ದಕ ಸಂಸದರಿಗೆ ಚಪ್ಪಲಿಯಲ್ಲಿ ಹೊಡೆಯಿರಿ, ಮಿಥುನ್ ರೈ ಮಾತಿಗೆ ಬಿಜೆಪಿ ಆಕ್ರೋಶ
ಮಂಗಳೂರು: ಸುರತ್ಕಲ್ ಟೋಲ್ ಗೇಟ್ನಲ್ಲಿ ಮಂಗಳವಾರ ಸ್ಥಳೀಯ ಖಾಸಗಿ ವಾಹನಗಳಿಗೆ ಟೋಲ್ ಶುಲ್ಕ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರು ಸಂಸದ ಅವರಿಗೆ ಚಪ್ಪಲಿಯಿಂದ ಹೊಡೆಯಿರಿ ಎನ್ನುವ ಮಾತನ್ನು ಹೇಳಿದ್ದು, ಬಿಜೆಪಿ ಪಕ್ಷವು ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಮಂಗಳವಾರ ಸುರತ್ಕಲ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಳಿ ಪ್ರಧಾನ ಕಾರ್ಯದಶರ್ಿ ಅಶೋಕ್ ಕೃಷ್ಣಾಪುರ ಸುರತ್ಕಲ್ ಟೋಲ್ ಗೇಟ್ ಅವೈಜ್ಞಾನಿಕ ಹಾಗೂ ಅಸಮರ್ಪಕವಾಗಿದೆ ಎಂದು ಕಾಂಗ್ರೆಸ್ನ ಮಿಥುನ್ ರೈ ಹೇಳುತ್ತಿದ್ದಾರೆ. ಆದರೆ ಅವರು ಅರ್ಥ ಮಾಡಿಕೊಳ್ಳಬೇಕಿದೆ ಸುರತ್ಕಲ್ ಟೋಲ್ ಗೇಟ್ನ ಮೂಲ ಕಾರಣಕರ್ತ ಅಂದಿನ ಯುಪಿಎ ಅವಧಿಯಲ್ಲಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ಚಾಲನೆ ನೀಡಿದ್ದರು.
ಈಗ ಟೋಲ್ಗೇಟ್ ವಿರುದ್ಧ ಪ್ರತಿಭಟನೆಯಲ್ಲಿ ನಾವು ರಾಜಕೀಯ ಮಾಡುತ್ತಿದ್ದೇವೆಂದು ಹೇಳುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿಯೇ ಮಿಥುನ್ ರೈ ಅವರಿಗೆ ಜನರು ವೋಟಿನ ಮೂಲಕ ಚಪ್ಪಲಿ ಏಟು ನೀಡಿದ್ದಾರೆ. ಬಹುಶಃ ಅವರು ಚುನಾವಣೆಯಲ್ಲಿ ಸೋತ ಕಾರಣದಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಈ ರೀತಿಯಾಗಿ ಮಾತುಗಳನ್ನಾಡುತ್ತಿದ್ದಾರೆ. ಓರ್ವ ರಾಜಕೀಯ ಮುಖಂಡನಾಗಿ ಸಂಸದರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎನ್ನುವ ಮಾತಿನ ಮೂಲಕ ತಮ್ಮ ಯೋಗ್ಯತೆಯನ್ನು ಜನತೆಗೆ ತೋರಿಸಿಕೊಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.
ಬಿಜೆಪಿ ಪಕ್ಷವು ಟೋಲ್ ಗೇಟ್ ಕುರಿತಾಗಿ ದೃಡ ನಿಲುವು ಹೊಂದಿದ್ದು ಸ್ಥಳಿಯ ಖಾಸಗಿ ವಾಹನಗಳಿಗೆ ಟೋಲ್ ಶುಲ್ಕ ವಿಧಿಸದಂತೆ ಮಾಡುವ ಪ್ರಯತ್ನವನ್ನು ಮಾಡಿಯೇ ತೀರುತ್ತದೆ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಲ್ಕಿ ಮೂಡಬಿದ್ರೆ ಬಿಜೆಪಿಯ ಈಶ್ವರ್ ಕಟೀಲ್, ದಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ವಿಠಲ್ ಸಾಲ್ಯಾನ್, ಲೋಕೇಶ್ ಬೊಳ್ಳಾಜೆ, ಮಹಾಶಕ್ತಿ ಕೇಂದ್ರ ಪ್ರಮುಖ ವಚನ್ ಮಣೈ ಉಪಸ್ಥಿತರಿದ್ದರು.
This guy is instigating violence. He should be booked for provoking people.