ತುಳು ಪರ್ಬವು ತುಳು ನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ರತ್ನಾ ಡಿ. ಕುಲಾಲ್

Spread the love

ತುಳು ಪರ್ಬವು ತುಳು ನಾಡ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ – ರತ್ನಾ ಡಿ. ಕುಲಾಲ್

ಮುಂಬಯಿ: ಬಿಸು ಪರ್ಬವನ್ನು ಇಂದಿನ ಕಾಲದಲ್ಲಿ ದೇಶಾದ್ಯಂತ ಆಚರಿಸಲಾಗುತ್ತಿದೆ. ಇದು ಪ್ರಕೃತಿಯ ಆಚರಣೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ವಿವಿಧ ಹೆಸರಲ್ಲಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ತುಳು ನಾಡ ಸಂಸ್ಕ್ರುತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮ ಎಂದು ಮಲಾಡ್ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಹಾಗೂ ಕುಲಾಲ ಸಂಘ ಮುಂಬಯಿಯ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿ ಯ ಉಪಕಾರ್ಯಧ್ಯಕ್ಷೆ ರತ್ನಾ ಡಿ. ಕುಲಾಲ್ ಹೇಳಿದರು.

ಗೋರೆಗಾಂವ್ ಕರ್ನಾಟಕ ಸಂಘ ಹಾಗೂ ಸಂಘದ ಯುವ ವಿಭಾಗದ ಜಂಟಿ ಆಶ್ರಯದಲ್ಲಿ ಎ. 14ರಂದು ಬಿಸು ಹಬ್ಬದ ನಿಮಿತ್ತ ನಿಟ್ಟೆ ಸುಧಾಕರಕ ಶೆಟ್ಟಿ ಮತ್ತು ಎಸ್. ಜೆ. ಶೆಟ್ಟಿ ಸ್ಮರಣಾರ್ಥ ಜಯಕರ ದೇಜಪ್ಪ ಪೂಜಾರಿ ವೇದಿಕೆಯಲ್ಲಿ ತುಳು ಪರ್ಬ ದತ್ತಿನಿಧಿ ಕಾರ್ಯಕ್ರಮವು ಗೋರೆಗಾಂವ್ ಪಶ್ಚಿಮದ ಆರೇ ರೋಡ್‌ನಲ್ಲಿರುವ ಕೇಶವ ಗೋರೆ ಸ್ಮಾರಕ ಟ್ರಸ್ಟಿನ ಎರಡನೇ ಮಹಡಿಯ ಸಭಾಗೃಹದಲ್ಲಿ ಸಂಘದ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದು ಮುಖ್ಯ ಅತಿಯಾಗಿ ಆಗಮಿಸಿದ ರತ್ನಾ ಡಿ. ಕುಲಾಲ್ ಅವರು ಉಪಸ್ಥಿತರಿದ್ದು ಮಾತನಾಡುತ್ತಾ ಬಿಸು ಪರ್ಬವು ತುಳು ಪರ್ಬ ವಾಗಿದ್ದು ಅದರ ಆಚರಣೆ ಕುಂಟಿತವಾಗುತ್ತಿದ್ದರೂ ಇಂತಹ ಸಂಘಟನೆಗಳ ಮೂಲಕ ಅದ್ದೂರಿಯಾಗಿ ಆಚರಣೆಯಾಗುತ್ತಿದೆ. ಯುಗದ ಆರಂಭವೇ ಯುಗಾದಿ. ಕಳೆದು ಹೊದದ್ದನ್ನು ಮರೆತು ಹೊಸತನ್ನು ಸ್ವಾಗತಿಸುವ ಹಬ್ಬವೇ ಯುಗಾದಿ. ಗೋರೆಗಾಂವ್ ಕರ್ನಾಟಕ ಸಂಘವು ಬಿಸು ಹಬ್ಬದ ಸಂದರ್ಭದಲ್ಲಿ ತುಳು ಪರ್ಬ ದ ಮೂಲಕ ತುಳು ಕನ್ನಡಿಗರನ್ನು ಒಂದೆಡೆ ಸೇರಿಸಿ ನಮ್ಮ ಬಾಷೆ ಸಂಸ್ಕೃತಿಯನ್ನು ಪ್ರಭಲಗೊಳಿಸುತ್ತಿದ್ದು ಮುಂದೆ ಸಂಘದ ನೂತನ ವಿಶಾಲವಾದ ಸಭಾಗೃಹದಲ್ಲಿ ಸಂಘದ ಇಂತಹ ಕಾರ್ಯಕ್ರಮಗಳು ನಡೆಯುವಂತಾಗಲಿ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಮತ್ತು ಸಂಘದ ಟ್ರಷ್ಟಿ ದೇವಲ್ಕುಂದ ಭಾಸ್ಕರ ಶೆಟ್ಟಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್ ಅವರು ಇಂದು ಮುಖ್ಯ ಅತಿಥಿ ರತ್ನ ಕುಲಾಲ್ ಅವರು ತನ್ನ ಮುತ್ತಿನಂತಹ ಮಾತುಗಳಿಂದ ನಮ್ಮನ್ನು ಹರಸಿದ್ದಾರೆ. ತುಳು ಪರ್ಬ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಇಂದು ಒಟ್ಟಾಗಿದ್ದೇವೆ ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನಿಡಿದಂತಾಗುತ್ತಿದೆ. ಗೋರೆಗಾಂವ್ ಪೂರ್ವದ ತುಳು ಕನ್ನಡಿಗರು ಕೂಡಾ ಸಂಘದಲ್ಲಿ ಕ್ರೀಯಾಶೀಲಾರಾಗುತ್ತಿದ್ದು ಅಭಿವೃತ್ತಿಯತ್ತ ಸಾಗುತ್ತಿರುವ ಸಂಘದ ಕಟ್ಟಡದ ಪುನರ್ನಿಮಾಣಗೊಳ್ಳುತ್ತಿದ್ದು ಸಂಘದ ಕಾರ್ಯಾಲಯದ ಕೊರತೆಯಿಂದ ಸದಸ್ಯರು ದೂರವಾಗಬಾರದೆಂಬುದಾಗಿ ಇಂದು ಬೆಳಿಗ್ಗೆ ತಾತ್ಕಾಲಿಕವಾಗಿ ಗೋರೆಗಾಂವ್ ಪಶ್ಚಿಮ, ಜವಾಹರ್ ನಗರದ ಎಸ್ ವಿ ರೋಡ್ ಲಕ್ಷಿ ನಿವಾಸದಲ್ಲಿ ಸಂಘಕ್ಕೆ ನೂತನ ಕಾರ್ಯಾಲಯವನ್ನು ಲೋಕಾರ್ಪಣೆ ಮಾಡಿದ್ದೇವೆ ಎನ್ನುತ್ತಾ ಎಲ್ಲರಿಗೂ ವಿಶು ಹಬ್ಬದ ಸುಭಾಶಯ ಸಲ್ಲಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿ ರತ್ನಾ ಡಿ. ಕುಲಾಲ್, ಸಂಘದ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್, ಉಪಾಧ್ಯಕ್ಷರಾದ ವಿಶ್ವನಾಥ ಕೆ. ಶೆಟ್ಟಿ, ಮತ್ತು ಯುವ ವಿಭಾಗದ ಕಾರ್ಯಾಧ್ಯಕ್ಷೆ ಶಿವಾನಿ ಎಚ್. ಆಚಾರ್ಯ ಉಪಸ್ಥಿತರಿದ್ದರು.

ಸಂಘದ ಸದಸ್ಯರಿಂದ, ಸಂಘದ ಗ್ರಂಥಾಯನದ ಸದಸ್ಯರಿಂದ ಹಾಗೂ ಯುವ ವಿಭಾಗದ ಸದಸ್ಯರಿಂದ ವಿವಿಧ ಕಾರ್ಯಕ್ರಮಗಳು ನಡೆಯಿತು.

ಗೌರವ ಪ್ರಧಾನ ಕಾರ್ಯದರ್ಶಿ ಸರಿತಾ ಸುರೇಶ್ ನಾಯಕ್ ಮತ್ತು ಪ್ರಮೀಳಾ ಆಚಾರ್ಯ ಕಾರ್ಯಕ್ರಮವನ್ನು ನಿರ್ವಹಿಸಿದರು.

ಜೊತೆ ಕಾರ್ಯದರ್ಶಿ ಶಾಂತ ಎನ್ ಶೆಟ್ಟಿ ಸಂಘದ ಚಟುವಟಿಕೆಗಳ ಮಾಹಿತಿಯಿತ್ತರು.

ಯುವ ವಿಭಾಗದ ಶಕುಂತಲಾ ಆಚಾರ್ಯ ಅವರು ತುಳುನಾಡಿನ ಬಗ್ಗೆ ಸಂಕ್ಷಿಪ್ತವಾಗಿ ಮಾತನಾಡಿದರು.

ಸಂಘದ ಯುವ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಸುಚಲತಾ ಪೂಜಾರಿ, ವಿದ್ಯಾ ಆಚಾರ್ಯ, ಹರಿಣಾಕ್ಷಿ ಶೆಟ್ಟಿ, ಸುಗುಣಾ ಎಸ್. ಬಂಗೇರ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಾನ್ವಿ ಶೆಟ್ಟಿಯವರು ಕೊನೇಗೆ ವಂದನಾರ್ಪಣೆ ಮಾಡಿದರು. ಸಂಘದ ಸದಸ್ಯರು ಪರಿಸರದ ತುಳು ಕನ್ನಡಿಗರು ಹಾಗೂ ಮಲಾಡ್ ನ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಮಹಿಳಾ ವಿಭಾಗದ ಸದಸ್ಯರುಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


Spread the love