ತೆಂಕನಿಡಿಯೂರು ಸರಕಾರಿ ಪ್ರೌಢ, ಪಿಯು ಕಾಲೇಜು ಸುವರ್ಣ-ದಶಮಾನೋತ್ಸವ ಸಾಂಸ್ಕೃತಿಕ ಸಂಭ್ರಮ
ಉಡುಪಿ: ಸರಕಾರಿ ಪ್ರೌಢ ಶಾಲೆ ತೆಂಕನಿಡಿಯೂರು ಇದರ ಸುವರ್ಣ ಮಹೋತ್ಸವ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಇದರ ದಶಮಾನೋತ್ಸವ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಜರುಗಿತು.
ಯಶಸ್ವಿ ಮತ್ಸ್ಯೋದ್ಯಮಿ ಸಾಧು ಸಾಲ್ಯಾನ್ ಸರಕಾರಿ ಪ್ರೌಢ ಶಾಲೆ ತೆಂಕನಿಡಿಯೂರು ಇದರ ಸುವರ್ಣ ಮಹೋತ್ಸವ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಇದರ ದಶಮಾನೋತ್ಸವ ಪ್ರಯುಕ್ತ ಆಯೋಜಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನೇರವೇರಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್ ಮಾತನಾಡಿ ದೇಶದ ಅಭಿವೃದ್ದಿಗೆ ಶಿಕ್ಷಣ ಸಂಸ್ಥೆಗಳು ನೀಡುವ ಶಿಕ್ಷಣ ಪೂರಕವಾಗಿರಬೇಕು ಇಂತಹ ಶಿಕ್ಷಣವನ್ನು ಒದಗಿಸುತ್ತಿರುವ ತೆಂಕನಿಡಿಯೂರು ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿದರು.
ಇನ್ನೋರ್ವ ಮುಖ್ಯ ಅತಿಥಿಯಾಗಿ ಆಗಮಿಸಿದ ಕಾಂಚನ್ ಮೋಟಾರ್ಸ್ ಇದರ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ ಗ್ರಾಮಾಂತರ ವಿದ್ಯಾರ್ಥೀಗಳಿಗೆ ನಗರದ ವಿದ್ಯಾರ್ಥಿಗಳೊಂದಿಗೆ ಶಿಕ್ಷಣದಲ್ಲಿ ಸ್ಪರ್ಧಾತ್ಮಕತೆಯನ್ನು ಕಲಿಸುವ ವ್ಯವಸ್ಥೆಯಾಗಬೇಕು ಇದರಿಂದ ಗ್ರಾಮಾಂತರ ಪ್ರದೇಶದ ಮಕ್ಕಳು ಕೂಡ ಉನ್ನತ ಹುದ್ದೆಗಳನ್ನು ಪಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ಮಕ್ಕಳಿಗೆ ಶಿಕ್ಷಣದೊಂದಿಗೆ ನಾಯಕತ್ವ ಗುಣವನ್ನು ಬೆಳೆಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುವರ್ಣ ಮಹೋತ್ಸವ ಮತ್ತು ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಬೆಳ್ಕಳೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್ ಸದಸ್ಯರಾದ ಧನಂಜಯ ಕುಮಾರ್, ಶರತ್ ಕುಮಾರ್, ಉದ್ಯಮಿ, ಕಾರ್ತಿಕ್ ಗ್ರೂಪ್ ಮಲ್ಪೆ ಇದರೆ ಹರಿಯಪ್ಪ ಕೋಟ್ಯಾನ್, ಅಧ್ಯಕ್ಷರು ಶ್ರೀ ಬ್ರಹ್ಮಬೈದರುಗಳ ಗರೋಡಿ ಕಕ್ಕುಂಜೆ ಉದಯ್ ಪೂಜಾರಿ, ತೆಂಕನಿಡಿಯೂರು ಉದ್ಯಮಿ ಶ್ರೀಕಾಂತ್ ಭಟ್, ಡಾ ಸಿದ್ದೇಶ್ವರಪ್ಪ, ಟಿ ಗೋಪಾಲಕೃಷ್ಣ ಶೆಟ್ಟಿ, ಜಯಪ್ರಕಾಶ್ ನಾಯಕ್, ಸತೀಸ್ ಶೆಟ್ಟಿ ಧಾರವಾಡ, ಭವಾನಿ ಶಂಕರ್ ಲಾಡ್, ಅನಿಲ್ ಪಾಲನ್ ಇನ್ನಿತರರು ಉಪಸ್ಥಿತರಿದ್ದರು.