ದಕ ಜಿಲ್ಲಾ ಯುವ ಕಾಂಗ್ರೆಸಿನಿಂದ ಕೇಂದ್ರ ಸರಕಾರದ ವೈಫಲ್ಯ ವಿರುದ್ದ ‘ಭಾರತ ನರಳುತ್ತಿದೆ’ ಅಭಿಯಾನ
ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಸರಕಾರ ಉತ್ತಮ ಆಡಳಿತ ನೀಡಲು ವಿಫಲವಾಗಿದ್ದು, ದಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಈಗಾಗಲೇ ಭಾರತ ನರಳುತ್ತಿದೆ ಎಂಬ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದು ಡಿಸೆಂಬರ್ 9 ಕ್ಕೆ ಸಮಾರೋಪಗಳ್ಳಲಿದೆ ಎಂದು ದಕ್ಷಿಣ ಕನ್ನಡ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳೀದ್ದಾರೆ. ಅವರು ಮಂಗಳವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಅಭಿಯಾನದ ಅಂಗವಾಗಿ ಬೀದಿ ನಾಟಕ, ಮೊಬೈಲ್ ವಾಹನದ ಮೂಲಕ ಎಲ್ ಸಿ ಡಿ ಪರದೆಯಲ್ಲಿ ಎನ್ ಡಿ ಸರಕಾರದ ವೈಫಲ್ಯವನ್ನು ಜನರ ಮುಂದಿಡಲಾಗುವುದು. ಡಿಸೆಂಬರ್ 9 ರಂದು ಯುವ ಕಾಂಗ್ರೆಸ್ ನಾಯಕರು, ಹಿರಿಯ ಕಾಂಗ್ರೆಸ್ ನಾಯಕರು, ಮಂತ್ರಿಗಳು ಜೊತೆಯಾಗಿ ಬೃಹತ್ ಪಂಜಿನ ಮೆರವಣಿಗೆ ನಡೆಸಲಿದ್ದಾರೆ. ಪಂಜಿನ ಮೆರವಣಿಗೆಯು ಲಾಲ್ ಬಾಗ್ ನಿಂದ ಆರಂಭವಾಗಿ ಬಲ್ಮಠ ಮೈದಾನದಲ್ಲಿ ಸಮಾಪನಗೊಳ್ಳಲಿದೆ. ಮೂರು ವರ್ಷದ ಹಿಂದೆ ಬಿಜೆಪಿ ನೇತೃತ್ವದ ನರೇಂದ್ರ ಮೋದಿಯವರು ಹಲವಾರು ಆಶ್ವಾಸನೆಗಳನ್ನು ಜನತೆಗೆ ನೀಡಿದ್ದು, ಅದನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಪೂರ್ವ ತಯಾರಿಯಿಲ್ಲದೆ ನೋಟ್ ಅಮಾನ್ಯಿಕರಣ ನಡೆಸುವುದರೊಂದಿಗೆ ಬಡವರಿಗೆ ಸಮಸ್ಯೆಯನ್ನು ತಂದೊಡಿದ್ದಾರೆ. ಜಿಎಸ್ ಟಿಯ ಪರಿಣಾಮ ದೇಶದ ಅರ್ಥವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಡಿಸೇಲ್, ಪೆಟ್ರೋಲ್, ಗ್ಯಾಸ್ ಬೆಲೆ ಏರಿಕೆಯಿಂದ ಮಧ್ಯಮ ವರ್ಗ ಮತ್ತು ಬಡವರು ವಿವಿಧ ರೀತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜಿಎಸ್ ಟಿಯ ಪರಿಣಾಮವಾಗಿ ಪ್ರತಿಯೊಂದು ವಸ್ತುಗಳು ದುಬಾರಿಯಾಗಿದೆ.
ಕಳೆದ ವರ್ಷ ನೋಟ್ ಅಮಾನ್ಯೀಕರಣದಿಂದಾಗಿ ಹಲವಾರು ಜನರು ಸಮಸ್ಯೆ ಅನುಭವಿಸಿದ್ದು, ಜನತೆ ಒಂದು ಹೊತ್ತಿನ ಊಟಕ್ಕಾಗಿ ಸಮಸ್ಯೆ ಅನುಭವಿಸಿದ್ದರು. ತಾವು ಕಷ್ಟಪಟ್ಟು ಸಂಪಾದಿಸಿ ಮನೆಯನ್ನು ಪಡೆಯಲು ಗಂಟೆಗಟ್ಟಲೆ ಸಾಲಿನಲ್ಲಿ ನಿಂತು 150 ಕ್ಕೂ ಅಧಿಕ ಮಂದಿ ತಮ್ಮ ಜೀವವನ್ನೇ ಕಳೆದುಕೊಂಡಿದ್ದಾರೆ. ನರೇಂದ್ರ ಮೋದಿಯರು ನೋಟು ಅಮಾನ್ಯಿಕರಣದಿಂದಾಗಿ ಭೃಷ್ಟಾಚಾರ, ಭಯೋತ್ಪಾದಕತೆ, ನಕ್ಸಲ್ ಕಾರ್ಯಚರಣೆಗಳು ನಿಲ್ಲಲಿವೆ ಎಂದಿದ್ದರು ಆದರೆ ಪ್ರತಿನಿತ್ಯ ಗಡಿಯಲ್ಲಿ ಯೋಧರು ಸಾವನಪ್ಪುತ್ತಿದ್ದಾರೆ. ಒಟ್ಟಾರೆಯಾಗಿ ಎನ್ ಡಿ ಎ ಸರಕಾರ ಚುನಾವಣೆಯ ಮೊದಲು ನೀಡಿದ ಭರವಸೆಗಳನ್ನು ಪೋರೈಸಲು ವಿಫಲಗೊಂಡಿದೆ ಎಂದರು.
ಸುಹೈಲ್ ಕಂದಕ್, ವರುಣ್ ರಾಜ್ ಅಂಬಟ್, ಲುಕ್ ಮಾನ್ ಬಂಟ್ವಾಳ, ಶೋಯೆಬ್, ಸಮದ್, ಕಿರಣ್, ಪ್ರಸಾದ್ ಮಲ್ಲಿ ಹಾಗೂ ಇತರರು ಉಪಸ್ಥಿತರಿದ್ದರು.