ದಕ್ಷಿಣ ಕನ್ನಡ ಹಜ್ಜ್ ಉಮ್ರಾ ಪ್ರೈವೆಟ್ ಟೂರ್ಸ್ ಆರ್ಗನೈಝರ್ಸ್ ಅಸೋಸಿಯೇಶನ್ ಅಸ್ತಿತ್ವಕ್ಕೆ
ಮಂಗಳೂರು: ಪವಿತ್ರ ಹಜ್ಜ್ ಮತ್ತು ಉಮ್ರಾ ಯಾತ್ರಾರ್ಥಿಗಳಿಗೆ ಉತ್ತಮ ಸೇವೆ ಹಾಗೂ ಯಾತ್ರೆಯಲ್ಲಿ ಆಗುವ ತೊಂದರೆಗಳನ್ನು ನಿವಾರಿಸುವ ಸಲುವಾಗಿ ದಕ್ಷಿಣ ಕನ್ನಡ ಹಜ್ಜ್ ಉಮ್ರಾ ಪ್ರೈವೆಟ್ ಟೂರ್ಸ್ ಆರ್ಗನೈಝರ್ಸ್ ಅಸೋಸಿಯೇಶನ್ ಸಂಸ್ಥೆಯನ್ನು ಅಸ್ತಿತ್ವಕ್ಕೆ ತರಳಲಾಗಿದೆ. ಅದಲ್ಲದೆ ಪ್ರೈವೇಟ್ ಟೂರ್ ಓಪರೇಟರ್ಸ್ಗಳ ಮಧ್ಯೆ ಒಗ್ಗಟ್ಟು ಮೂಡಿಸುವುದು ಮತ್ತು ಸಾರ್ವಜನಿಕರಿಗೆ ಪ್ರಾಮಾಣಿಕ ಸೇವೆ ಸಲ್ಲಿಸಿ ನಮ್ಮ ಸಂಸ್ಥೆಗಳ ಮೇಲೆ ವಿಶ್ವಾಸ ಮೂಡಿಸುವುದು ಮುಖ್ಯ ಉದ್ದೇಶವಾಗಿದೆ.
ಇತ್ತೀಚೆಗಿನ ದಿನಗಳಲ್ಲಿ ಕೆಲವೊಂದು ಖಾಸಗಿ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಗಳು ಮತ್ತು ವೈಯುಕ್ತಿಕವಾಗಿ ಕೆಲವರು ಅನಧಿಕೃತವಾಗಿ ಹಜ್ಜ್ ಮತ್ತು ಉಮ್ರಾಕ್ಕೆ ಅತ್ಯಂತ ಕಡಿಮೆ ದರಗಳಲ್ಲಿ ಕೊಂಡೊಯ್ಯುವ ಆಮಿಷ ಒಡ್ಡಿ ಮುಗ್ಧ ಯಾತ್ರಾರ್ಥಿಗಳನ್ನು ಮೋಸ ಮಾಡಿರುವುದರಿಂದ ಜನರು ಪ್ರೈವೇಟ್ ಟೂರ್ಸ್ & ಟ್ರಾವೆಲ್ಸ್ ಸಂಸ್ಥೆಗಳ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿರುವ ಪ್ರಸಂಗ ಎದುರಾಗಿದೆ. ಈ ಸಂಘಟನೆಯ ಮೂಲಕ ಯಾತ್ರಾರ್ಥಿಗಳನ್ನು ವಂಚಿಸುವ ಖಾಸಗಿ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಮತ್ತು ಅವರ ವಿರುದ್ಧ ಹೋರಾಟ ಮಾಡುವ ಸದುದ್ದೇಶವನ್ನು ಕೂಡಾ ಹೊಂದಿದೆ.
ಈ ಸಂಘಟನೆಯ ಮೂಲಕ ಹಜ್ಜ್ ಮತ್ತು ಉಮ್ರಾ ಯಾತ್ರಾರ್ಥಿಗಳಿಗೆ ತುಂಬಾ ಪ್ರಯೋಜನವಾಗಲಿದೆ. ಎಲ್ಲಾ ಅಧಿಕೃತ ಸಂಸ್ಥೆಗಳು ಕೂಡಾ ಸಂಘಟನೆಯೊಂದಿಗೆ ನೋಂದಾಯಿಸುವಂತೆ ಪ್ರೇರೇಪಿಸಿ ಯಾತ್ರಾರ್ಥಿಗಳಿಗೆ ಎಲ್ಲಾ ರೀತಿಯ ಭದ್ರತೆ ಒದಗಿಸುವುದು ಮುಖ್ಯ ಗುರಿಯಾಗಿದೆ. ಈ ಸಂಘಟನೆಯ ಮೂಲಕ ಹಜ್ಜ್ ಮತ್ತು ಉಮ್ರಾ ಯಾತ್ರೆಯ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವ ಸಂಪೂರ್ಣ ಪ್ರಯತ್ನವನ್ನು ಮಾಡಲಾಗುವುದು.