ದಕ ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ

Spread the love

ದಕ ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮ0ಗಳೂರು : ಕ್ರೀಡೆ, ಸಾಂಸ್ಕøತಿ ಹಾಗೂ ಸಮುದಾಯ ಅಭಿವೃಧ್ಧಿ ಕ್ಷೇತ್ರಗಳಲ್ಲಿ 2016-17ನೇ ಸಾಲಿನಲ್ಲಿ ಉತ್ತಮ ಕಾರ್ಯಚಟುವಟಿಕೆಗಳನ್ನು ನಿರ್ವಹಿಸಿರುವ ಯುವಜನರಿಗೆ ಹಾಗೂ ನೊಂದಾಯಿತ ಯುವಕ/ಯುವತಿ ಸಂಘಗಳಿಗೆ ಜಿಲ್ಲಾ ಯುವ ಪ್ರಶಸ್ತಿಯನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಯುವಕ:ಯವತಿಯರು 15 ರಿಂದ 35 ವಯೋಮಿತಿಯೊಳಗಿನವರಾಗಿರಬೇಕು (2017 ಮಾರ್ಚ್ 31ಕ್ಕೆ 35 ವರ್ಷಗಳು ಮೀರಿರಬಾರದು) ವೈಯಕ್ತಿಕ ಮತ್ತು ಸಾಂಘಿಕ ಪ್ರಸ್ತಾವನೆಯನ್ನು ತಯಾರಿಸುವಾಗ ದಿನಾಂಕ: 01-04-2016 ರಿಂದ 31-03-2017ರವರೆಗೆ ಯುವಕ/ಯುವತಿ ಮಂಡಲ ಹಾಗೂ ಯುವಕ/ಯುವತಿಯರು ಕೈಗೊಂಡಿರುವ ಸಾಧನೆಗಳನ್ನು ಮಾತ್ರ ಪರಿಗಣಿಸಲಾಗುವುದು.

ಈ ಅವಧಿಯಲ್ಲಿ ಕಾರ್ಯಕ್ರಮ ನಡೆಸಿದ ಅಥವಾ ಸಹಕರಿಸಿದ ಬಗ್ಗೆ ಕಾರ್ಯಕ್ರಮದ ದಿನಾಂಕ, ಭಾವಚಿತ್ರ, ಪತ್ರಿಕಾ ತುಣುಕು, ಆಮಂತ್ರಣ ಪತ್ರಿಕೆ, ಇತ್ಯಾದಿಗಳ ಮೂಲ ಪ್ರತಿಗಳನ್ನು ಎ-4 ಅಳತೆಯಲ್ಲಿ ಸಲ್ಲಿಸಬೇಕು. ಸ್ಲೈಡ್ ಹಾಗೂ ವಿಡಿಯೋಗಳ ದಾಖಲೆಗಳನ್ನು ಒದಗಿಸಬೇಕು.

ವೈಯಕ್ತಿಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಯುವಕ/ಯುವತಿಯರು ಯಾವುದೇ ಕ್ರಿಮಿನಲ್ ಮೊಕದ್ದಮೆಗಳಿಲ್ಲದಿರುವ ಬಗ್ಗೆ ಪೊಲೀಸ್ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ, ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳನ್ನು ಸಲ್ಲಿಸಬೇಕು. ಅರ್ಜಿದಾರರು/ಯುವ ಸಂಘಗಳು ಇಲಾಖೆಯು ಆಯ್ಕೆ ಮಾಡಿರುವ ಸಮುದಾಯ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಿರತಕ್ಕದ್ದು.

ಅರ್ಜಿ ಸಲ್ಲಿಸಲು ಆಸಕ್ತಿ ಇರುವ ಯುವಕ/ಯುವತಿಯರು ತಾಲೂಕು ಪಂಚಾಯತ್‍ನಲ್ಲಿರುವ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಧಿಕಾರಿಗಳು ಅಥವಾ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳ ಕ್ರೀಡಾಂಗಣ, ಮಂಗಳೂರು ಇವರಿಂದ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು ಪಡೆಯಲು ತಿಳಿಸಿದೆ.

ಭರ್ತಿ ಮಾಡಿದ ಅರ್ಜಿ ನಮೂನೆ ಹಾಗೂ ದಾಖಲೆಗಳನ್ನು ಎ. 30 ರೊಳಗೆ ಸಲ್ಲಿಸುವಂತೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಇವರ ಪ್ರಕಟಣೆ ತಿಳಿಸಿದೆ.


Spread the love