ತಳಮಟ್ಟದಿಂದ ಕಾರ್ಯಕರ್ತರ ಸಂಘಟನೆ ಜೆಡಿಎಸ್ ಉದ್ದೇಶ: ಅಕ್ಷಿತ್ ಸುವರ್ಣ
ಮಂಗಳೂರು: ದಕ್ಷಿಣಕನ್ನಡ ಜಿಲ್ಲಾ ಯುವ ಜನತಾದಳ (ಜಾ) ವತಯಿಂದ ಪಕ್ಷ ಸಂಘಟನೆಯ ಬಗಗೆ ತಳಮಟ್ಟದ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷ ಸಂಘಟನೆಯ ಬಗ್ಗೆ ಸಮಾಲೋಚನಾ ಸಭೆ ಇತ್ತೀಚೆಗೆ ಪಕ್ಷದ ಕಛೇರಿಯಲ್ಲಿ ಜರುಗಿತು.
ಈ ವೇಳೆ ಜಿಲ್ಲಾ ಯುವಜನತಾದಳದ ಅಧ್ಯಕ್ಷರಾದ ಅಕ್ಷಿತ್ ಸುವರ್ಣರವರು ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಸಂಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಮುಂದಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಬಗ್ಗೆ ಜನರಲ್ಲಿ ಹಾಗೂ ಕಾರ್ಯಕರ್ತರಲ್ಲಿ ತಿಳುವಳಿಕೆ ನೀಡುವುದು ಹಾಗೂ ಜಾತ್ಯಾತೀತ ಜನತಾದಳದ ಮುಂದಿನ ಯೋಜನೆಗಳನ್ನು ಜನರಲ್ಲಿ ಮನವರಿಕೆ ಮಾಡಿಸುವುದು ಯುವಜನತಾದಳದ ಮುಖ್ಯ ಉದ್ದೇಶವಾಗಿದ್ದು, ಕಾರ್ಯಕರ್ತರೆಲ್ಲರನ್ನೂ ಪ್ರತಿಯೊಂದು ಸಭೆಯಲ್ಲಿ ಭಾಗವಹಿಸಿ ದಕ ಜಿಲ್ಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಬೇಕೆಂದು ಕರೆ ನೀಡಿದರು.
ಸಭೆಯಲ್ಲಿ ಯುವ ಜನತಾದಳದ ರಾಜ್ಯ ನಾಯಕರಾದ ಶ್ರೀನಾಥ್ ರೈ, ಜಿಲ್ಲಾ ನಾಯಕರಾದ ಮಧುಸೂಧನ್ ಗೌಡ, ಲಿಖಿತ್ ರಾಜ್, ರಘುವೀರ್ ಸೂಟರ್ ಪೇಟೆ, ತೇಜಸ್ ಶೆಟ್ಟಿ, ಜೀವನ್ ನಾರ್ಕೋಡ್, ಇಸ್ಮಾಯಿಲ್ ಷರೀಪ್, ಚಂದ್ರಶೇಖರ್, ಹರಿಪ್ರಸಾದ್, ಸುಶಾಂತ್ ರೈ, ಶಿಯಾದ್, ದೀಪಕ್, ಗುರು ಸಾಲಿಯಾನ್, ಸಂಜಯ್ ಮೊಹಮ್ಮದ್ ಇಕ್ಬಾಲ್ ಉಪಸ್ಥಿತರಿದ್ದರು.