ತುಂಬೆ ಗ್ರೂಪ್ ಮತ್ತು ಬಿಸಿಎಫ್ ವತಿಯಿಂದ ಯುಎಇ ಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನಗಳು
ಪ್ರಸ್ತುತ ಕೋವಿಡ್ 19 ಲಾಕ್ ಡೌನ್ ನಿಂದಾಗಿ ತಾಯಿನಾಡಿಗೆ ಹೋಗಲು ಸಾಧ್ಯವಾಗದೆ ಅಸಹಾಯಕ ಸ್ಥಿತಿಯಲ್ಲಿ UAE ಯಲ್ಲಿ ಸಿಲುಕಿ ಕೊಂಡಿರುವ ಸಹಸ್ರಾರು ಅನಿವಾಸಿ ಕನ್ನಡಿಗರ ಸಂಕಷ್ಟಕ್ಕೆ ಸ್ಪಂದಿಸುತ್ತಾ ಸಾಧ್ಯವಾದಷ್ಟು ಸಂತ್ರಸ್ತರನ್ನು ತಾಯ್ನಾಡಿಗೆ ಕಳುಹಿಸಲು ಸಹಾಯವಾಗುವ ಸದುದ್ದೇಶದಿಂದ ಪ್ರತಿಷ್ಠಿತ ತುಂಬೆ ಸಮೂಹ ಸಂಸ್ಥೆಗಳ ಮತ್ತು ಬ್ಯಾರೀಸ್ ಕಲ್ಚರಲ್ ಫೋರಮ್ ( BCF ) ಜಂಟಿಯಾಗಿ UAE ಯಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನಯಾನ ಏರ್ಪಡಿಸುವ ಯೋಜನೆಯನ್ನು ಹಮ್ಮಿ ಕೊಂಡಿದ್ದು ಈ ಪ್ರಯುಕ್ತ ಮೊದಲ ಹಂತವಾಗಿ ಪ್ರಥಮ ತುಂಬೆ-BCF ಚಾರ್ಟರ್ಡ್ ವಿಮಾನ ದಿನಾಂಕ 21 ಜುಲೈ 2020 ರಂದು UAE ಯ ರಾಸ್ ಅಲ್ ಖೈಮಾ ದಿಂದ ಮಂಗಳೂರಿಗೆ ಹೊರಟಿತು.
ಸಂಪೂರ್ಣ ಚಾರಿಟೇಬಲ್ ನೆಲೆಯಲ್ಲಿ ಏರ್ಪಡಿಸಿದ ಈ ವಿಮಾನಯಾನದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಹಾಗೂ ಸುಖಕರವಾದ ಪ್ರಯಾಣವಾಗುವಂತೆ ಎಲ್ಲಾ ತರದ ಅಗತ್ಯ ಸವಲತ್ತುಗಳನ್ನು ಏರ್ಪಡಿಸಲಾಗಿತ್ತು. ದುಬೈ , ಶಾರ್ಜಾ, ಅಜ್ಮಾನ್ ಮೊದಲಾದ UAE ಯ ವಿವಿಧ ಪ್ರದೇಶಗಳಿಂದ ಪ್ರಯಾಣಿಕರನ್ನು ರಾಸ್ ಅಲ್ ಖೈಮಾ ವಿಮಾನ ನಿಲ್ದಾಣಕ್ಕೆ ಕೊಂಡೊಯ್ಯಲು ತುಂಬೆ ಸಂಸ್ಥೆಯ ಬಸ್ ಗಳನ್ನು ಉಚಿತವಾಗಿ ನಿಯೋಜಿಸಲಾಗಿತ್ತು. ಎಲ್ಲಾ ಪ್ರಯಾಣಿಕರಿಗೆ ಸಮಯೋವಾಹಿತವಾಗಿ ಉಚಿತವಾದ ಭೋಜನ, ತಿಂಡಿ ಮತ್ತು ಪೇಯಗಳ ಏರ್ಪಾಡು ಏರ್ಪಡಿಸಲಾಗಿತ್ತು. ಪ್ರಾಥಮಿಕ ವೈದ್ಯಕೀಯ ಸಲಕರಣೆಗಳನ್ನು ( PPE ) ಮತ್ತು ಪಾರದರ್ಶಕ ಮುಖ ಕವಚ ( transparent face shield ) ವನ್ನು ಎಲ್ಲಾ ಪ್ರಯಾಣಿಕರಿಗೆ ವಿತರಿಸಲಾಯಿತು. ಮಿಲಾನೊ ಆಪ್ಟಿಕಲ್ ಮತ್ತು ಮ್ಯಾಕ್ಸ್ ಕೇರ್ ವತಿಯಿಂದ ಆಯ್ದ ಪ್ರಯಾಣಿಕರಿಗೆ ಗಿಫ್ಟ್ ಗಳನ್ನು ವಿತರಿಸಲಾಯಿತು.
ತುಂಬೆ ಗ್ರೂಪ್ ಇದರ ಮಾಲಕರೂ BCF ನ ಸ್ಥಾಪಕ ಪೋಷಕರೂ ( Founder Patron – BCF ) ಆಗಿರುವ ಡಾ ತುಂಬೆ ಮೊಯಿದೀನ್ ಹಾಗೂ BCF ಅಧ್ಯಕ್ಷರಾದ ಡಾ B K ಯೂಸುಫ್ ರವರ ನೇತೃತ್ವದಲ್ಲಿ, BCF ಪ್ರಧಾನ ಕಾರ್ಯದರ್ಶಿ ಡಾ ಕಾಪು ಮೊಹಮದ್ ಹಾಗೂ ತುಂಬೆ ಗ್ರೂಪ್ ನ ಶ್ರೀ ಫರ್ಹಾದ್ ಅವರ ಉಸ್ತುವಾರಿಯಲ್ಲಿ ನಡೆದ ಈ ಕಾರ್ಯದಲ್ಲಿ BCF ಇದರ ಉಪಾಧ್ಯಕ್ಷರುಗಳು, ಇತರ BCF ನಾಯಕರು ಸಕ್ರಿಯವಾಗಿ ಪಾಲ್ಗೊಂಡರು.
ರಾಸ್ ಅಲ್ಖೈಮಾ ವಿಮಾನ ನಿಲ್ದಾಣದಲ್ಲಿ BCF ಅಧ್ಯಕ್ಷರಾದ ಡಾ B K ಯೂಸುಫ್, BCF ಪ್ರಧಾನಕಾರ್ಯದರ್ಶಿ ಡಾ ಕಾಪು ಮೊಹಮದ್, ಉಪಾಧ್ಯಕ್ಷರಾದ ಜ: ಎಂ ಈ ಮೂಳೂರು, ಜ ಅಬ್ದುಲ್ ಲತೀಫ್ ಮುಲ್ಕಿ. , ಜ ಅಫೀಕ್ ಹುಸೈನ್, ಜ ಅಮೀರುದ್ದೀನ್ S I . ಜ ಸಲೀಂ ಅಲ್ತಾಫ್, , ಜ ಸುಲೇಮಾನ್ ಮೂಳೂರು, ಜ ಯಾಕುಬ್ DEWA ., ಜ ರಿಯಾಜ್ ಸುರತ್ಕಲ್ ಮೊದಲಾದವರು ಹಾಗೂ ತುಂಬ ಗ್ರೂಪ್ ನ ಜ ಫರ್ಹಾದ್,ಉಪಸ್ಥಿತರಿದ್ದರು.
KCF , ಭಟ್ಕಳ್ ಜಮಾತ್, ಭಟ್ಕಳ್ ಅಸೋಸಿಯೇಷನ್, BCCI , BWF , DKSC , KNRI , ಕನ್ನಡಿಗ ಹೆಲ್ಪ್ ಲೈನ್, KDKGS – UAE, ಕರ್ನಾಟಕ ಸಂಘ ಶಾರ್ಜಾ, ದುಬೈ ಕನ್ನಡಿಗಾಸ್ , ಮೊದಲಾದ ಸಂಸ್ಥೆಗಳು ತಮ್ಮ ಪೂರ್ಣ ಸಹಯೋಗವನ್ನು ನೀಡಿದ್ದರು.
ಭಟ್ಕಳ್ ಜಮಾತ್ ಅಧ್ಯಕ್ಷ ಜ ಯೂಸುಫ್ ಬರ್ಮಾವರ್, BWF ಅಧ್ಯಕ್ಷ ಜ ಮಹಮದ್ ಅಲಿ ಉಚ್ಚಿಲ್, BCCI ಅಧ್ಯಕ್ಷ ಜ B M ಬಷೀರ್, KCF ನಾಯಕರುಗಳು, DKSC ಅಧ್ಯಕ್ಷ ಜ ಇಕ್ಬಾಲ್ ಹಾಜಿ ಹೆಜಮಾಡಿ, ದುಬೈ ಕೋಂಕಣೀಸ್ ಮತ್ತು KSS ನಾಯಕ ಶ್ರೀ ಜೋಸೆಫ್ ಮಥಾಯಿಸ್, KDKGS – UAE ಇದರ ಮಾಜಿ ಅಧ್ಯಕ್ಷರಾದ ಶ್ರೀ ಹರೀಶ್ ಕೋಡಿ, ಕನ್ನಡ ಹೆಲ್ಪ್ ಲೈನ್ ನಾಯಕರುಗಳು ಮೊದಲಾದ ಗಣ್ಯರ ಉಪಸ್ಥಿತಿಯಲ್ಲಿ ಪ್ರಯಾಣಿಕರನ್ನು ಬೀಳ್ಕೊಡಲಾಯಿತು. ARISTO TRAVELS ಸಂಸ್ಥೆಯು ಈ ಯೋಜನೆಯಲ್ಲಿ ಅಧಿಕೃತ ಟ್ರಾವಲ್ ಏಜೆನ್ಸಿ ಯಾಗಿ ಕಾರ್ಯ ನಿರ್ವಹಿಸಿದ್ದು ಇದರ ARISTO TRAVELS ಇದರ ಮಾಲಕರಾದ ಜ ಸಯ್ಯದ್ ಹಸನ್ ರಝಿನ್ ಈ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತಾ ಸಕ್ರಿಯರಾಗಿ ಪಾಲ್ಗೊಂಡಿದ್ದರು.
BCF ಅಧ್ಯಕ್ಷರಾದ ಡಾ ಬಿ ಕೆ ಯೂಸುಫ್ ಪ್ರಯಾಣಿಕರಿಗೆ ವಿದಾಯ ಹೇಳುತ್ತಾ ಈ ಮಾನವೀಯ ಸೇವೆಗೆ ತುಂಬೇ BCF ಚಾರ್ಟರ್ಡ್ ವಿಮಾನದಲ್ಲಿ ಪ್ರಯಾಣಿಕರಿಗೆ ಶುಭ ಕೋರಿದರು. ಈ ಮಾನವೀಯ ಸೇವೆಯಲ್ಲಿ BCF ನೊಂದಿಗೆ ಕೈ ಜೋಡಿಸಿದ ತುಂಬೆ ಗ್ರೂಪ್ ಗೆ ಧನ್ಯವಾದವನ್ನು ಅರ್ಪಿಸಿದರು ಹಾಗೂ ತುಂಬೇ ಗ್ರೂಪ್ ಚಯರ್ಮನ್ ಡಾ ಮೊಯಿದೀನ್ ತುಂಬೆ ಯವರ ಉದಾರತೆ ಹಾಗೂ ಸಮಾಜ ಸೇವಾ ತತ್ಪರತೆಯನ್ನು ಶ್ಲಾಘಿಸಿದರು. ಈ ಕಾರ್ಯದಲ್ಲಿ ಸಹಕರಿಸಿದ ತುಂಬೇ ಹಾಗೂ BCF ನ ಎಲ್ಲಾ ಪದಾಧಿಕಾರಿ ಗಳಿಗೆ ಧನ್ಯವಾದ ಅರ್ಪಿಸಿದರು.
ಡಾ ಕಾಪು ಮೊಹಮ್ಮದ್ ರವರು ಎಲ್ಲ ಪ್ರಯಾಣಿಕರಿಗೆ ಶುಭ ವಿದಾಯ ಹೇಳುತ್ತಾ ನಮ್ಮ ಈ ರೆಪೆಟ್ರಿಯೇಶನ್ ಕಾರ್ಯವು ಯಾವುದೇ ಆತಂಕ ಅಡಚಣೆ ಇಲ್ಲದೆ ಹಾಗೂ ಸಂಪೂರ್ಣವಾಗಿ ಕೋವಿಡ್ ಫ್ರೀ ಯಾಗಿ ತಾಯ್ನಾಡಿಗೆ ಹೋರಾಡುತ್ತಿರೋದು ಸಂತೋಷದಾಯಕವಾಗಿದೆ ಎಂದರು. ತುಂಬೆ ಮತ್ತು BCF ನ ಎಲ್ಲ ನಾಯಕರಿಗೆ, ಪದಾಧಿಕಾರಿಗಳಿಗೆ, ಹಾಗೂ ತಮ್ಮೊಂದಿಗೆ ಸಹಕರಿಸಿದ ಭಟ್ಕಳ್ ಜಮಾತ್ ( BMJ) , BCCI , KCF , BWF , DKSC , ಕನ್ನಡಿಗರು ದುಬೈ, ಕೊಡಗು ಕನ್ನಡಿಗಸ್, KSS ,ಕೊಂಕಣ್ಸ್ ದುಬೈ, ಮೊದಲಾದ ಸೇವಾ ಸಂಸ್ಥೆಗಳನ್ನು ಸ್ಮರಿಸಿದರು ಹಾಗೂ ವೀಶೇಷವಾಗಿ ತುಂಬೇ ಯಾ ಪದಾಧಿಕಾರಿಗಳಾದ Mr Farhad , Engr . ಫಾರ್ವಾಜ್ ಹಾಗೂ Mr. Vighnesh ಹಾಗೂ ಅರಿಸ್ಟೊಕ್ಟಾರ್ ಟ್ರಾವಲ್ಸ್ ನ ಮಾಲಕ Mr.Syed Hassan Razeen ರವರಿಗೆ ಧನ್ಯವಾದ ವಿತ್ತರು.
ಹಾಗೂ ತುಂಬೆ ಗ್ರೂಪ್ ವತಿಯಿಂದ Mr Farhad ಮಾತಾಡುತ್ತ ತುಂಬೆ ಗ್ರೂಪ್ ಚಯರ್ಮನ್ ಡಾ ತುಂಬೆ ಮೊಯಿದೀನ್ ಪರವಾಗಿ ಸರ್ವ ಪ್ರಯಾಣಿಕರಿಗೆ ಶುಭ ಕೋರುತ್ತಾ ಇಂತಹ ಮಾನವೀಯ ಸೇವೆ ನೀಡಲು ಅವಕಾಶ ಸಿಕ್ಕಿದ್ದಕ್ಕಾಗಿ ತುಂಬೆ ಯ ಪರವಾಗಿ ತಮ್ಮ ಸಂತೋಷವನ್ನು ವ್ಯಕ್ತ ಪಡಿಸಿದರು.
ಮಂಗಳೂರು ವಿಮಾನ ತಲುಪಿದ ಪ್ರಯಾಣಿಕರನ್ನು BCF ಪೋಷಕರಾದ ಜ ಮುಮ್ತಾಜ್ ಅಲಿ ಯವರ ನೇತೃತ್ವದಲ್ಲಿ ಮಾಜಿ MLA ಜ ಮೊಯಿದೀನ್ ಭಾವ, ಜ U T ಲಿಫ್ಟಿಕಾರ್, BCCI ಕೇಂದ್ರ ಅಧ್ಯಕ್ಷ ಜ S M R ರಶೀದ್ ಹಾಜಿ ಮೊದಲಾದ ಗಣ್ಯರು ಸ್ವಾಗತಿಸಿದರು. ಎಲ್ಲ ಪ್ರಯಾಣಿಕರಿಗೆ ಅವಶ್ಯಕತೆಗಳಿಗನುಸಾರವಾಗಿ ಲಘು ಉಪಹಾರ ಪೇಯ ಗಳನ್ನು ವಿತರಿಸಿ ಬಳಿಕ ಎಲ್ಲ ಪ್ರಯಾಣಿಕರನ್ನು ಕ್ರಮ ಭದ್ದವಾಗಿ ಅವರವರು ನಿಯೋಗಿಸಿದ ಕ್ವಾರಂಟೈನ್ ಹೋಟೆಲ್ ವಸತಿಗಳಿಗೆ ಕಳುಹಿಸಲಾಯಿತು.
ಈ ರೆಪಾಟ್ರಿಯೇಷನ್ ಕಾರ್ಯವು ಇದಕ್ಕೆ ಸಂಬಂಧ ಪಟ್ಟಂತೆ UAE ಮತ್ತು ಭಾರತದ ಎಲ್ಲ ಇಲಾಖೆಗಳು ಸಂಪೂರ್ಣ ಪರವಾನಗಿಯೊಂದಿಗೆ ಏರ್ಪಡಿಸಲಾಗಿತ್ತು. ಭಾರತೀಯ ವಿದೇಶಾಂಗ ಇಲಾಖೆ, ಭಾರತೀಯ ವಾಯುಯಾನ ಇಲಾಖೆ, ಭಾರತೀಯ ವಿಮಾನ ನಿಲ್ದಾಣ ನಿಗಮ, UAE ಯ ಭಾರತೀಯ ದೂತಾವಾಸ, ಮೊದಲಾದ ಎಲ್ಲ ಇಲಾಖೆಗಳಿಂದ ಅವಶ್ಯಕವಾದ ಎಲ್ಲ ಪರವಾನಗಿಗಳನ್ನು ಪಡೆದು ಸಂಪೂರ್ಣವಾದ ಪೂರ್ವತಯಾರಿಗಳನ್ನು ನಡೆಸಿ, ಸುಲಲಿತವಾಗಿ ನಡೆದ ರೆಪಾಟ್ರಿಯೇಷನ್ ಕಾರ್ಯವು ಇದಾಗಿತ್ತು.
ಇದೆ ಬರುವ ದಿನಾಂಕ 24 /7 /2020 ರಂದು ತುಂಬೆ ಬಿಸಿಫ್ ಸಹಭಾಗಿತ್ವದಲ್ಲಿ ಇನ್ನೊಂದು ಚಾರ್ಟೆರ್ ವಿಮಾನ ಮಗ್ಳೂರಿಗೆ ತೆರಳಲಿದೆ ಹಾಗೂ ಶೀಘ್ರದಲ್ಲಿ ಇನ್ನೂ ಇಂತಹ ಹಲವಾರು ಚಾರ್ಟರ್ಡ್ ವಿಮಾನ ಗಳು ತುಂಬೆ BCF ಸಹಭಾಗಿತ್ವದಲ್ಲಿ ಆಯೋಜಿಸಲಿದೆ ಎಂದು THUMBAY- BCF ವಕ್ತಾರರು ತಿಳಿಸಿದ್ದಾರೆ.