ತ್ಯಾಜ್ಯ ವಾಹನದಲ್ಲಿ ನಾಯಿ ಸಾಗಿಸಿದ ಚಾಲಕನಿಗೆ ಪಾಲಿಕೆಯಿಂದ ಎಚ್ಚರಿಕೆ

Spread the love

ತ್ಯಾಜ್ಯ ವಾಹನದಲ್ಲಿ ನಾಯಿ ಸಾಗಿಸಿದ ಚಾಲಕನಿಗೆ ಪಾಲಿಕೆಯಿಂದ ಎಚ್ಚರಿಕೆ

ಮಂಗಳೂರು: ಸಾಕು ನಾಯಿ ಒಂದನ್ನ ಜೀವಂತವಾಗಿಯೇ ಕಸ ವಿಲೇವಾರಿ ಮಾಡುವ ವಾಹನಕ್ಕೆ ತುಂಬಿಸಿ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿ ವಾಹನದ ಚಾಲಕನಿಗೆ ಪಾಲಿಕೆಯಿಂದ ಎಚ್ಚರಿಕೆ ನೀಡಲಾಗಿದೆ.

ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮೇಯರ್. ಸುಧೀರ್ ಶೆಟ್ಟಿ ಕಣ್ಣೂರು ಅವರು, ಡೊಂಗರಕೇರಿಯ ಮನೆ ಯೊಂದರ ನಾಯಿಯು ತೊಂದರೆ ನೀಡುತ್ತಿದೆ ಎಂದು ಮನೆಯವರು ಅದನ್ನು ತ್ಯಾಜ್ಯ ವಿಲೇ ಮಾಡುವ ವಾಹನಕ್ಕೆ ತುಂಬಿಸಿ ಸಾಗಿಸುತ್ತಿದ್ದ ವೀಡಿಯೋ ಬಹಿರಂಗವಾಗಿ ಪ್ರಾಣಿ ಪ್ರಿಯರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಪ್ರಕರಣದ ಕುರಿತು ಮಂಗಳವಾರ ಪಾಲಿಕೆಯ ಗಮನಕ್ಕೆ ಬಂದಿದ್ದು, ಅದರಂತೆ ವಾಹನದ ಚಾಲಕರನ್ನು ಕರೆದು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ನೀಡಲಾಗಿದೆ ಎಂದಿದ್ದಾರೆ.

“ಆ ಮನೆಯ ಮಾಲಕರು ವಿದೇಶ ದಲ್ಲಿದ್ದು, ಮನೆಯ ಸಾಕು ನಾಯಿ ಸುತ್ತಮುತ್ತಲಿನ ಮನೆಯವರಿಗೆ ತೊಂದರೆ ಕೊಡುತ್ತದೆ ಎಂಬ ಕಾರಣಕ್ಕೆ ಮನೆಯಲ್ಲಿ ವಾಸವಿದ್ದವರು ತ್ಯಾಜ್ಯ ಸಾಗಾಟದ ವಾಹನದವರಿಗೆ ಕರೆ ಮಾಡಿ ಅದನ್ನು ಬೇರೆಡೆ ಸಾಗಿಸುವಂತೆ ತಿಳಿಸಿದ್ದಾರೆ. ಅದರಂತೆ ಅದನ್ನು ಸಾಗಿಸಲಾಗಿದೆ. ಪಾಲಿಕೆಯ ಚಾಲಕನಿಗೂ ಇದು ಮೊದಲ ಅನುಭವ ಆಗಿದ್ದು, ಮುಂದೆ ಇಂತಹ ಕೃತ್ಯ ನಡೆಸದಂತೆ ಆತನ ಸಹಿತ ಪಾಲಿಕೆಯ ಎಲ್ಲ ವಾಹನದ ಚಾಲಕರಿಗೆ ಸೂಚನೆ ನೀಡಲಾಗಿದೆ’ ಎಂದು ಮೇಯರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.


Spread the love
Subscribe
Notify of

0 Comments
Inline Feedbacks
View all comments