Home Mangalorean News Kannada News ತಾಯಿಯ ಎದೆ ಹಾಲು ಅಮೃತ ಹಾಗೂ ಸಂಜೀವಿನಿ : ಡಾ|| ಶೋಭರಾಣಿ

ತಾಯಿಯ ಎದೆ ಹಾಲು ಅಮೃತ ಹಾಗೂ ಸಂಜೀವಿನಿ : ಡಾ|| ಶೋಭರಾಣಿ

Spread the love

ತಾಯಿಯ ಎದೆ ಹಾಲು ಅಮೃತ ಹಾಗೂ ಸಂಜೀವಿನಿ : ಡಾ|| ಶೋಭರಾಣಿ

ಮ0ಗಳೂರು :  ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ, ಸಮುದಾಯ ಆಹಾರ ಮತ್ತು ಪೋಷಣ ಮಂಡಳಿ, ಮಂಗಳೂರು ಹಾಗೂ ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ “ಸ್ತನ್ಯಪಾನ ಸಪ್ತಾಹ” ಅಂಗವಾಗಿ ಕಾರ್ಯಾಗಾರವನ್ನು ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು, ಅಶೋಕನಗರ, ಮಂಗಳೂರು ಇಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಾಗಾರದ ಉದ್ಘಾಟನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೂಪಣಾಧಿಕಾರಿ ಎಸ್. ನಟರಾಜ್ ನೆರವೇರಿಸಿ ಮಕ್ಕಳ ಮರಣವನ್ನು ತಡೆಗಟ್ಟಲು ಹಾಗೂ ಮಗು ಆರೋಗ್ಯವಾಗಿ ಬೆಳೆದು ಸಮಾಜದ ಆಸ್ತಿಯಾಗಲು ತಾಯಂದಿರು ಮಗು ಜನಿಸಿದ ಅರ್ಧ ಗಂಟೆಯೊಳಗಾಗಿ ಎದೆಹಾಲನ್ನು ನೀಡಬೇಕು. ಮತ್ತು 6 ತಿಂಗಳವರೆಗೆ ತಾಯಿಯ ಎದೆ ಹಾಲು ಹೊರತುಪಡಿಸಿ ಬೇರೆನೂ ನಿಡಬಾರದು ಹಾಗೂ ತಾಯಿ ಮತ್ತು ಮಗಿವಿನ ಬಾಂಧವ್ಯ ಹೆಚ್ಚಿಸಲು ತಾಯಿಯ ಎದೆಹಾಲು ಬಹಳ ಮುಖ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ, ಸರ್ಕಾರಿ ಆರ್ಯುವೇದ ಆಸ್ಪತ್ರೆ, ಮಂಗಳೂರು ಇದರ ವೈದ್ಯೆ ಡಾ|| ಶೋಭರಾಣಿ ಮಾತನಾಡಿ ತಾಯಿಯ ಎದೆ ಹಾಲು ಅಮೃತ ಹಾಗೂ ಸಂಜೀವಿನಿ, ಗಟ್ಟಿ ರೂಪದ ಗಿಣ್ಣಿನ ಹಾಲನ್ನು ಮಗುವಿಗೆ ನೀಡುವುದರಿಂದ ರೋಗ ನಿರೋಧಕ ಶಕ್ತಿ ವೃದ್ಧಿಸಿ ಮಗು ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಗರ್ಭಿಣಿ ಮತ್ತು ಬಾಣಂತಿಯ ಅವಧಿಯಲ್ಲಿ ಮಹಿಳೆಯರು ಹೆಚ್ಚು ಪೌಷ್ಟಿಕ ಭರಿತವಾದ ಸೊಪ್ಪು-ತರಕಾರಿ-ಹಣ್ಣು-ಮೀನು-ಮಾಂಸವನ್ನು ಸೇವಿಸಬೇಕು ಎಂದು ತಿಳಿಸಿದರು.

ಕಾರ್ಯಾಗಾರದಲ್ಲಿ ಶಿವದರ್ಶನ್ ತ್ರಿಪಾಠಿ, ಪ್ರಾತ್ಯಕ್ಷತಾ ಅಧಿಕಾರಿ, ಆಹಾರ ಮತ್ತು ಪೌಷ್ಟಿಕ ಮಂಡಳಿ, ಮಂಗಳೂರು ಇವರು ತಾಯಿಯ ಎದೆ ಹಾಲಿನ ಮಹತ್ವ ಕುರಿತು ಶಿಬಿರಾರ್ಥಿಗಳಿಗೆ ಸಾಕ್ಷ್ಯಚಿತ್ರಗಳ ಮುಖಾಂತರ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ||ಸಂತೋಷ್, ಪ್ರಾಂಶುಪಾಲರು, ಕರ್ನಾಟಕ ಆಯುರ್ವೇದ ಮೆಡಿಕಲ್ ಕಾಲೇಜು, ಮಂಗಳೂರು ಇವರು ವಹಿಸಿದ್ದರು.


Spread the love

Exit mobile version