ತೆಂಕನಿಡಿಯೂರು ಪ್ರೌಢಶಾಲೆ ಸುವರ್ಣ ಮಹೋತ್ಸವ: ಮನವಿ ಪತ್ರ ಬಿಡುಗಡೆ
ಉಡುಪಿ: ತೆಂಕನಿಡಿಯೂರು ಪ್ರೌಢಶಾಲೆಯ ಸುವರ್ಣ ಮಹೋತ್ಸವ ಹಾಗೂ ಕಾಲೇಜು ವಿಭಾಗದ ದಶಮಾನೋತ್ಸವ ಸಮಾರಂಭದ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಜರುಗಿತು.
ಮಲ್ಪೆ ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್ ಮನವಿ ಪತ್ರವನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಮತ್ಸ್ಯೋದ್ಯಮಿ ಶೇಖರ್ ಜಿ. ಕೋಟ್ಯಾನ್ ಮಾತನಾಡಿ ನಾವು ಕಲಿತ ಶಾಲಾ ಕಾಲೇಜಿನ ಸೇವೆ ಹಾಗೂ ಅಭಿವೃದ್ಧಿ ಕೆಲಸದಲ್ಲಿ ಕೈಜೋಡಿಸಿದರೆ ದೇವಸ್ಥಾನದ ಜೀರ್ಣೋದ್ಧಾರವನ್ನು ಮಾಡಿದ ಪುಣ್ಯದ ಫಲ ಪ್ರಾಪ್ತಿಯಾಗುತ್ತದೆ. ನಮ್ಮ ಶಾಲೆ, ನಮ್ಮೂರಿನ ಶಾಲೆಯ ಮನೋಭಾವ ನಮ್ಮೆಲ್ಲರಲ್ಲಿ ಬೆಳೆಯಬೇಕು. ಊರಿನ ನಾಗರಿಕಲ್ಲೆರೂ ಈ ಶಾಲೆಯ ಅಭಿವೃದ್ಧಿ ಕೆಲಸದ ಜೊತೆಗೆ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಮಾಡಿ ಸುವರ್ಣ ಅಕ್ಷರದಲ್ಲಿ ಬರೆಯುವ ಮೂಲಕ ಈ ಊರಿನ ಕೀರ್ತಿಯನ್ನು ಬೆಳಗಿಸಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಮಾತನಾಡಿದ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ಈಗಾಗಲೇ ನಾಗರಿಕರಿಂದ ಉತ್ತಮ ಸ್ಪಂದನ ದೊರೆಯುತ್ತಿದೆ ಎಂದರು.
ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಗೋಪಾಲಕೃಷ್ಣ ಶೆಟ್ಟಿ, ಶಾಲಾ ಅಭಿವೃದ್ಧ ಸಮಿತಿಯ ಉಪಾಧ್ಯಕ್ಷ ಸತೀಶ್ ನಾಯ್ಕ್, ತಾಲೂಕು ಪಂಚಾಯತ್ ಸದಸ್ಯ ಧನಂಜಯ್, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸತೀಶ್ ಶೆಟ್ಟಿ, ಹಳೆವಿದ್ಯಾರ್ಥೀ ಸಂಘದ ಅಧ್ಯಕ್ಷ ಭವಾನಿ ಶಂಕರ್ ಲಾಡ್, ದಯಾನಂದ ಶೆಟ್ಟಿ ಕೊಜಕೊಳಿ ಮೊದಲಾದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಸಿದ್ದೇಶ್ವರಪ್ಪ ಪ್ರಸ್ತಾವನೆಗೈದರು. ಸುವರ್ಣ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಅನಿಲ್ ಪಾಲನ್ ಸ್ವಾಗತಿಸಿದರು. ಉಪನ್ಯಾಸಕ ಲಕ್ಷ್ಮೀಕಾಂತ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಗಾಯತ್ರಿ ವಂದಿಸಿದರು.