ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನ – ಛಾಯಾಚಿತ್ರ ಪ್ರದರ್ಶನ ಉದ್ಘಾಟನೆ
ಉಡುಪಿ: ಉಡುಪಿಯ ರಾಜಾಂಗಣದದಲ್ಲಿ ಆಯೋಜಿಸಿರುವ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಪ್ರಯುಕ್ತ ಪಲಿಮಾರು ಮಠದ 2 ವರ್ಷ ಪರ್ಯಾಯಾವಧಿಯಲ್ಲಿ ನಡೆದ ವಿಶೇಷ ಕಾರ್ಯಕ್ರಮಗಳ,ಗಣ್ಯರ ಭೇಟಿ, ಅಲಂಕಾರಗಳು ಮೊದಲಾದ ಛಾಯಾಚಿತ್ರ ಪ್ರದರ್ಶನ “ಸು-ವರ್ಣ ಪರ್ಯಾಯ ದರ್ಶನ” ವನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಭೀಮನಕಟ್ಟೆ ಮಠಾಧೀಶರಾದ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಯತಿಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉದ್ಘಾಟನೆ ಮಾಡಿದರು.
ಈ ಸಂದರ್ಭದಲ್ಲಿ ಸಮ್ಮೇಳನದ ಪ್ರಧಾನ ಸಂಚಾಲಕರಾದ ಎಂ.ಬಿ.ಪುರಾಣಿಕ್,ಪರ್ಯಾಯ ಮಠದ ದಿವಾನರಾದ ವೇದವ್ಯಾಸ ತಂತ್ರಿಗಳು,ವಿದ್ವಾಂಸರಾದ ಸಗ್ರಿ ರಾಘವೇಂದ್ರ ಉಪಾಧ್ಯಾಯರು,ಪರ್ಯಾಯ ಮಠದ ಪಿ.ಆರ್.ಓ ಶ್ರೀಶ ಭಟ್ ಕಡೆಕಾರ್,ಛಾಯಾಚಿತ್ರಗ್ರಾಹಕರಾದ ಪರಶುರಾಮ ಭಟ್ ಕುಂಜಾರುಗಿರಿ ,ಜನಾರ್ದನ ಕೊಡವೂರು, ರಮೇಶ ಭಟ್ ಎಲ್ಲೂರು,ರಾಘವೇಂದ್ರ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಪರ್ಯಾಯ ಮಠದ ಛಾಯಾಚಿತ್ರಗ್ರಾಹಕರಾದ ಪರಶುರಾಮ ಭಟ್ ಇವರು ಚಿತ್ರೀಕರಿಸಿದ, ಸಂಗ್ರಹಿಸಿದ ನೂರಾರು ಛಾಯಾಚಿತ್ರಗಳು ಈ ಪ್ರದರ್ಶನದಲ್ಲಿದ್ದು ಜನವರಿ 14-2020 ರ ವರೆಗೆ 1 ತಿಂಗಳು ನಡೆಯಲಿದೆ.