Home Mangalorean News Kannada News ತಮಿಳುನಾಡಿನಲ್ಲಿ ಭೀಕರ ಅಪಘಾತ: ಕುಂದಾಪುರದ ಉದ್ಯಮಿ ಸುನೀಲ್ ಚಾತ್ರ ಮೃತ್ಯು

ತಮಿಳುನಾಡಿನಲ್ಲಿ ಭೀಕರ ಅಪಘಾತ: ಕುಂದಾಪುರದ ಉದ್ಯಮಿ ಸುನೀಲ್ ಚಾತ್ರ ಮೃತ್ಯು

Spread the love

ತಮಿಳುನಾಡಿನಲ್ಲಿ ಭೀಕರ ಅಪಘಾತ: ಕುಂದಾಪುರದ ಉದ್ಯಮಿ ಸುನೀಲ್ ಚಾತ್ರ ಮೃತ್ಯು

ಕುಂದಾಪುರ: ಶ್ರೀ ದುರ್ಗಾಂಬಾ ಮೋಟಾರ್ಸ್ ಪಾಲುದಾರರೊಬ್ಬರಾಗಿದ್ದ ಎಸ್.ಸುನೀಲ್ ಚಾತ್ರ (42) ಶುಕ್ರವಾರ ಮಧ್ಯಾಹ್ನ ತಮಿಳುನಾಡಿನ ಕರೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.

ಕರೂರು ಹೊರ ವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆಯಿಂದ ಹೊರಕ್ಕೆ ಉರುಳಿ ಬದಿಯಲ್ಲಿನ ತಡೆಗೋಡೆಗೆ ಅಪ್ಪಳಿಸಿದೆ. ಈ ವೇಳೆ ತಲೆಗೆ ತೀವೃವಾದ ರಕ್ತ ಸ್ತ್ರಾವದಿಂದಾಗಿ ಸುನೀಲ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಉತ್ತರ ಭಾರತದ ಮೂಲದ ಚಾಲಕನಿಗೂ ಅಪಘಾತದಿಂದಾಗಿ ತೀವೃವಾದ ಗಾಯಗಳುಂಟಾಗಿದ್ದು ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಲಾಗಿದೆ. ಆತನ ಪರಿಸ್ಥಿತಿಯೂ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಸುನೀಲ್ ಅವರ ಸ್ನೇಹಿತ ವರ್ಗ ಹೇಳುವ ಪ್ರಕಾರ ಹೆದ್ದಾರಿಯಲ್ಲಿ ವೇಗವಾಗಿ ಹೋಗುತ್ತಿದ್ದ ವೇಳೆ ಅಡ್ಡವಾಗಿ ಬಂದ ಸೈಕಲ್ ಸವಾರರೋರ್ವನ ರಕ್ಷಣೆಗಾಗಿ ಆಕಸ್ಮಿಕವಾಗಿ ಬ್ರೇಕ್ ಅದುಮಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.


Spread the love

Exit mobile version