Home Mangalorean News Kannada News ತಾಯಿಗೆ ಮೊದಲು ಸೂಕ್ತ ನೆಲೆಯನ್ನು ಒದಗಿಸಿ ಬಳಿಕ ಮಾತೃಭಾಷೆಯ ಹೋರಾಟ ನಡೆಸಿ ; ಕೇಮಾರು ಸ್ವಾಮೀಜಿ

ತಾಯಿಗೆ ಮೊದಲು ಸೂಕ್ತ ನೆಲೆಯನ್ನು ಒದಗಿಸಿ ಬಳಿಕ ಮಾತೃಭಾಷೆಯ ಹೋರಾಟ ನಡೆಸಿ ; ಕೇಮಾರು ಸ್ವಾಮೀಜಿ

Spread the love

ತಾಯಿಗೆ ಮೊದಲು ಸೂಕ್ತ ನೆಲೆಯನ್ನು ಒದಗಿಸಿ ಬಳಿಕ ಮಾತೃಭಾಷೆಯ ಹೋರಾಟ ನಡೆಸಿ ; ಕೇಮಾರು ಸ್ವಾಮೀಜಿ

ಕುಂದಾಪುರ: ಹಿಂದೂ ಧರ್ಮದ ಉದ್ದಾರ ಕೇವಲ ಬೊಬ್ಬೆ ಹಾಕುವುದರಿಂದ ಸಾಧ್ಯವಿಲ್ಲ ಬದಲಾಗಿ ಧರ್ಮದ ಜ್ಞಾನವನ್ನು ಹೊಂದುವುದರೊಂದಿಗೆ ಹಬ್ಬದ ಆಚರಣೆಗಳಲ್ಲಿ ಅನ್ಯಾಯ ಹಿಂಸೆಯನ್ನು, ಕುಡಿದು ನರ್ತಿಸುವುದನ್ನು ನಿಲ್ಲಿಸುವುದರ ಮೂಲಕ ಹಿಂದೂ ಧರ್ಮದ ರಕ್ಷಣೆ ನಡೆಯಬೇಕು ಎಂದು ಕೇಮಾರು ಮಠದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದ್ದಾರೆ.

ಅವರು ಹೆಮ್ಮಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ರಜತ ಮಹೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಎಲ್ಲೆಲ್ಲೂ ಬ್ಯಾನರ್ ಹಾಕಿಕೊಂಡು ಗರ್ವದಿಂದ ಘರ್ಜಿಸು ತಾನು ಹಿಂದೂ ಎಂದು ಎನ್ನುವ ವ್ಯಕ್ತಿಗೆ ಭಗವದ್ಗೀತೆಯ ಕುರಿತು ಒಂದಿಷ್ಟು ಜ್ಞಾನವಿರುವುದಿಲ್ಲ. ಗಣೇಶೋತ್ಸವ ಆಚರಣೆಯ ನೆಪದಲ್ಲಿ ಕುಡಿದು ಕುಣಿಯುವುದನ್ನು ನಿಲ್ಲಿಸುವ ಕೆಲಸ ನಡೆಯಬೇಕು ಅಲ್ಲದೆ ಹಿಂದೂ ಸಂಸ್ಕೃತಿಯ ಚೌಕಟ್ಟಿನಲ್ಲೇ ಹಬ್ಬದ ಆಚರಣೆ ನಡೆಯಬೇಕು ಎಂದರು.

ಇಂದು ದೇಶದಲ್ಲಿ ವೃದ್ಧಾಶ್ರಮದಲ್ಲಿ ವೃದ್ಧರ ಸಂಖ್ಯೆ ಹೆಚ್ಚಾಗುತ್ತಿರುವುದು ದೊಡ್ಡ ದುರಂತ ವಾಗಿದ್ದು, ಮಾತೃಭಾಷೆಗಾಗಿ ಹೋರಾಟಗಳು ನಡೆಯುತ್ತಿವೆ, ಆದರೆ ಇಂತಹ ಹೋರಾಟಗಾರರು ಮೊದಲು ತಮ್ಮ ತಾಯಿಗೆ ಸೂಕ್ತವಾದ ನೆಲೆಯನ್ನು ಒದಗಿಸಿ ಬಳಿ ಮಾತೃಭಾಷೆಯ ಹೋರಾಟ ನಡೆಸಲಿ. ತಾಯಿಗಿಂತ ಮಠ, ದೇವಸ್ಥಾನಗಳು ದೊಡ್ಡದಲ್ಲ. ದೇವಸ್ಥಾಗಳು, ಪ್ರಾರ್ಥನಾ ಮಂದಿರಗಳು ಇಂದು ವ್ಯಾಪಾರದ ಕೇಂದ್ರವಾಗಿ ಮಾರ್ಪಟ್ಟಿದ್ದು, ಪಾಶ್ಚಿಮಾತ್ಯ ಸಂಸ್ಕೃತಿ ಭಾರತಕ್ಕೆ ಕಾಲಿಟ್ಟಿದೆ. ಇಂದಿನ ಮಕ್ಕಳಲ್ಲಿ ಆತ್ಮಶಕ್ತಿ ಕುಂದುತ್ತಿವೆ ಇದರ ಪರಿಣಾಮವಾಗಿ ಆತ್ಮಹತ್ಯೆಗಳು ಹೆಚ್ಚಾಗುತ್ತಿದ್ದು  ಮಕ್ಕಳಿಗೆ ನೈತಿಕ ಶಿಕ್ಷಣ ನೀಡುವ ಕೆಲಸ ನಡೆಯಬೇಕು ಎಂದರು.

ಸಭೆಯಲ್ಲಿ ಬೈಂದೂರು ಶಾಸಕ ಗೋಪಾಲ ಪೂಜಾರಿ, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಉದ್ಯಮಿ ಸುಕುಮಾರ್ ಶೆಟ್ಟಿ, ಪತ್ರಕರ್ತ ಶಶಿಧರ ಹೆಮ್ಮಾಡಿ ಹಾಗೂ ಇತರರು ಉಪಸ್ಥಿತರಿದ್ದರು.


Spread the love

Exit mobile version