್ರಸಾದ್ ಸ್ವಾಗತಿಸಿ ಪ್ರೆಸ್ ಕ್ಲಬ್ ಉಡುಪಿ ಇದರ ಸಂಚಾಲಕ ನಾಗರಾಜ ರಾವ್ ಕಾರ್ಯಕ್ರಮ ನಿರೂಪಿಸಿದರು.


Spread the love