ತೀಯಾ ಸಮಾಜದ ವತಿಯಿಂದ ನಾರಾಯಣಗುರು ಜಯಂತಿ ಆಚರಣೆ

Spread the love

ತೀಯಾ ಸಮಾಜದ ವತಿಯಿಂದ ನಾರಾಯಣಗುರು ಜಯಂತಿ ಆಚರಣೆ

ಮುಂಬಯಿ : ತೀಯಾ ಸಮಾಜದ ಕುಲಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಉತ್ಸವವನ್ನು ಕೇರಳದ ಪ್ರಮುಖ ಹಬ್ಬವಾದ ಓಣಂ ಸಮಯದಲ್ಲೇ ಜಗತ್ತಿನಾದ್ಯಂತ ಆಚರಿಸಲಾಗುತ್ತಿದ್ದು, ಗುರುಗಳು ಸಮಾಜ ಬಾಂಧವರಿಗೆ ದೇವಸ್ಥಾನವನ್ನು ನಿರ್ಮಿಸಿ ದೇವಸ್ಥಾನ ಪ್ರವೇಶಿಸುವ ಪುಣ್ಯ ಕಾರ್ಯವನ್ನು ಮಾಡಿದ್ದು, ಇದೀಗ 75 ನೆಯ ವರ್ಷದಲ್ಲಿರುವ ತೀಯಾ ಸಮಾಜವು ಗುರುಗಳ ಆದೇಶದಂತೆ ಬಲಯುತವಾಗಲಿ ಎಂದರು.

ತೀಯಾ ಸಮಾಜದ ವತಿಯಿಂದ ಆ. 26ರಂದು ಘಾಟ್ ಕೊಪರ್ ಪಶ್ಚಿಮ ತೀಯಾ ಸಮಾಜದ ಕಾರ್ಯಾಲಯದಲ್ಲಿ ಜರಗಿದ 164ನೇ ನಾರಾಯಣ ಗುರು ಜಯಂತಿಯ ಆಚರಣೆಯ ಸಂದರ್ಭದಲ್ಲಿ ಮಾತನಾಡುತ್ತಾ ಸಮಾಜದ ಅಭಿವೃದ್ದಿಗಾಗಿ ನಾವೆಲ್ಲರೂ ನಮ್ಮ ಗುರುಗಳಾದ ನಾರಾಯಣಗುರುಗಳ ತತ್ವವನ್ನು ಅನುಸರಿಸಿ ಮುಂದುವರಿಯೋಣ ಎಂದರು.

ಪದ್ಮನಾಭ ಸುವರ್ಣ ಮತ್ತು ಹರೀಶ್ ಕುಂದರ್ ಇವರ ಮಾರ್ಗದರ್ಶನದಲ್ಲಿ ಪೂಜಾ ವಿಧಿ ಹಾಗೂ ಭಜನಾ ಕಾರ್ಯಕ್ರಮಗಳು ನೆರವೇರಿತು. ತೀಯಾ ಸಮಾಜದ ಟ್ರಷ್ಟಿ ಟಿ, ಬಾಬು ಬಂಗೇರ, ಪ್ರಧಾನ ಕಾರ್ಯದರ್ಶಿ ಈಶ್ವರ ಎಂ. ಐಲ್, ಕೋಶಾಧಿಕಾರಿ ರಮೇಶ್ ಉಳ್ಳಾಲ್, ವಲಯ ಸಮಿತಿಯ ಕಾರ್ಯಾಧ್ಯಕ್ಷರುಗಳಾದ ಮೋಹನ್ ಬಿ. ಎಂ. ಮತ್ತು ಬಾಬು ಕೋಟ್ಯಾನ್, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪದ್ಮಿನಿ ಕೋಟೆಕ್ಕಾರ್, ಆರೋಗ್ಯ ನಿಧಿಯ ಕಾರ್ಯಾಧ್ಯಕ್ಷೆ ದಿವ್ಯಾ ಆರ್. ಕೋಟ್ಯಾನ್, ಸಮಾಜದ ಜೊತೆ ಕಾರ್ಯಾದರ್ಶಿಗಳಾದ ನ್ಯಾ. ಸದಾಶಿವ ಬಿ. ಕೆ. ಮತ್ತು ನಾರಾಯಣ ಸುವರ್ಣ, ಸಮಾಜದ ಕಾರ್ಯಾಕಾರಿ ಸಮಿತಿಯ ಸದಸ್ಯರುಗಳಾದ ಸುರೇಶ್ ಬಂಗೇರ, ಅಶ್ವಿನ್ ಬಂಗೇರ, ಚಂದ್ರಶೇಖರ ಕೆ. ಬಿ. ಪುರುಷೋತ್ತಮ ಕೋಟೆಕ್ಕಾರ್, ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷರುಗಳಾದ ವೃಂದಾ ದಿನೇಶ್ ಮತ್ತು ಉಜ್ವಲ್ ಚಂದ್ರಶೇಖರ್, ಹಿರಿಯ ಸದಸ್ಯರಾದ ಆನಂದ ಕರ್ಕೇರ, ವಲಯ ಸಮಿತಿಯ ಪದಾಧಿಕಾರಿಗಳಾದ ದಿವಿಜಾ ಚಂದ್ರಶೇಖರ್, ಸಾಗರ್ ಕಟೀಲ್, ನಿತ್ಯೋದಯ ಉಳ್ಲಾಲ್, ಶಶಿಧರ ಬಿ,ಎಂ. ಚಂದ್ರಶೇಖರ ಸಾಲ್ಯಾನ್, ಲಲಿತಾ ಚಂದ್ರಶೇಖರ್ ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ಭಜನೆ, ಮಂಗಳಾರತಿ ಬಳಿಕ ಪ್ರಸಾದ ವಿತರಣೆ ಮತ್ತು ಲಘು ಉಪಹಾರದೊಂದಿಗೆ ಪೂಜಾ ಕಾರ್ಯಾಕ್ರಮವು ಮುಕ್ತಾಯಗೊಂಡಿತು.


Spread the love