Home Mangalorean News Kannada News ತೆಂಕನಿಡಿಯೂರು : ಪ್ರತಿಭಾ ದಿನಾಚರಣೆ ಅನಾವರಣ

ತೆಂಕನಿಡಿಯೂರು : ಪ್ರತಿಭಾ ದಿನಾಚರಣೆ ಅನಾವರಣ

Spread the love

ತೆಂಕನಿಡಿಯೂರು : ಪ್ರತಿಭಾ ದಿನಾಚರಣೆ ಅನಾವರಣ

ಉಡುಪಿ : ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆಯ ಅನಾವರಣ ಹಾಗೂ ಸಾಂಸ್ಕøತಿಕ ಸಂಭ್ರಮ ಇತ್ತೀಚೆಗೆ ನಡೆಯಿತು.

ಸರಿಗಮಪ ವೇದಿಕೆಯ ಯುವ ಕಲಾವಿದರೂ, ಕರಾವಳಿ ಸ್ಟಾರ್ ರಜತ್ ಮಯ್ಯ, ಉಜಿರೆ ಪ್ರತಿಭಾ ದಿನಾಚರಣೆಯ ಸಾಂಸ್ಕøತಿಕ ಚಟುವಟಿಕೆಗಳನ್ನು ಉದ್ಘಾಟಿಸಿದರು. ಅವರು ಸರಿಗಮಪ ವೇದಿಕೆಯಲ್ಲಿ ತಮಗಾದ ವಿಶಿಷ್ಟ ಅನುಭವಗಳನ್ನು ಹಂಚಿಕೊಳ್ಳುತ್ತಾ “ಸುಪ್ತ ಪ್ರತಿಭೆಗಳನ್ನು ಸಮಾಜದ ಮುಖ್ಯ ವಾಹಿನಿಗೆ ಪರಿಚಯಿಸುವಲ್ಲಿ ಝೀ ವಾಹಿನಿಯು ಪ್ರಮುಖ ಪಾತ್ರವಹಿಸುತ್ತಿದೆ. ಅವಕಾಶಗಳು ಸಿಕ್ಕಾಗ ನಾವು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು” ಎಂಬ ಕಿವಿಮಾತನ್ನು ವಿದ್ಯಾರ್ಥಿ ಸಮುದಾಯಕ್ಕೆ ನೀಡುವುದರ ಜೊತೆಗೆ ತಮ್ಮ ಸುಮಧುರ ಕಂಠದಿಂದ ವಿದ್ಯಾರ್ಥಿಗಳನ್ನು ರಂಜಿಸಿದರು.

ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದೇ ಇರುತ್ತದೆ. ಸೂಕ್ತ ವೇದಿಕೆ ಸಿಕ್ಕಾಗ ಹಿಂಜರಿಯದೆ ಮುನ್ನುಗ್ಗಿದಾಗ ಮಾತ್ರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ, ಕಾಲೇಜು ಹಂತದಲ್ಲಿ ಸಿಕ್ಕಿದ ಈ ವೇದಿಕೆಯನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು” ಎನ್ನುತ್ತಾ ಭಾಗವಹಿಸುತ್ತಿರುವ ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು.

ಶೃತಿ ಕಿರಣ್, ಸುಶ್ಮಿತಾ ಗಿರಿರಾಜ್ ಹಾಗೂ ಭುವನ್ ಕುಮಾರ್ ಬಿ, ಸ್ನಾತಕೋತ್ತರ ವಿಭಾಗದ ಸಾಂಸ್ಕøತಿಕ ಸಂಚಾಲಕಿ ಮೇವಿ ಮಿರಾಂದ, ಐ.ಕ್ಯೂ.ಎ.ಸಿ. ಸಂಚಾಲಕ ಡಾ. ಸುರೇಶ್ ರೈ ಕೆ., ಸಾಂಸ್ಕøತಿಕ ಕಾರ್ಯದರ್ಶಿಗಳಾದ ಪ್ರಿಯದರ್ಶಿನಿ, ಸ್ವಾತಿ, ಶ್ರೀ ಶುಭಂ ಹಾಗೂ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾಲೇಜಿನ ಸಾಂಸ್ಕøತಿಕ ಸಂಚಾಲಕಿ ರತ್ನಮಾಲಾ ಸ್ವಾಗತಿಸಿದರು. ಆಂಗ್ಲವಿಭಾಗದ ಸಹಾಯಕ ಪ್ರಾಧ್ಯಾಪಕಿ ಶರ್ಮಿಳಾ ಹಾರಾಡಿ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕøತಿಕ ಕಾರ್ಯದರ್ಶಿ ರಸಿಕ್ ವಂದಿಸಿದರು.


Spread the love

Exit mobile version