ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ದಾಖಲೆಯ ಹಾಲು ಶೇಖರಣೆ : ರವಿರಾಜ ಹೆಗ್ಡೆ

Spread the love

ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ದಾಖಲೆಯ ಹಾಲು ಶೇಖರಣೆ : ರವಿರಾಜ ಹೆಗ್ಡೆ

ಮಂಗಳೂರು: ಬಂಟ್ವಾಳ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳ ಸಮಾಲೋಚನಾ ಸಭೆಯು ಜುಲೈ 15 ರಂದು ಮಂಗಳೂರಿನ ಡೈರಿ ಸಭಾಂಗಣದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ ದ.ಕ ಹಾಲು ಒಕ್ಕೂಟದ ಅಧ್ಯಕ್ಷರಾದ .ಕೆ ರವಿರಾಜ ಹೆಗ್ಡೆ, ಒಕ್ಕೂಟ ಹಾಲು ಸಂಗ್ರಹಣೆಯಲ್ಲಿ ದಿನಕ್ಕೆ 4.57 ಲಕ್ಷ ಹಾಲು ಸಂಗ್ರಹಿಸುವದರ ಮೂಲಕ ಗರಿಷ್ಟ ಸಾಧನೆಯಾಗಿದ್ದು, ಇದಕ್ಕೆ ಕಾರಣರಾದ ಹಾಲು ಉತ್ಪಾದಕರನ್ನು ಅಭಿನಂದಿಸಿದರು.

ಈ ಸಂಧರ್ಭದಲ್ಲಿ ಒಕ್ಕೂಟದ ಹಾಗೂ ಸಂಘದ ಅಭಿವೃದ್ದಿಗೆ ಮತ್ತು ಸಮರ್ಪಕ ನಿರ್ವಹಣೆಗೆ ಅವಶ್ಯವಿರುವ ವಿಷಯಗಳನ್ನು ಚರ್ಚಿಸಿ ಸೂಕ್ತ ಪರಿಹಾರವನ್ನು ಕಂಡುಕೊಳ್ಳಲಾಯಿತು.

ಕಳೆದ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಹಾಗೂ ರಾಜ್ಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಹೈನುಗಾರರ ಸದಸ್ಯ ಮಕ್ಕಳಿಗೆ ಡೈರಿ ರೈತ ಕಲ್ಯಾಣ ಟ್ರಸ್ಟ್‍ನಿಂದ ಪುರಸ್ಕರಿಸಲಾಯಿತು. ತಾಲೂಕಿನಲ್ಲಿ ಉತ್ತಮ ಸಂಘವಾಗಿ ಆಯ್ಕೆಯಾದ ವಗ್ಗ ಮತ್ತು ರಾಯಿ ಸಂಘಗಳೊಂದಿಗೆ ಉತ್ತಮ ಹೈನುಗಾರರನ್ನು ಗೌರವಿಸಲಾಯಿತು.

ಒಕ್ಕೂಟದ ನಿರ್ದೇಶಕ ಡಾ. ಕೆ.ಎಂ ಕೃಷ್ಣ ಭಟ್ ಸ್ವಾಗತಿಸಿ, ಸುಚರಿತ ಶೆಟ್ಟಿ ವಂದಿಸಿದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ ಸತ್ಯನಾರಾಯಣ್, ನಿರ್ದೇಶಕಿ ವೀಣಾ ರೈ ಉಪಸ್ಥಿತರಿದ್ದರು.


Spread the love