ದಕ ಜಿಲ್ಲೆಯಲ್ಲಿ ಶನಿವಾರ 237 ಕೊರೋನಾ ಪಾಸಿಟಿವ್ ಪತ್ತೆ
ಮಂಗಳೂರು: ದಕ ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 237 ಜನರಿಗೆ ಕೋವಿಡ್–19 ಸೋಂಕು ಇರುವುದು ದೃಢವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3,311ಕ್ಕೆ ಏರಿಕೆಯಾಗಿದೆ.
ಈ ಮಧ್ಯೆ ಶನಿವಾರ ಮತ್ತೆ 109 ಮಂದಿ ಗುಣಮುಖರಾಗಿದ್ದು, ಇದುವರೆಗೆ ಒಟ್ಟು 1387 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ. ಜಿಲ್ಲೆಯಲ್ಲಿ 1,848 ಸಕ್ರಿಯ ಪ್ರಕರಣಗಳಿವೆ.