Home Mangalorean News Kannada News ದಕ ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ – ಮತ್ತೆ ಒಂದೇ ದಿನ 97 ಪಾಟಿಸಿವ್...

ದಕ ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ – ಮತ್ತೆ ಒಂದೇ ದಿನ 97 ಪಾಟಿಸಿವ್ ದೃಢ

Spread the love

ದಕ ಜಿಲ್ಲೆಯಲ್ಲಿ ಸಾವಿರದ ಗಡಿ ದಾಟಿದ ಕೊರೋನಾ – ಮತ್ತೆ ಒಂದೇ ದಿನ 97 ಪಾಟಿಸಿವ್ ದೃಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸಾವಿರದ ಗಡಿ ದಾಟಿದ್ದು ಶುಕ್ರವಾರ ಒಟ್ಟು 97 ಕೋವಿಡ್ -19 ಪಾಸಿಟಿವ್ ಪ್ರಕರಣಗಳು ದೃಢಗೊಂಡಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1012ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಶುಕ್ರವಾರ ಸ್ವೀಕೃತವಾದ ವರದಿಯಲ್ಲಿನ ಸೋಂಕಿತರ ಪೈಕಿ ಮೂವರು ಸೌದಿ ಅರೇಬಿಯ, ದುಬೈನಿಂದ ಬಂದವರು. ಐಎಲ್‌ಐ 28, ಮೂಲ ಪತ್ತೆಯಾಗದ 41, ಪ್ರಾಥಮಿಕ ಸಂಪರ್ಕದಲ್ಲಿದ್ದ 25 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲ ಸೋಂಕಿತರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ

ಶುಕ್ರವಾರ 11 ವರ್ಷದ ಬಾಲಕಿ ಸಹಿತ 26 ಮಂದಿ ಕೋವಿಡ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದಾರೆ. ಇದರೊಂದಿಗೆ 503 ಮಂದಿ ಇದುವರೆಗೆ ಸೋಂಕು ಮುಕ್ತರಾದಂತಾಗಿದೆ.

ಶುಕ್ರವಾರ ಒಟ್ಟು 425 ವರದಿಗಳು ಪ್ರಯೋಗಾಲಯದಿಂದ ಬಂದಿದ್ದು, ಅವುಗಳಲ್ಲಿ 97 ಪಾಸಿಟಿವ್ ಆಗಿದ್ದರೆ, ಉಳಿದೆಲ್ಲವೂ ನೆಗೆಟಿವ್ ಆಗಿವೆ. ಹೊಸದಾಗಿ 280 ಮಂದಿಯ ಸ್ಯಾಂಪಲ್‌ನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಒಟ್ಟು 427ಮಂದಿಯ ವರದಿ ಬರಲು ಬಾಕಿಯಿದೆ.


Spread the love
1 Comment
Inline Feedbacks
View all comments
Anand
4 years ago

Please don’t highlight total infected people.. They are are cured and back home. People get unnecessary nervous. Just give update how many cured each day. How many infected and how many are in quarantine.

wpDiscuz
Exit mobile version