ತೆಂಕನಿಡಿಯೂರು- ಕೆಸರ್ಡ್ ಒಂಜಿ ದಿನ; ಕ್ರೀಡೆಯಿಂದ ಪ್ರೀತಿ -ವಿಶ್ವಾಸ, ಸಂಘಟನಾ ಮನೋಭಾವ ವೃದ್ಧಿ – ಪ್ರಖ್ಯಾತ್ ಶೆಟ್ಟಿ
ಉಡುಪಿ: ತೆಂಕನಿಡಿಯೂರು ವಿಷ್ಣುಮೂರ್ತಿನಗರ ಶ್ರೀ ವೀರಮಾರುತಿ ವ್ಯಾಯಾಮ ಶಾಲೆ, ಅಂಜನಾ ಮಾತೃ ಮಂಡಳಿ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಕೆಸರ್ಡೊಂಜಿ ಗಮ್ಮತ್ ಕಾರ್ಯಕ್ರಮ ಭಾನುವಾರ ಶ್ರೀದೇವೆ ಭೂದೇವಿ ಸಹಿತ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವಠಾರದಲ್ಲಿ ನಡೆಯಿತು.
ಯುವಜನ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಮುಮಾರ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಕೃಷಿ ಬದುಕಿನ ಪರಿಚಯವನ್ನು ಯುವಜನತೆಗೆ ತಿಳಿ ಹೇಳುವ ಕಾರ್ಯಕ್ರಮವನ್ನು ಮಾಡಿ ಕೃಷಿಯಲ್ಲಿ ಆಸಕ್ತಿ ಹುಟ್ಟುವಂತೆ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ಪ್ರಖ್ಯಾತ್ ಶೆ್ಟ್ಟಿ ಅವರು ಕೆಸರ್ದ ಗೊಬ್ಬು ಕ್ರೀಡೆಯ ಮೂಲಕ ಪರಿಸರದ ಜನರಲ್ಲಿ ಪರಸ್ಪರ ವಿಶ್ವಾಸ, ಮತ್ತು ಸಂಘಟನಾ ಮನೋಭಾವ ಬೆಳೆಯುತ್ತದೆ. ಇಂದಿನ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು, ಇಂತಹ ಕಾರ್ಯಕ್ರಮದ ಮೂಲಕ ಯುವಜನರು ಕ್ರೀಡೆಯನ್ನು ಉಳಿಸುವ ಕೆಲಸವನ್ನು ಮಾಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ವ್ಯಾಯಾಮ ಶಾಲೆಯ ಗೌರವಾಧ್ಯಕ್ಷ ದಯಾನಂದ ಶೆ್ಟ್ಟಿ ಕೊಜೊಳಿ, ತಾಪಂ ಸದಸ್ಯ ಧನಂಜಯ ಕುಮಾರ್, ತೆಂಕನಿಡಿಯೂರು ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ರಾಮಚಂದ್ರ ಪಾ್ಟ್ಕರ್, ತೆಂಕನಿಡಿಯೂರು ಗ್ರಾಪಂ ಸದಸ್ಯ ಕಲ್ಪನಾ ಸುರೇಶ್, ರಾಘು ಕೋಟ್ಯಾನ್, ರಶ್ಮಿ, ಅಶೋಕ್ ಕೋಟ್ಯಾನ್, ಮಧುಸೂಧನ, ಸರೇಶ್ ಕುಮಾರ್, ಅಣ್ಣಯ್ಯ ಪಾಲನ್, ಬಾಬು ಸಾಲ್ಯಾನ್, ಶಂಕರ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು,. ವ್ಯಾಯಾಮ ಶಾಲೆಯ ಉಪಾಧ್ಯಕ್ಷ ಅನಿಲ್ ಪಾಲನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.