Home Mangalorean News Kannada News ತಲಿಚೆರಿ: ಕೇರಳದಲ್ಲಿ ನಾಡಬಾಂಬ್ ಸ್ಪೋಟಕ್ಕೆ ಇಬ್ಬರ ಬಲಿ

ತಲಿಚೆರಿ: ಕೇರಳದಲ್ಲಿ ನಾಡಬಾಂಬ್ ಸ್ಪೋಟಕ್ಕೆ ಇಬ್ಬರ ಬಲಿ

Spread the love

ತಲಿಚೆರಿ: ರಾಜಕೀಯವಾಗಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಕಣ್ಣೂರು ಜಿಲ್ಲೆಯ ತಲಿಚೆರಿಯಲ್ಲಿ ಶನಿವಾರ ನಾಡ ಬಾಂಬ್ ಸ್ಪೋಟಗೊಂಡಿದ್ದು, ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

1478695

 

ಮೃತರನ್ನು ಸಿಪಿಐ(ಎಂ) ಕಾರ್ಯಕರ್ತರು ಎಂದು ಗುರುತಿಸಲಾಗಿದ್ದು, ಗಾಯಗೊಂಡವರನ್ನು ಕೊಯಿಕೋಡ್​ನ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಬಾಲಕಿರಣ್ ತಿಳಿಸಿದ್ದಾರೆ.

ಇಲ್ಲಿನ ಪನ್ನೂರು ಸಮೀಪದ ಕೊಲ್ಲವಲ್ಲೂರು ಎಂಬಲ್ಲಿ ಕೆಲವು ವ್ಯಕ್ತಿಗಳು ಅಕ್ರಮವಾಗಿ ನಾಡಬಾಂಬ್​ಗಳನ್ನು ತಯಾರಿಸುತ್ತಿದ್ದರು ಎನ್ನುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಗೃಹ ಸಚಿವ ರಮೇಶ್ ಚೆನ್ನಿತ್ತಾಲ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಕೂಡಲೇ ತನಿಖೆ ನಡೆಸಿ ವರದಿ ನೀಡುವಂತೆ ಡಿಜಿಪಿ ಟಿ.ಪಿ.ಸೇನ್​ಕುಮಾರ್​ಗೆ ಆದೇಶಿಸಿದ್ದಾರೆ.

ಘಟನೆ ಕೇರಳದಲ್ಲಿ ಬಿಜೆಪಿ ಹಾಗೂ ಸಿಪಿಐ(ಎಂ) ಮುಖಂಡರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಅಲ್ಲದೇ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಘರ್ಷಣೆಗೆ ಕಾರಣವಾಗುವ ಆತಂಕ ನಿರ್ಮಾಣವಾಗಿದೆ.


Spread the love

Exit mobile version