ತಾಯಿ ದೇಯಿ ಬೈದೇತಿ ಮೂರ್ತಿಯನ್ನು ಅಸಹ್ಯಕರ ರೀತಿಯಲ್ಲಿ ಸ್ಪರ್ಪಿಸಿ ಅವಮಾನ; ಹಿಂಜಾವೇ ಖಂಡನೆ
ಮಂಗಳೂರು: ಪಡುಮಲೆಯ ತಾಯಿ ದೇಯಿ ಬೈದೇತಿಯ ಪರಮ ಪವಿತ್ರ ಕ್ಷೇತ್ರದಲ್ಲಿ ತಾಯಿಯ ಮೂರ್ತಿಯನ್ನು ಅಸಹ್ಯಕರವಾದ ರೀತಿಯಲ್ಲಿ ಸ್ಪರ್ಷಿಸಿ,ಆ ಚಿತ್ರವನ್ನು ಸಾಮಾಜಿಕ ತಾಣದಲ್ಲಿ ಹರಿಯ ಬಿಟ್ಟಿದ್ದಾನೆ ಎಂದು ಹಿಂದೂ ಜಾಗರಣಾ ವೇದಿಕೆ ಆರೋಪಿಸಿದೆ.
ದೇಯಿ ಬೈದೇತಿ ಎಂಬ ಮಹಾನ್ ಶಕ್ತಿಗೆ ಅಪಮಾನವೆಸಗಿದ್ದಾನೆ.ಬಿಲ್ಲವ ಸಮುದಾಯದ ಮೂಲಶಕ್ತಿಯಾಗಿ ಪರಿಚಿತಗೊಂಡಿರುವ ತಾಯಿಗೆ ಈ ರೀತಿಯ ಅಪಮಾನವೆಸಗಿದ್ದು, ಈಕೆ ಕೇವಲ ಬಿಲ್ಲವ ಸಮಾಜಕ್ಕೆ ಮಾತ್ರವಲ್ಲ ಇಡೀ ಕರಾವಳಿ ಪ್ರದೇಶದ ಒಂದು ಶಕ್ತಿ.ಹಿಂದುಗಳ ಪೂಜ್ಯ ಭಾವನೆಗಳ ಜೊತೆ ಚೆಲ್ಲಾಟವಾಡುವವುದನ್ನು ವೇದಿಕೆ ಖಂಡಿಸಿದೆ ಅಲ್ಲದೆ ಸೂಕ್ತ ಶಿಕ್ಷೆಯನ್ನು ಕಾನೂನು ನೀಡಬೇಕು ಎಂದು ಆಗ್ರಹಿಸಿದೆ..