ತೀಯಾ ಸಮಾಜ ಯುಎಇ ವತಿಯಿಂದ ವಾರ್ಷಿಕ ದುರ್ಗಾ ಪೂಜೆ

Spread the love

ತೀಯಾ ಸಮಾಜ ಯುಎಇ ವತಿಯಿಂದ ವಾರ್ಷಿಕ ದುರ್ಗಾ ಪೂಜೆ

ದುಬಾಯಿ : ಹದಿನೈದು ವರ್ಷಗಳ ಹಿಂದೆ ದುಬಾಯಿಯಲ್ಲಿ ಸ್ಥಾಪನೆಯಾದ ತೀಯಾ ಸಮಾಜ (ಮಲಯಾಳೀ ಬಿಲ್ಲವ)ದ ಏಕೈಕ ಸಾಗರೋತ್ತರ ಸಂಘಟನೆ ತೀಯಾ ಸಮಾಜ ಯು.ಎ.ಇ. ಮುಂದಿನ ಫೆಬ್ರವರಿ ತಿಂಗಳಲ್ಲಿ ಹದಿನೈದು ವರ್ಷ ಪೂರೈಸಲಿದ್ದು ವಾರ್ಷಿಕ ದುರ್ಗಾ ಪೂಜೆ ಸಮಾರಂಭವು ಅಧ್ಯಕ್ಷರಾದ ಮನೀಶ್ ಕರ್ಕೇರ ಇವರ ನೇತೃತ್ವದಲ್ಲಿ ನ. 2ರಂದು ಬರ್ ದುಬಾಯಿಯ ಸಿಂಧಿ ಸಭಾಗೃಹದಲ್ಲಿ ನಡೆಯಿತು.

ರಘು ಮತ್ತು ಭಟ್ ಇವರು ಪೂಜಾ ವಿಧಿಯನ್ನು ನೆರವೇರಿಸಿದ್ದು, ಸಮಾಜದ ಸದಸ್ಯರಾದ ರವಿ ಕೋಟ್ಯಾನ್ ಮತ್ತು ಭಾಗ್ಯಲಕ್ಷ್ಮಿ ಕೋಟ್ಯಾನ್ ದಂಪತಿ ಪೂಜಾ ವಿಧಿಯಲ್ಲಿ ಪಾಲ್ಗೊಂಡಿದ್ದರು.

ಈ ಸಂಧರ್ಭದಲ್ಲಿ ಸಮಾಜದ ಎಳೆಯ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆಯನ್ನೂ ಏರ್ಪಡಿಸಲಾಯಿತು. ತೀಯಾ ಸಮಾಜದ ಯುಎಇ ಇದರ ಮಾಜಿ ಅಧ್ಯಕ್ಷ ರೋಶನ್ ಬೋಳಾರ್, ಪ್ರಧಾನ ಕಾರ್ಯದರ್ಶಿ ಅಮರ್ ಉಮೇಶ್ ನಂತೂರು, ಉಪಾಧ್ಯಕ್ಷ ಧರ್ಮೇಂದ್ರ ಬಂಗೇರ ಕಾರ್ಯಕಾರಿ ಸಮಿತಿಯ ಮಾಜಿ ಹಾಗೂ ಹಾಲಿ ಸದಸ್ಯರುಗಳು,ಮಹಿಳಾ ವಿಭಾಗದ ಸದಸ್ಯರು ಮತ್ತು ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.


Spread the love