ದಕ ಜಿಲ್ಲೆಯಲ್ಲಿ ಕೊರೋನಾ ಗೆ 20 ಬಲಿ – ಸುಳ್ಯದ ವೃದ್ಧ ಮಹಿಳೆ ಸಾವು
ಮಂಗಳೂರು: ಕೊರೋನಾ ಮಹಾಮಾರಿಗೆ ದಕ ಜಿಲ್ಲೆಯಲ್ಲಿ ಸಾವನಪ್ಪುತ್ತಿರುವವರ ಸಂಖ್ಯೆ ಏರುತ್ತಿದ್ದು ಶನಿವಾರ ಮತ್ತೆ ಪುನಃ ಆಸ್ಪತ್ರೆಗೆ ದಾಖಲಾಗಿದ್ದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಇದರೊಂದಿಗೆ ಕೊರೋನಾ ದಿಂದ ಜಿಲ್ಲೆಯಲ್ಲಿ ಸಾವನಪ್ಪಿದವರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಅಸೌಖ್ಯದಿಂದ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿ, ಹೃದಯಾಘಾತದಿಂದ ಮೃತಪಟ್ಟ ಸುಳ್ಯದ ಕೆರೆಮೂಲೆ ನಿವಾಸಿ ವೃದ್ಧೆಯ ಕೊರೋನ ಪರೀಕ್ಷೆಯ ವರದಿ ಪಾಸಿಟಿವ್ ಬಂದಿದ್ದು ಮೃತರ ಸಂಖ್ಯೆ 20ಕ್ಕೆ ಏರಿಕೆಯಾದಂತಾಗಿದೆ.