Home Mangalorean News Kannada News ತುಳು ಸಾಹಿತ್ಯ ಅಕಾಡೆಮಿ ವತಿಯಿಂದ – “ಬರವುದ ಜವನೆರ್‍ನ ಬುಲೆ ಪರ್ಬ”

ತುಳು ಸಾಹಿತ್ಯ ಅಕಾಡೆಮಿ ವತಿಯಿಂದ – “ಬರವುದ ಜವನೆರ್‍ನ ಬುಲೆ ಪರ್ಬ”

Spread the love

ತುಳು ಸಾಹಿತ್ಯ ಅಕಾಡೆಮಿ ವತಿಯಿಂದ – “ಬರವುದ ಜವನೆರ್‍ನ ಬುಲೆ ಪರ್ಬ”

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ಡಾ.ಪಿ.ದಯಾನಂದ.ಪೈ. ಪಿ.ಸತೀಶ್.ಪೈ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಂಗಳೂರು ಇವರ ಸಹಕಾರದೊಂದಿಗೆ “ಬರವುದ ಜವನೆರ್‍ನ ಬುಲೆ ಪರ್ಬ” ಎಂಬ ಕಾರ್ಯಕ್ರಮವನ್ನು ಡಿ.3 ರಂದು ಕೋಣಾಜೆಯಲ್ಲಿನ ದೇವಂದ ಬೆಟ್ಟದ ಬಾಕಿಮಾರು ಗದ್ದೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಕರಾವಳಿ ಪ್ರದೇಶದ ಹೆಚ್ಚಿನ ಕೃಷಿ ಜಮೀನುಗಳು, ಕೃಷಿ ಕಾರ್ಮಿಕರ ಸಮಸ್ಯೆ ಮತ್ತು ಇತರ ಕಾರಣಗಳಿಂದ ಸಾಗುವಳಿ ಮಾಡದೇ ಹಡೀಲು ಬಿದ್ದು ಹೋಗುವುದು ಸಾಮಾನ್ಯವಾಗಿದೆ. ಇಂತಹ ಸಂದರ್ಭದಲ್ಲಿ ಮಂಗಳೂರು ತಾಲೂಕಿನ ಕೋಣಾಜೆ ಸಮೀಪದ ಜಾರಂದ ಬೆಟ್ಟ, ಬಾಕಿಮಾರು ಗದ್ದೆಯಲ್ಲಿ 5 ಎಕ್ರೆ ಭತ್ತದ ಕೃಷಿಯನ್ನು ಕಾರ್‍ಸ್ಟ್ರೀಟ್‍ನ ಸರಕಾರಿ ಕಾಲೇಜಿನ ರಾಷ್ಟೀಯ ಸೇವಾ ಸಮಿತಿಯ ವಿದ್ಯಾರ್ಥಿಗಳು ಉಪನ್ಯಾಸಕರ ಪ್ರೋತ್ಸಾಹದಿಂದ ಬಿತ್ತನೆ ಮಾಡಿ ವಾರಕ್ಕೊಮ್ಮೆ ಅಥವಾ ಅಗತ್ಯ ಬಿದ್ದಾಗ ಜಮೀನಿಗೆ ಬೇಟಿ ನೀಡಿ ಅಗತ್ಯ ಆರೈಕೆ ನೀಡಿ, ಕೆಳೆ ತೆಗೆದು, ನೀರು ಹಾಯಿಸಿ ಭತ್ತದ ಬೆಳೆ ಬೆಳೆದಿದ್ದು ಇದೀಗ ಭತ್ತದ ಬೆಳೆ ಕೊಯಿಲಿಗೆ ಬಂದಿರುತ್ತದೆ. ಇದೀಗ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಸಕಾರಿ ಕಾಲೇಜಿನ ವಿದ್ಯಾರ್ಥಿಗಳು ಭತ್ತದ ಕೊಯಿಲು ಮಾಡುವ ಸಂದರ್ಭವನ್ನು ಬುಲೆ ಪರ್ಬವಾಗಿ ಆಚರಿಸುತ್ತಿದ್ದು ಕೃಷಿ ಬದುಕು ಪುನರ್ ಸೃಷ್ಟಿ ಯಾಗುವುದಕ್ಕೆ ಸಾಕ್ಷಿಯಾಗಿದೆ.

ಜನವರಿ 3 ರಂದು ಸಂಜೆ 6 ಗಂಟೆಗೆ ಸಮಾರಂಭವನ್ನು ಕಾರ್‍ಸ್ಟ್ರೀಟ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಜಶೇಖರ್ ಹೆಬ್ಬಾರ್ ಉದ್ಘಾಟಿಸಲಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎ.ಸಿ ಭಂಡಾರಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕೋಣಾಜೆ ಗ್ರಾಮ ಪಂಚಾಯತ್‍ನ ಅಧ್ಯಕ್ಷ ಶೌಕತ್ ಅಲಿ, ಮಂಗಳೂರು ವಿಶ್ವ ವಿದ್ಯಾನಿಲಯ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ಧನಂಜಯ ಕುಂಬ್ಳೆ, ಉಪನ್ಯಾಸಕಿ ಡಾ.ನಾಗವೇಣಿ ಮಂಚಿ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ. ಇವರ ಪ್ರಕಟನೆ ತಿಳಿಸಿದೆ.


Spread the love

Exit mobile version