ದಕ ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ನೀರಿಕ್ಷೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಂಭವಿದ್ದು, ಸಮುದ್ರದಲ್ಲಿ ಸುಮಾರು 3 ರಿಂದ 4 ಮೀಟರ್ ಎತ್ತರದ ಭಾರಿ ಗಾತ್ರದ ಅಲೆಗಳು ಏಳುವ ಸಂಭವ ಇರುವುದರಿಂದ ಮೀನುಗಾರರು ಮೀನುಗಾರಿಕೆ ತೆರಳದಂತೆ ದಕ ಜಿಲ್ಲಾಧಿಕಾರಿ ಸಶಿಕಾಂತ್ ಸೆಂಥಿಲ್ ಸೂಚನೆ ನೀಡಿದ್ದಾರೆ.
ಶಿರಾಡಿ ಮತ್ತು ಸಂಪಾಜೆ ಘಾಟಿಗಳಲ್ಲಿ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರವನ್ನು ನಿರ್ಬಂಧಿಸಿದ್ದು, ಚಾರ್ಮಾಡಿ ಘಾಟಿಯ ಮಾರ್ಗದಲ್ಲಿ ವಾಹನ ಸವಾರರು ಸಂಚರಿಸಲು ಸೂಚಿಲಾಗದೆ. ಜಿಲ್ಲೆಯ ನೇತ್ರಾವತಿ, ಕುಮಾರಧಾರ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶದ ಜನರು ಎತ್ತರದ ಪ್ರದೇಶಗಳಿಗೆ ಸ್ಥಳಾಂತವಾಗುವಂತೆ ಅವರು ಸೂಚನೆ ನೀಡಿದ್ದಾರೆ.
ಗುರುವಾರ ಎಂದಿನಂತೆ ಶಾಲಾ ಕಾಲೇಜುಗಳು ನಡೆಯಲಿದ್ದು, ಮಳೆಯ ಪ್ರಮಾಣ ಕಂಡು ಆಯಾ ತಾಲೂಕಿನ ತಹಶೀಲ್ದಾರರು ರಜೆ ಘೋಷಣೆ ಮಾಡುವಂತೆ ಅವರು ಆದೇಶದಲ್ಲಿ ಸೂಚನೆ ನೀಡಿದ್ದು ಯಾವುದೇ ಅಪಾಯ ಸಂಭವಿಸಿದ್ದಲ್ಲಿ ಟೋಲ್ ಫ್ರೀ ಸಂಖ್ಯೆ 1077 ಕ್ಕೆ ಸಂಪರ್ಕಿಸಬಹುದು