ದಕ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ: ಕೊರೋನಾ ವಿಚಾರದಲ್ಲಿ ಇರುವ ನಿರ್ಲಕ್ಷ್ಯತನವನ್ನು ತೋರಿಸುತ್ತಿದೆ – ಯುವ ಜೆಡಿಎಸ್ ಅಧ್ಯಕ್ಷ ಅಕ್ಷಿತ್ ಸುವರ್ಣ
ಮಂಗಳೂರು: ಜಿಲ್ಲೆಯಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದರೂ ಕೂಡ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇತರ ಶಾಸಕರು ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಅವರ ಕೊರೋನಾ ವಿಚಾರದಲ್ಲಿ ಇರುವ ನಿರ್ಲಕ್ಷ್ಯತನವನ್ನು ತೋರಿಸುತ್ತಿದೆ ಎಂದು ದಕ ಜಿಲ್ಲಾ ಯುವ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಹೇಳಿದ್ದಾರೆ.
ಪ್ರಸ್ತುತ ಜಿಲ್ಲೆ ದಕ ಆರೆಂಜ್ ಝೋನ್ ನಲ್ಲಿದ್ದು 9 ಮಂದಿ ಕೊರೋನಾ ಪೀಡಿತರು ಚಿಕಿತ್ಸೆ . ಪಡೆಯುತ್ತಿದ್ದು ಮಂಗಳೂರು ನಗರ ಹಾಗೂ ಜಿಲ್ಲೆಯ ಎರಡು ಪ್ರದೇಶಗಳಾದ ಬೋಳೂರು ಮತ್ತು ಶಕ್ತಿನಗರವನ್ನು ಸೀಲ್ ಡೌನ್ ಮಾಡಿದರೂ ಕೂಡ , ಜಿಲ್ಲಾಡಳಿತ ಮೇ 4 ರಿಂದ ಜಿಲ್ಲೆಯಾದ್ಯಂತ ಲಾಕ್ ಡೌನ್ ನಿಯಮ ಸಡಿಲಿಸಿದ್ದು ಬೆಳಿಗ್ಗೆ 7 ರಿಂದ ಸಾಯಂಕಾಲ 7 ವರೆಗೆ ವಾಹನ ಓಡಾಟ ಹಾಗು ಇತರ ವ್ಯಾಪಾರ ವಹಿವಾಟುಗಳಿಗೆ ಅನುಮತಿ ನೀಡಿದ್ದು ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ.
ಅಲ್ಲದೆ ಪಕ್ಕದ ಉಡುಪಿ ಜಿಲ್ಲೆ ಹಸಿರು ವಲಯದಲ್ಲಿ ಇದ್ದರೂ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಲಾಕ್ ಡೌನ್ ಸಡಿಲಿಕೆ ಕೊಟ್ಟಿರುತ್ತಾರೆ ಪಾಸಿಟಿವ್ ಕೇಸ್ ಗಳು ಸಂಪೂರ್ಣ ಮುಕ್ತವಾದ ಜಿಲ್ಲೆ ಕೂಡ ತನ್ನ ಎಚ್ಚರಿಕೆಯನ್ನು ವಹಿಸುತ್ತಿದ್ದರೆ ದಕ ಜಿಲ್ಲೆ ಸಂಪೂರ್ಣವಾಗಿ ಜನರನ್ನು ಅಪಾಯಕ್ಕೆ ತಳ್ಳುತ್ತಿದೆ. ಇಂತಹ ನಿರ್ಲಕ್ಷ ನಡೆಯಿಂದ ನಮ್ಮ ಜಿಲ್ಲೆ ಮಗದೊಮ್ಮೆ ಕೆಂಪು ವಲಯಕ್ಕೆ ಹೋಗಲು ದಿನಗಳು ದೂರವಿಲ್ಲ. ಕೊರೋನಾ ನಿಯಂತ್ರಣಕ್ಕಾಗಿಯೇ ಲಾಕ್ ಡೌನ್ ವಿಧಿಸಿರುವುದನ್ನು ಬಿಜೆಪಿಯ ಶಾಸಕರು ಸಚಿವರೇ ಮರೆತಿರುವುದು ವಿಪರ್ಯಾಸವೇ ಸರಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಜಾತ್ಯಾತೀತ ಜನತಾದಳ ಅಧ್ಯಕ್ಷ ಅಕ್ಷಿತ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.