Home Mangalorean News Kannada News ತಂತ್ರಜ್ಞಾನದ ಯುಗಕ್ಕೆ ಸರಿಯಾಗಿ ವಿದ್ಯಾಸಂಸ್ಥೆಗಳು ಬದಲಾಗಬೇಕು: ಆರ್. ಬಿ. ನಾಯಕ್

ತಂತ್ರಜ್ಞಾನದ ಯುಗಕ್ಕೆ ಸರಿಯಾಗಿ ವಿದ್ಯಾಸಂಸ್ಥೆಗಳು ಬದಲಾಗಬೇಕು: ಆರ್. ಬಿ. ನಾಯಕ್

Spread the love

ತಂತ್ರಜ್ಞಾನದ ಯುಗಕ್ಕೆ ಸರಿಯಾಗಿ ವಿದ್ಯಾಸಂಸ್ಥೆಗಳು ಬದಲಾಗಬೇಕು: ಆರ್. ಬಿ. ನಾಯಕ್

ಕುಂದಾಪುರ: ತಂತ್ರಜ್ಞಾನದ ಯುಗಕ್ಕೆ ಸರಿಯಾಗಿ ವಿದ್ಯಾಸಂಸ್ಥೆಗಳು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್. ಬಿ. ನಾಯಕ್ ಅವರು ಹೇಳಿದರು

ಅವರು ಕುಂದಾಪುರದ ಆರ್. ಎನ್. ಶೆಟ್ಟಿ ಕಲ್ಯಾಣ ಭವನದಲಲ್ಇ ನಡೆದ ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಕಾಲೇಜಿನ ವೆಬ್ ಸೈಟ್ ಉದ್ಘಾಟಿಸಿ ಮಾತನಾಡಿದರು.

ಬದಲಾಗುತ್ತಿರುವ ತಂತ್ರಜ್ಞಾನದ ಯುಗಕ್ಕೆ ಜಗತ್ತೇ ಹೊಂದಾಣಿಕೆಯನ್ನು ಮಾಡಿಕೊಳ್ಳುವ ಈ ವೇಳೆಯಲ್ಲಿ ಶಿಕ್ಷಣ ಸಂಸ್ಥೆಗಳು ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ತಂತ್ರಜ್ಞಾನ ಯುಗದಲ್ಲಿ ಶೈಕ್ಷಣಿಕ ಸಂಸ್ಥೆಗಳಿಗೆ ತಮ್ಮದೇ ಆದ್ ವೆಬ್ ಸೈಟ್ ಹೊಂದುವುದರಿಂದ ಸಂಸ್ಥೆಗೆ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಹಾಗೂ ಸಾರ್ವಜನಿಕರಿಗೆ ಉಪಯೋಗವಾಗಲಿದೆ ಎಂದರು.

image001sagar-kavacha-udupi-dc-meet

ಮುಖ್ಯ ಅತಿಥಿ ಇಂಡಿಯನ್ ಪಿಡಿಯಾಟ್ರಿಕ್ಸ್ ಆಕಾಡೆಮಿಯ ನಿಯೋಜಿತ ಅಧ್ಯಕ್ಷ ಡಾ. ಸಂತೋಷ್ ಸೋನ್ಸ್ ಮಾತನಾಡಿ ದೇಶದ ಗ್ರಾಮೀಣ ಭಾಗಗಳು ಸೇರಿದಂತೆ ಹೆಚ್ಚಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳು ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ತಮ್ಮಲ್ಲಿರುವ ಬುದ್ದಿವಂತಿಕೆಯನ್ನು ಉಪಯೋಗಿಸಿಕೊಂಡು ಸಾಧನೆ ಮಾಡಬೇಕು ಎಂದರು.

ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ. ಎಂ. ಸುಕುಮಾರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.  ಸರಿತಾ ಸೋನ್ಸ್ ಬಹುಮಾನ ವಿತರಿಸಿದರು. ಆಡಳಿತ ಮಂಡಳಿಯ ಸೋಲಮನ್ ಸೋನ್ಸ್, ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ, ಜೊತೆ ಕಾರ್ಯದರ್ಶಿ ಸುಧಾಕರ ಶೆಟ್ಟಿ ಬಾಂಡ್ಯ, ಸದಸ್ಯರಾದ ಡಾ ಎಂ ವಿ ಕುಲಾಲ, ಡಾವೈ ಎಸ್ ಹೆಗ್ಡೆ, ಕಾಲೇಜು ವಿದ್ಯಾರ್ಥಿ ನಾಯಕ ಸುಮಂತ್ ಶೆಟ್ಟಿ ಉಪಸ್ಥಿತರಿದ್ದರು.

ಆರ್ ಬಿ ನಾಯಕ್ ಹಾಗೂ ಡಾ. ಸಂತೋಷ್ ಸೋನ್ಸ್ ದಂಪತಿಯನ್ನು ಸನ್ಮಾನಿಸಲಾಯಿತು. ಕುಂದಾಪುರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷ ಪ್ರೋ. ಎಪಿ ಮಿತ್ತಂತ್ತಾಯ ಸ್ವಾಗತಿಸಿ, ಪ್ರಾಂಶುಪಾಲ ನವೀನ್ ಕುಮಾರ್ ಶೆಟ್ಟಿ ವರದಿ ಮಂಡಿಸಿದರು. ಉಪನ್ಯಾಸಕಿ ಜಯಶೀಲ ಪೈ ಹಾಗೂ ಲೋನಾ ಲೂವಿಸ್ ಸನ್ಮಾನ ಪತ್ರ ವಾಚಿಸಿದರು. ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ವನಿತಾ ಆಳ್ವಾ ವಂದಿಸಿದರು. ವಿದ್ಯಾರ್ಥಿನಿಯರಾದ ಫಾತಿಮಾ ನೂಹ ಹಾಗೂ ಅಮೃತ ಜೆ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


Spread the love

Exit mobile version