ತುಮಕೂರು: ಬೈಕ್ ಟ್ರಾಕ್ಟರ್ ಗೆ ಗುದ್ದಿ ಮೂರು ಮಂದಿ ದಾರುಣ ಸಾವು
ತುಮಕೂರು: ಬೈಕ್ವೊಂದು ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಟ್ರೈಲರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ರಸ್ತೆಯ ಓಬಳಾಪುರದ ಗೇಟ್ ಬಳಿ ಸಂಭವಿಸಿದೆ.
ಮೃತರನ್ನು 12 ವರ್ಷದ ಮಹಮದ್ ಆಸೀಪ್, 38 ವರ್ಷದ ಮಮ್ತಾಜ್, 22 ವರ್ಷದ ಶಾಕೀರ್ ಹುಸೇನ್ ಎಂದು ಗುರುತಿಸಲಾಗಿದೆ.
ಕೋರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಬೆಳಗ್ಗೆ 6.30ಕ್ಕೆ ಅಪಘಾತ ಸಂಭವಿಸಿದ್ದು ಮೃತರನ್ನು ಮಧುಗಿರಿ ತಾಲೂಕಿನ ಪುರವರ ಹೋಬಳಿ ಗೊಂದಿಹಳ್ಳಿಯವರೆಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ನಗರ ಡಿಎಸ್ ಪಿ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.