Home Mangalorean News Kannada News ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣದ ಪಾಸ್ ಬಗ್ಗೆ ಮಾಹಿತಿ

ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣದ ಪಾಸ್ ಬಗ್ಗೆ ಮಾಹಿತಿ

Spread the love

ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ ಪ್ರಯಾಣದ ಪಾಸ್ ಬಗ್ಗೆ ಮಾಹಿತಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ತುರ್ತು ಕಾರ್ಯಗಳಿಗೆ ಪ್ರಯಾಣಿಸಲು ಬಯಸುವ ಸಾರ್ವಜನಿಕರು https://bit.ly/dkditepass ಮೂಲಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪ್ರಯಾಣದ ಪಾಸ್ ಪಡೆಯಬಹುದಾಗಿದೆ ಎಂದು ದಕ್ಷಿಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

1. ವ್ಯಕ್ತಿ ತನ್ನ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಒಂದು ಬಾರಿ ಮಾತ್ರ ಅಂತರ್ ಜಿಲ್ಲಾ ಪ್ರಯಾಣದ ಪಾಸ್ನ್ನು ಪಡೆಯಬಹುದಾಗಿದೆ.

2. ಸದರಿ ಪ್ರಯಾಣದ ಪಾಸ್ ಏಕಮುಖವಾಗಿದ್ದು, ಈ ಪಾಸ್ ಮೂಲಕ ಮರುಪ್ರಯಾಣಕ್ಕೆ ಅವಕಾಶವಿರುವುದಿಲ್ಲ.

3. ಪಾಸ್ಗಾಗಿ ಅರ್ಜಿ ಸಲ್ಲಿಸುವಾಗ ನಮೂದಿಸಲಾದ ಮೊಬೈಲ್ ಸಂಖ್ಯೆಗೆ ಪಾಸ್ಗೆ ಸಂಬಂಧಿಸಿದ ಲಿಂಕ್ ಮೆಸೇಜ್ ಮೂಲಕ ಬರಲಿದ್ದು, ಈ ಲಿಂಕ್ ಕ್ಲಿಕ್ ಮಾಡಿ ಪ್ರಯಾಣದ ಪಾಸ್ ಪಡೆಯಬಹುದಾಗಿದೆ.

4. ಅಂತರ್ ಜಿಲ್ಲೆಗಳಿಗೆ ಪ್ರಯಾಣಿಸುವ ಸಾರ್ವಜನಿಕರ ವಾಹನದ ಚಾಲಕರಿಗೆ ಪ್ರತ್ಯೇಕ ಪಾಸ್ ದೊರೆಯಲಿದ್ದು, ಸದರಿ ಪಾಸ್ ಮೂಲಕ ವಾಹನ ಚಾಲಕರು ಸಾರ್ವಜನಿಕರನ್ನು ತಲುಪಿಸಿ ಹಿಂತಿರುಗಲು ಅವಕಾಶವಿರುತ್ತದೆ.

5. ಹೊರಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಬಂದು ಲಾಕ್ ಡೌನ್ ಹಿನ್ನಲೆಯಲ್ಲಿ ಹಿಂತಿರುಗಲು ಸಾಧ್ಯವಾಗದಿರುವ ವ್ಯಕ್ತಿಗಳಿಗೆ ಮರಳಿ ತಮ್ಮ ಜಿಲ್ಲೆಗಳಿಗೆ ತೆರಳಲು ಸದರಿ ಪಾಸ್ ಮೂಲಕ ಏಕಮುಖ ಪ್ರಯಾಣಕ್ಕೆ ಅವಕಾಶವಿರುತ್ತದೆ.

ಯಾವುದೇ ಹೆಚ್ಚಿನ ಮಾಹಿತಿಗಳಿಗಾಗಿ ಸಮೀಪದ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಸೂಚಿಸಿಲಾಗಿದೆ


Spread the love

Exit mobile version